
ಧಾರವಾಡ (ಆ.21) : ಕೊಲೆ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಬಂದಿದ್ದ ಆರೋಪಿಯನ್ನು ಲಾಡ್ಜ್‌ನಲ್ಲಿ ಯುವತಿಯೊಂದಿಗೆ ಸರಸವಾಡಲು ಬಿಟ್ಟಿದ್ದ ಪೊಲೀಸರು ಇದೀಗ ಸಸ್ಪೆಂಡ್ ಆಗಿದ್ದಾರೆ.
ಹೌದು...ಓರ್ವ ಹೆಡ್ ಕಾನಸ್ಟೆಬಲ್, ಮೂವರು ಪೇದೆಗಳನ್ನು ಅಮಾನತ್ತು ಮಾಡಿ ಬಳ್ಳಾರಿ ಎಸ್ ಪಿ ಸೈದುಲು ಅಡಾವತ್ ಅವರು ಇಂದು(ಭಾನುವಾರ) ಆದೇಶ ಹೊರಡಿಸಿದ್ದಾರೆ. ಕರ್ತವ್ಯ ನಿರ್ಲಕ್ಷ್ಯದ ಮೇಲೆ ಬಳ್ಳಾರಿಯ ಹೆಡ್ ಕಾನಸ್ಟೆಬಲ್ ಯೋಗೇಶಾಚಾರ, ಪೇದೆಗಳಾದ ಎಸ್ ಶಶಿಕುಮಾರ್, ರವಿಕುಮಾರ್ ಹಾಗೂ ಸಂಗಮೇಶ ಅಮಾನತ್ತುಗೊಂಡವರು.
ರೌಡಿಶೀಟರ್ ಬಚ್ಚಾಖಾನ್ ಗೆ ಲಾಡ್ಜ್‌ನಲ್ಲಿ ಯುವತಿ ಜತೆ ಕಾಲ ಕಳೆಯಲು ಅವಕಾಶ ಕೊಟ್ಟ ಪೋಲಿಸರು..!
ಬಚ್ಚಾ ಖಾನ್‌ಗೆ ಸಹಾಯ ಮಾಡಿದ್ದ ಮೈನೂದ್ದಿನ ಪಟೇಲ್, ಮೊಹ್ಮದ್ ಯೂನೂಸ್ ಹಾಗೂ ಫಜಲ್ ಕುಂದಗೋಳ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಧಾರವಾಡ ರೌಡಿ ಶಿಟರ್(Dharwad Rowdy Sheeter) ಫ್ರೂಟ್ ಇರ್ಫಾನ್(Fruit Irfan) ಕೊಲೆ ಪ್ರಕರಣ(Murder Case)ದಲ್ಲಿ ಬಂಧಿತನಾಗಿರುವ ಬಚ್ಚಾ ಖಾನ್(Bachha khan) ಎಂಬಾತನನ್ನು ಬಳ್ಳಾರಿ ಕಾರಾಗೃಹದಲ್ಲಿ ಇಡಲಾಗಿತ್ತು. ವಿಚಾರಣೆಗಾಗಿ ಆತನನ್ನು ಧಾರವಾಡ JMFC ನ್ಯಾಯಾಲಯಕ್ಕೆ ಶನಿವಾರ ಕರೆತಂದಿದ್ದರು. ಈ ಸಂದರ್ಭದಲ್ಲಿ ಸತ್ತೂರು(Sattooru) ಬಳಿ ಇರುವ AFS ಲಾಡ್ಜ್ ಒಂದರಲ್ಲಿ ಆರೋಪಿಯನ್ನು ಯುವತಿಯೊಂದಿಗೆ ಸರಸವಾಡಲು ಅವಕಾಶ ಮಾಡಿಕೊಂಡಿದ್ದರು.
ಬಚ್ಚಾ ಖಾನ್ ಬರುವ ಮೊದಲೇ ಯುವತಿ ಲಾಡ್ಜ್ ಕೋಣೆಯೊಳಗಿದ್ದಳು. ನಂತರ ಪೊಲೀಸರು ಆತನನ್ನು ಅಲ್ಲಿಗೆ ಕರೆತಂದು ಬಿಟ್ಟಿದ್ದಾರೆ. ಈ ಖಚಿತ ಮಾಹಿತಿ ಆಧರಿಸಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್(Labhooram) ಮತ್ತು ಇತರ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳಿಕ ಪೊಲೀಸರು ಬಂಡವಾಳ ಬಯಲಾಗಿದೆ.
ಬಚ್ಚಾ ಖಾನ್‌ನನ್ನು ವಿದ್ಯಾಗಿರಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಪ್ರತಿ ಬಾರಿ ವಿಚಾರಣೆಗೆ ಬರುವಾಗ ಈತ ನಗರದ ಸುತ್ತಮುತ್ತಲಿನ ಲಾಡ್ಜ್‌ಗಳನ್ನು ಮೊದಲೇ ಕಾಯ್ದಿರಿಸಿ, ಖಾಸಗಿ ಸಮಯ ಕಳೆಯುತ್ತಿದ್ದ ಎಂಬ ಮಾಹಿತಿಯು ಸಹ ಪೊಲೀಸರಿಗೆ ಸಿಕ್ಕಿದೆ. ಹಣದ ಆಸೆಗಾಗಿ ಪೊಲೀಸರು ಆರೋಪಿಯನ್ನು ಯುವತಿಯೊಂದಿಗೆ ಸರಸ ಸಲ್ಲಾಪವಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ