ಬೆಂಗಳೂರಿನಲ್ಲಿ ಅಪ್ಪಾ ನಂಗೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದ ಶಾಲಾ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಬಾಲಕಿ ತಂದೆ ಡಿಜೆಹಳ್ಳಿಯ ಸಾದ್ ಮುಸೈಬ್ನಾ ಎಂಬಾತನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದಾರೆ.
ಬೆಂಗಳೂರು (ಆ.05): ಬೆಂಗಳೂರಿನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಾ ಡ್ರ್ಯಾಗರ್ ಹಿಡಿದು ಸಿನಿಮಾ ಹೀರೋನಂತೆ ಪೋಸ್ ಕೊಡುತ್ತಿದ್ದ ಆರೋಪಿ, ಪ್ರೌಢಶಾಲೆಯಲ್ಲಿ ಓದುವ ಶಾಲಾ ಬಾಲಕಿಯರನ್ನು ಮರಳು ಮಾಡಿ ಪ್ರೀತಿ ಪ್ರೇಮದ ನೆಪದಲ್ಲಿ ಅವರ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆದರಲ್ಲಿ ಒಬ್ಬ 15 ವರ್ಷದ ಬಾಲಕಿ ಅಪ್ಪಾ ನನಗೆ ಹೊಟ್ಟೆ ನೋವು ಎಂದು ಹೇಳಿಕೊಂಡಾದ ಅವರ ತಂದೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ಮಗಳು ಗರ್ಭಿಣಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಪೊಲಸ್ ಠಾಣೆಗೆ ದೂರು ನೀಡಿದ್ದು, ಬಾಲಕಿ ತನ್ನಂತೆಯೇ ಸುಮಾರು 8 ಹುಡುಗಿಯರನ್ನು ಇದೇ ರೀತಿ ಬಳಸಿಕೊಡಿದ್ದಾನೆ ಎಂದು ಆರೋಪ ಮಾಡಿದ್ದಾಳೆ.
ಹೌದು, ಮಗಳಿಗೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋಗಿದ್ದ ತಂದೆಗೆ ಶಾಕ್ ಆಗಿದೆ. ಶಾಲೆಗೆ ಹೋಗ್ತಿದ್ದ 15 ವರ್ಷದ ಬಾಲಕಿ ಮೇಲೆ ಯಾರೋ ಕಿಡಿಗೇಡಿಗಳು ಅತ್ಯಾಚಾರ ಮಾಡಿದ್ದಾರೆ ಎಂದು ತಿಳಿದುಕೊಂಡಿದ್ದಾರೆ. ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನ ಅಸ್ಪತ್ರೆಗೆ ತೋರಿಸಿದ್ದ ಪೋಷಕರು. ಈ ವೇಳೆ ಮಗಳು 7 ತಿಂಗಳ ಗರ್ಭಿಣಿ ಅನ್ನೋದು ಕನ್ಫರ್ಮ್ ಆಗಿದೆ. ಈ ವೇಳೆ ಶಾಕ್ ಆಗಿದ್ದ ಬಾಲಕಿಯ ತಂದೆ-ತಾಯಿ ಯಾರು ಅತ್ಯಾಚಾರ ಮಾಡಿದ್ದಾರೆ ಎಂದು ಕೇಳಿದ್ದಾರೆ. ಆಗ ಮಗಳು ಡಿ.ಜೆ. ಹಳ್ಳಿ ನಿವಾಸಿ ಸಾದ್ ಮುಸೈಬ್ನಾ ಎಂಬಾತ ಪ್ರೀತಿ ಮಾಡುವುದಾಗಿ ಕರೆದಿಯ್ದು, ಅವರ ತಾಯಿ ಹಾಗೂ ಸಹೋದರಿಯರನ್ನು ಪರಿಚಯ ಮಾಡಿಸಿಕೊಟ್ಟಿದ್ದನು. ನಂತರ, ಅವರಿಲ್ಲದ ವೇಳೆ ಆಗಿಂದಾಗ್ಗೆ ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಿದ್ದಾಳೆ. ಈ ಕರಿತು ಬಾಲಕಿಯ ಪೋಷಕರು ಆರೋಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
Breaking : ಬೆಂಗಳೂರು ನರ್ಸಿಂಗ್ ವಿದ್ಯಾರ್ಥಿನಿ ಕಾಲುಜಾರಿ ಬಿದ್ದು ದಾರುಣ ಸಾವು!
ಬಾಲಕಿಯನ್ನು ಪ್ರೀತಿಸಿ, ಮದುವೆಯ ಭರವಸೆ ನೀಡಿ ಅತ್ಯಾಚಾರ ಮಾಡಿದ್ದಲ್ಲದೇ ಈ ಬಗ್ಗೆ ಬಾಲಕಿಯ ತಂದೆ ತಾಯಿ ಪ್ರಶ್ನೆ ಮಾಡಿದರೆ ಸಂತ್ರಸ್ಥ ಬಾಲಕಿಯ ತಂದೆಗೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಜೊತೆಗೆ, ನನಗೆ ರೌಡಿಗಳ ಪರಿಚಯವಿದ್ದು, ನಿಮ್ಮ ಮಗಳನ್ನ ಹಾಗೂ ನಿಮ್ಮನ್ನು ಬಿಡುವುದಿಲ್ಲ ಅಂಥ ಬೆದರಿಕೆ ಹಾಕಿದ್ದಾನಂತೆ. ಜೊತೆಗೆ ತಂದೆ ಹಾಗೂ ಬಾಲಕಿಯ ಮೇಲೆ ಹಲ್ಲೆಯನ್ನೂ ಮಾಡಿದ್ದಾನಂತೆ. ಇದರಿಂದ ಮನನೊಂದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಗ ತಂದೆ ತಾಯಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ರಕ್ಷಣೆ ಮಾಡಿದ್ದಾರೆ.
ಇನ್ನು ಆರೋಪಿ ಸಾದ್ ಶಾಲೆಗೆ ಹೋಗುವ ಸುಮಾರು 8 ಅಮಾಯಕ ಹೆಣ್ಣುಮಕ್ಕಳನ್ನ ಇದೇ ರೀತಿ ಪ್ರೀತಿ, ಪ್ರೇಮದ ಬಲೆಯೊಡ್ಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಬಾಲಕಿಯ ತಂದೆ ಆರೋಪ ಮಾಡಿದ್ದಾರೆ. ಆದರೆ ಅವರಾರೂ ದೂರು ಕೊಡಲು ಮುಂದೆ ಬರುತ್ತಿಲ್ಲ. ಹೀಗಾಗಿ, ಎಲ್ಲರ ಪರವಾಗಿ ನಾನೇ ಮುಂದೆ ಬಂದು ದೂರು ನೀಡ್ತಿದ್ದೇನೆ. ಇನ್ನು ಬಾಲಕಿ ತಂದೆಯ ದೂರಿನನ್ವಯ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಗಳಿಗೆ ನ್ಯಾಯ ಕೊಡಿಸಲು ನಿರಂತರವಾಗಿ ಹೋರಾಡುತ್ತಿರುವ ತಂದೆ, ನಗರ ಪೊಲೀಸ್ ಆಯುಕ್ತರಿಗೂ ಆರೋಪಿಯ ಕೃತ್ಯದ ಬಗ್ಗೆ ದೂರು ನೀಡಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಮುಸಾವೀರ್ ಪ್ರಕ್ರಿಯೆ ಮರುಸೃಷ್ಟಿ, ಬಟ್ಟೆ ಬದಲಿಸಿದ ಮಸೀದಿಯ ಮಹಜರ್!
ಮೊದಲು ಡಿ.ಜೆ.ಹಳ್ಳಿ ಠಾಣೆ ಇನ್ಸ್ ಪೆಕ್ಟರ್ ಎಫ್ಐಆರ್ ದಾಖಲಿಸಲು ಹಿಂದೇಟು ಹಾಕಿದ್ದರು. ಇದೀಗ ಕೊನೆಗೂ ಆರೋಪಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಇನ್ನೊಂದೆಡೆ ನನ್ನ ಮಗ ಹೀರೋ ಎಂದು ಇನ್‌ಸ್ಟಾಗ್ರಾಂ ನಲ್ಲಿ ಆರೋಪಿಯ ತಾಯಿ ಪೋಸ್ಚ್ ಮಾಡಿದ್ದಾರಂತೆ. ಆತನ ಕುಟುಂಬದಿಂದ ನಮಗೆ ಜೀವಬೆದರಿಕೆ ಇದೆ ಎಂದು ದೂರು ಕೊಟ್ಟಿದ್ದಾರೆ. ಸದ್ಯ ಡಿಜೆ.ಹಳ್ಳಿ ಪೊಲೀಸರು ಮೂವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಆರೋಪಿ ಸಾದ್ ಡ್ರಾಗರ್ ಹಿಡಿದು ಫೋಸ್ ಕೊಟ್ಟ ಫೋಟೋ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಬರ್ತಡೇ ಸೆಲೆಬ್ರೇಷನ್ ವೇಳೆ ಡ್ರ್ಯಾಗರ್ ಹಿಡಿದು ಫೋಸ್ ಕೊಟ್ಟಿದ್ದು, ಈತನ ಪುಂಡಾಟಿಕೆಯನ್ನು ಪೊಲೀಸರು ಕೂಡ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇನ್ನು ಸದ್ಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಡಿ.ಜೆ.ಹಳ್ಳಿ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿ, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.