ಬೆಂಗಳೂರು ದಂಪತಿಗೆ ಕಾರು ಗುದ್ದಿಸಿದ್ದ ಸ್ಯಾಂಡಲ್‌ವುಡ್ ನಟ ನಾಗಭೂಷಣ್ ಅವರನ್ನು ಸ್ಟೇಷನ್ ಬೇಲ್ ಆಧಾರದಲ್ಲಿ ಬಂಧನದಿಂದ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು (ಅ.01): ಸ್ಯಾಂಡಲ್‌ವುಡ್ ನಟ ನಾಗಭೂಷಣ್ ಶನಿವಾರ ರಾತ್ರಿ ಕಿಯಾ ಕಾರಿನಲ್ಲಿ ವೇಗವಾಗಿ ಬಂದು ದಂಪತಿಗೆ ಗುದ್ದಿದ್ದು, ಪತ್ನಿ ಮೃತಪಟ್ಟರೆ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ರಾತ್ರಿಯಿಂದ ಪೊಲೀಸರ ಬಂಧನದಲ್ಲಿ ನಟ ನಾಗಭೂಷಣ್‌ನನ್ನು ಸ್ಟೇಷನ್ ಬೇಲ್ ಆಧಾರದಲ್ಲಿ ಬಂಧನದಿಂದ ಬಿಡುಗಡೆ ಮಾಡಲಾಗಿದೆ.
ಶನಿವಾರ ರಾತ್ರಿ ರಾಜರಾಜೇಶ್ವರಿ ನಗರದ ಸ್ನೇಹಿತನ ಮನೆಯಿಂದ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಇನ್ನು ಘಟನೆ ನಡೆದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಅಪಘಾತದ ಮಾಡಿದ ಕಾರಣದಿಂದ ನಟನನ್ನು ಕುಮಾರಸ್ವಾಮಿ ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದರು. ಇದಾದ ನಂತರ, ಮೃತಳ ಮಗ ನೀಡಿದ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 279 ಅತಿ ವೇಗದ ಚಾಲನೆ, ಐಪಿಸಿ ಸೆಕ್ಷನ್ 337 ನಿರ್ಲಕ್ಷ್ಯತನದ ಚಾಲನೆ ಹಾಗೂ ಸೆಕ್ಷನ್ 304ಎ ನಿರ್ಲಕ್ಷ್ಯ ಚಾಲನೆಯಿಂದ ಸಾವು ಕುರಿತ ಪ್ರಕರಣಗಳ ಅಡಿಯಲ್ಲಿ ನಟ ನಾಗಭೂಷಣ್ ವಿರುದ್ಧ ದೂರು ದಾಖಲಿಸಲಾಗಿತ್ತು. ರಾತ್ರಿ ಪೂರ್ತಿ ಜೈಲಿನಲ್ಲಿ ಕಳೆದ ನಟ ನಾಗಭೂಷಣ್ ಬೆಳಗ್ಗೆ ಸ್ಟೇಷನ್ ಬೇಲ್ ಆಧಾರದಲ್ಲಿ ಬಂಧನದಿಂದ ಮುಕ್ತಿ ಪಡೆದಿದ್ದಾರೆ.
ಸ್ಯಾಂಡಲ್‌ವುಡ್ ನಟ ನಾಗಭೂಷಣ್ ಕಾರು ಅಪಘಾತ: ಮಹಿಳೆ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ
ನಾಗಭೂಷಣ್ ಚೆನ್ನಾಗಿ ಆಕ್ಟಿಂಗ್ ಮಾಡಿದ್ದಾನೆಂದು ಹೇಳಿದ ತಾಯಿ ಅವರ ಕಾರಿನಿಂದಲೇ ಸಾವು: ಮೃತ ಪ್ರೇಮ ಮಗಳು ಯಶಸ್ವಿನಿ ಮಾಧ್ಯಮಗಳೊಂದಿಗೆ ಮಾತನಾಡಿ, ನಿನ್ನೆ ರಾತ್ರಿ ಘಟನೆಯಾದಾಗ ನಾನು ಸ್ಥಳದಲ್ಲಿದ್ದೆನು. ಅಪಾರ್ಟ್ ಮೆಂಟ್ ಮುಂಭಾಗ ನಮ್ಮ ತಂದೆ ತಾಯಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಜೋರಾಗಿ ಸೌಂಡ್ ಬಂತು. ಹೋಗಿ ನೋಡುದ್ರೆ ಅಪಘಾತವಾಗಿತ್ತು. ನಾಗಭೂಷಣ್ ಸಹ ಆಸ್ಪತ್ರೆಗೆ ಬಂದಿದ್ದರು. ಓವರ್ ಸ್ಪಿಡಲ್ಲಿ ಬಂದು ಗುದ್ದಿದ್ದಾನೆ. ನನ್ನ ತಾಯಿ ನಾಗಭೂಷಣ್ ಸಿನಿಮಾ ನೋಡ್ತಿದ್ದರು. ಚೆನ್ನಾಗಿ ಆಕ್ಟ್ ಮಾಡ್ತಾನೆ ಅಂತ ಹೇಳ್ತಿದ್ದರು. ಈಗ ಅವನೇ ಹೀಗ್ ಮಾಡಿದ್ದಾನೆ. ನಮ್ಮ ತಂದೆ ತಾಯಿ ತುಂಬಾ ಕಷ್ಟ ಪಟ್ಟು ಸಾಕಿದ್ದಾರೆ. ಕಷ್ಟ ಪಟ್ಟು ನಂತರ ಅಣ್ಣಾ ಈಗ ದುಡಿಯಲು ಪ್ರಾರಂಭ ಮಾಡಿದ್ದನು. ಇನ್ಮೇಲೆ ಚೆನ್ನಾಗಿರಬಹುದು ಅಂತ ಅನ್ಕೊಂಡಿದ್ದೆವು, ಆದರೆ ಈಗ ನೋಡುದ್ರೆ ಹೀಗಾಗಿದೆ ಎಂದು ಮೃತಳ ಪುತ್ರಿ ಅಳಲು ತೋಡಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ಬೆಂಗಳೂರು, ಕನ್ನಡಿಗರ ಬಗ್ಗೆ ನಿಂದನೆ: ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು..!
ಕಾರು ಖರೀದಿಸಿ ಒಂದೂವರೆ ವರ್ಷದಲ್ಲಿ ಅಪಘಾತ: ಕಳೆದ ವರ್ಷದ ಮಾರ್ಚ್‌ನಲ್ಲಿ ಹೊಸ ಕಿಯಾ ಕಾರು ಖರೀದಿ ಮಾಡಿದ್ದ ನಟ ನಾಗಭೂಷಣ್ ತನ್ನ ಸ್ನೇಹಿತ ಡಾಲಿ ಧನಂಜಯನೊಂದಿಗೆ ನಿಂತು ಫೋಟೋಗೆಪೋಸ್ ನೀಡಿದ್ದರು. ಈ ವೇಳೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ವಿಚಾರಗಳನ್ನು ಬರೆದುಕೊಂಡಿದ್ದರು. ತಮ್ಮ ಇನ್ಸ್‌ಸ್ಟಾಗ್ರಾಮ್ ಪುಟದಲ್ಲಿ "ಸಣ್ಣ ಸಣ್ಣ ಖುಷಿಗಳು, ಸಣ್ಣ ಖುಷಿಯನ್ನು ಹಬ್ಬವಾಗಿಸಿದ ಗೆಳೆಯರು. ಶೋ ರೂಮ್ ಅವರು ಒಳ್ಳೆಯ ದಿನ ಹೇಳಿ ಕಾರ್ ಡೆಲಿವರಿಗೆ ಅಂತ ಹೇಳಿದರು. ಅಪ್ಪು ಸರ್ ಹುಟ್ಟುಹಬ್ಬಕ್ಕಿಂತ ಒಳ್ಳೆಯ ದಿನ ಯಾವುದಿದೆ. ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಜೀವ. ನನ್ನ ಹುಟ್ಟು ಹಬ್ಬಕ್ಕೆ ನನಗೆ ಫೋನ್ ಮಾಡಿ ಸರ್ಪ್ರೈಸ್ ನೀಡಿದ್ದರು. ಅವರ ಹುಟ್ಟುಹಬ್ಬಕ್ಕೆ ನನಗೆ ನಾನೇ ಕೊಂಡುಕೊಂಡ ಉಡುಗೊರೆ. ನನ್ನ ಜೀವನದ ಎರಡನೇ ವಾಹನ ಇದು. ಇಂಜಿನಿಯರಿಂಗ್ ಸೇರುವಾಗ ಅಮ್ಮ ಸೈಕಲ್ ಕೊಡಿಸಿದ್ದರು. ಸೈಕಲ್ ಟು ಸೆಲ್ಟೋಸ್. Thank you @naarakia Motors, ಈ ದಿನವೇ ಕೊಟ್ಟಿದ್ದಕ್ಕೆ. ಕಾಸು ಕಡಿಮೆಯಾದಾಗ ಸಾಲ ಕೊಟ್ಟ ಎಸ್‌ಬಿಐ ಬ್ಯಾಂಕ್ ನವರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದರು.