Swiggy, Dunzo ಸೋಗಲ್ಲಿ ಮನೆ ಬಾಗಿಲಿಗೇ ಡ್ರಗ್ಸ್‌..!

By Kannadaprabha News  |  First Published Oct 23, 2021, 12:09 PM IST

*  ಡೆಲಿವರಿ ಬಾಯ್‌ ವೇಷದಲ್ಲಿ ಡ್ರಗ್‌ ಪೂರೈಕೆ
*  60 ಲಕ್ಷ ಮೌಲ್ಯದ ಡ್ರಗ್‌ ವಶ
*  ವೈದ್ಯರು, ವಕೀಲರ ಹೆಸರಲ್ಲಿ ಡ್ರಗ್‌ ಪಾರ್ಸೆಲ್‌
 


ಬೆಂಗಳೂರು(ಅ.23):  ಗ್ರಾಹಕರ ಮನೆ ಬಾಗಿಲಿಗೆ ಆಹಾರ ಹಾಗೂ ಉಡುಗೊರೆ ನೆಪದಲ್ಲಿ ಸ್ವಿಗ್ಗಿ(Swiggy) ಹಾಗೂ ಡನ್ಜೋ(Dunzo) ಡೆಲಿವರಿ ಬಾಯ್‌ಗಳ ಸೋಗಿನಲ್ಲಿ ಡ್ರಗ್ಸ್‌(Drugs) ತಲುಪಿಸುತ್ತಿದ್ದ ಜಾಲದ ಇಬ್ಬರು ಸಿಸಿಬಿ(CCB) ಬಲೆಗೆ ಬಿದ್ದಿದ್ದಾರೆ.

ಬೆಳ್ಳಂದೂರು ನಿವಾಸಿಗಳಾದ ರವಿ ಹಾಗೂ ರವಿದಾಸ್‌ ಅಲಿಯಾಸ್‌ ರವಿಪ್ರಕಾಶ್‌ ಬಂಧಿತರಾಗಿದ್ದು(Arrest), 300 ಎಕ್ಸ್‌ಟೆಸಿ ಮಾತ್ರೆಗಳು, 100 ಎಲ್‌ಎಸ್‌ಡಿ ಪೇಪರ್‌ ಬ್ಲಾಟ್ಸ್‌, 350 ಗ್ರಾಂ ಚರಸ್‌ ಹಾಗೂ 1.5 ಕೇಜಿ ಹೈಡ್ರೋ ಗಾಂಜಾ ಸೇರಿ .60 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. ಸ್ವಿಗ್ಗಿ, ಡೊಂಜೋ ಆ್ಯಪ್‌ಗಳ(Application) ಸಿಬ್ಬಂದಿ ಸೋಗಿನಲ್ಲಿ ಆರೋಪಿಗಳು ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಕಾರ್ಯಾಚರಣೆ ನಡೆಸಿದೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ತಿಳಿಸಿದ್ದಾರೆ.

Tap to resize

Latest Videos

ವೈದ್ಯರು, ವಕೀಲರ ಹೆಸರಿನಲ್ಲಿ ಪಾರ್ಸಲ್‌:

ಈ ಜಾಲದ ಕಿಂಗ್‌ ಪಿನ್‌ ದೆಹಲಿಯಲ್ಲಿದ್ದು, ಆತನ ಪತ್ತೆಗೆ ತನಿಖೆ ನಡೆದಿದೆ. ಡಾರ್ಕ್ನೆಟ್‌(Darknet) ಮೂಲಕ ಬಿಟ್‌(Bit Coin) ಕಾಯಿನ್‌ ಬಳಸಿ ವಿದೇಶದಿಂದ(Foreign) ಡ್ರಗ್ಸ್‌ ಖರೀದಿಸುತ್ತಿದ್ದ ಆತ, ಬಳಿಕ ಬೆಂಗಳೂರು(Bengaluru), ದೆಹಲಿ(Delhi) ಹಾಗೂ ಮುಂಬೈ(Mumbai) ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತನ್ನ ಜಾಲದ ಮೂಲಕ ಮಾರಾಟ ಮಾಡುತ್ತಿದ್ದ. ಆನ್‌ಲೈನ್‌ ಮೂಲಕವೇ ಡ್ರಗ್ಸ್‌ ವ್ಯವಹಾರ ನಡೆದಿದೆ. ವೆಬ್‌ಸೈಟ್‌ನಲ್ಲಿ ಗ್ರಾಹಕರನ್ನು ಸಂಪರ್ಕಿಸಿ ಅವರ ವಿಳಾಸಕ್ಕೆ ಪೆಡ್ಲರ್‌ಗಳ ಮೂಲಕ ಡ್ರಗ್ಸ್‌ ಪೂರೈಕೆಯಾಗುತ್ತಿತ್ತು ಎಂದು ಪೊಲೀಸರು(Police) ವಿವರಿಸಿದ್ದಾರೆ.

ಮಲ್ಲೇಶ್ವರ ಪೊಲೀಸರ ಕೈಗೆ ಸಿಕ್ಕಿಬಿದ್ದವರ ಬಳಿ ಇತ್ತು 17 ಕೋಟಿ ರೂ. ಅಂಬರ್‌ ಗ್ರೀಸ್ !

ಅಂತೆಯೇ ಕಳೆದ ವರ್ಷ ಜಾರ್ಖಂಡ್‌ ಮೂಲದ ರವಿ ಹಾಗೂ ರವಿದಾಸ್‌ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದ ದೆಹಲಿ ಮೂಲದ ಕಿಂಗ್‌ಪಿನ್‌, ಬೆಳ್ಳಂದೂರು ಸಮೀಪ ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದ. ವೈದ್ಯರು(Doctor) ಹಾಗೂ ವಕೀಲರ(Advocate) ಹೆಸರಿನಲ್ಲಿ ಕೊರಿಯರ್‌(Courier) ಮೂಲಕ ಈ ಆರೋಪಿಗಳಿಗೆ ದೆಹಲಿಯಿಂದ ಡ್ರಗ್ಸ್‌ ಬರುತಿತ್ತು. ನಿಗದಿತ ಗ್ರಾಹಕರ ಮನೆ ವಿಳಾಸ ಸಹ ನೀಡಿ ಅವರಿಗೆ ಡ್ರಗ್ಸ್‌ ಪೂರೈಸುವ ಕೆಲಸವನ್ನು ರವಿ ಹಾಗೂ ರವಿದಾಸ್‌ಗೆ ಡ್ರಗ್ಸ್‌ ಜಾಲದ ಸದಸ್ಯರು ಕೊಟ್ಟಿದ್ದರು. ಅದರಂತೆ ಈ ಇಬ್ಬರು ಕಾರ್ಯನಿರ್ವಹಿಸಿದ್ದಾರೆ.

ದೆಹಲಿಯಿಂದ ಕೊರಿಯರ್‌ನಲ್ಲಿ ಬರುತ್ತಿದ್ದ ಡ್ರಗನ್ನು ಪಡೆಯುತ್ತಿದ್ದ ಆರೋಪಿಗಳು(Accused), ಬಳಿಕ ಬುಕ್‌, ಹಾಗೂ ಸೋಪ್‌ ಹೀಗೆ ಉಡುಗೊರೆ ರೂಪದಲ್ಲಿ ಪ್ಯಾಕಿಂಗ್‌ ಮಾಡಿ ಗ್ರಾಹಕರಿಗೆ ಪೂರೈಸುತ್ತಿದ್ದರು. ತಮ್ಮ ಮೇಲೆ ಅನುಮಾನಬಾರದಂತೆ ಆ್ಯಪ್‌ ಆಧಾರಿತ ಸ್ವಿಗ್ಗಿ, ಜಿನೈನ್‌ ಮತ್ತು ಡನ್ಜೋ ಬಟ್ಟೆ ಧರಿಸಿಕೊಂಡು ಡ್ರಗ್ಸ್‌ ಗ್ರಾಹಕರಿಗೆ(customers) ಸರಬರಾಜು ಮಾಡುತ್ತಿದ್ದರು. ಇತ್ತೀಚೆಗೆ ವೈಟ್‌ಫೀಲ್ಡ್‌ ಸಮೀಪ ಇದೇ ಜಾಲದ ಇಬ್ಬರನ್ನು ಬಂಧಿಸಿ .1.5 ಕೋಟಿ ಮೌಲ್ಯದ ಡ್ರಗ್ಸ್‌ ಅನ್ನು ಸಿಸಿಬಿ ಜಪ್ತಿ ಮಾಡಿತ್ತು. ಬಳಿಕ ಆರೋಪಿಗಳ ನೀಡಿದ ಮಾಹಿತಿ ಮೇರೆಗೆ ತನಿಖೆ ಮುಂದುವರೆಸಿದ್ದಾಗ ಮತ್ತಿಬ್ಬರು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಸಿಬಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಮಾರ್ಗದರ್ಶನದಲ್ಲಿ ಮಾದಕ ವಸ್ತು ನಿಗ್ರಹ ದಳದ ಎಸಿಪಿ ಗೌತಮ್‌ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಬಿ.ಎಸ್‌.ಅಶೋಕ್‌ ಹಾಗೂ ದೀಪಕ್‌ ತಂಡ ಆರೋಪಿಗಳನ್ನು ಬಂಧಿಸಿದೆ.

ಆ್ಯಪ್‌ನಲ್ಲೇ ಡ್ರಗ್ಸ್‌ ಡೀಲ್‌

ತನ್ನ ಗ್ರಾಹಕರನ್ನು ಸಂಪರ್ಕಿಸಲು ವ್ಹೀಕರ್‌ ಮಿ, ವೈಪ್‌ ಹಾಗೂ ಸೆಸ್ಸಿಂನ್‌ ಎಂಬ ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಈ ಡ್ರಗ್ಸ್‌ ಜಾಲದ ಕಿಂಗ್‌ಪಿನ್‌ ಬಳಸುತ್ತಿದ್ದ. ಈ ಆ್ಯಪ್‌ಗಳ ಮೂಲಕವೇ ಆತನ ಡ್ರಗ್ಸ್‌ ದಂಧೆ ನಡೆದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!