Bengaluru shock: ಪಕ್ಕದ ಮನೆ ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಮಾಡಿದ್ದ ಕಿಡಿಗೇಡಿ ಅರೆಸ್ಟ್, ನಡೆದಿದ್ದೇನು?

Kannadaprabha News   | Kannada Prabha
Published : May 07, 2026, 07:03 AM IST
A man arrested for filming woman while bathing What exactly happened

ಸಾರಾಂಶ

ಬೆಂಗಳೂರಿನಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಎರಡು ಪ್ರತ್ಯೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ನೆರೆಮನೆಯ ಮಹಿಳೆಯ ಸ್ನಾನದ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ಹಾಗೂ ವಾಕಿಂಗ್ ಮಾಡುತ್ತಿದ್ದ ಯುವತಿಗೆ ಅಸಭ್ಯವಾಗಿ ಸ್ಪರ್ಶಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು (ಮೇ.7): ತನ್ನ ನೆರೆಹೊರೆಯ ಮನೆ ಮಹಿಳೆಯ ಸ್ನಾನ ಮಾಡುವಾಗ ವಿಡಿಯೋ ಚಿತ್ರೀಕರಿಸಿಕೊಳ್ಳುತ್ತಿದ್ದ ಆರೋಪದ ಮೇರೆಗೆ ಖಾಸಗಿ ಕಂಪನಿ ಉದ್ಯೋಗಿಯೊಬ್ಬನನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುರಡುಚಾರ್ ಪಾಳ್ಯ ಸಮೀಪದ ನಿವಾಸಿ ಕಾರ್ತಿಕ್ ಬಂಧಿತನಾಗಿದ್ದು, ಆರೋಪಿಯಿಂದ ಮೊಬೈಲ್ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ನೆರೆಮನೆಯ ಮಹಿಳೆ ಸ್ನಾನಗೃಹದಲ್ಲಿದ್ದಾಗ ತನ್ನ ಮನೆಯ ಕಿಟಕಿಯಿಂದ ಕಾರ್ತಿಕ್ ವಿಡಿಯೋ ಮಾಡಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಂಡತಿ ಬಾಣಂತನ ಹೋಗಿದ್ದಾಗ ಕೃತ್ಯ: 

ಆರೋಪಿ ಕಾರ್ತಿಕ್ ಮೂಲತಃ ತಮಿಳುನಾಡು ರಾಜ್ಯದವನಾಗಿದ್ದು, ನಗರದಲ್ಲಿ ಖಾಸಗಿ ಕಂಪನಿಯಲ್ಲಿ ಆತ ಉದ್ಯೋಗದಲ್ಲಿದ್ದ. ಬಾಣಂತನಕ್ಕೆ ಆತನ ಪತ್ನಿ ತೆವರಿಗೆ ತೆರಳಿದ್ದರು. ಇನ್ನು ಸಂತ್ರಸ್ತೆ ಸಹ ಸಾಫ್ಟ್‌ವೇರ್ ಉದ್ಯೋಗಿ ಆಗಿದ್ದು, ಕೆಲ ತಿಂಗಳ ಹಿಂದಷ್ಟೇ ಕಾರ್ತಿಕ್ ಮನೆ ಪಕ್ಕದ ಮನೆಗೆ ಅವರು ಬಾಡಿಗೆ ಪಡೆದಿದ್ದರು. ಸ್ನಾನಗೃಹದ ಕಿಟಕಿ ಬಳಿ ಮನುಷ್ಯ ನೆರಳು ಕಂಡು ಜಕಳ ಮಾಡುತ್ತಿದ್ದ ಸಂತ್ರಸ್ತೆಗೆ ಆತಂಕವಾಗಿದೆ. ಕೂಡಲೇ ಅವರು ಕಿರುಚಿದಾಗ ಕಾರ್ತಿಕ್ ಪರಾರಿಯಾಗಿದ್ದ. ಈ ಬಗ್ಗೆ ಕೂಡಲೇ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.

ಯುವತಿಗೆ ಬ್ಯಾಡ್ ಟಚ್: ಕಾಮುಕ ಯುವಕನ ಸೆರೆ

ಬೆಂಗಳೂರು: ವಾಕಿಂಗ್‌ ಮಾಡುತ್ತಿದ್ದ ಯುವತಿಯ ದೇಹದ ಹಿಂಭಾಗಕ್ಕೆ ಟಚ್‌ ಮಾಡಿ ಕಿರುಕುಳ ನೀಡಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಆಕಾಶ್‌ (20) ಬಂಧಿತ ಆರೋಪಿ. ಮತ್ತಿಕೆರೆಯಲ್ಲಿ ವಾಸವಿರುವ 22 ವರ್ಷದ ಯುವತಿ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಮೇ 2 ರಂದು ರಾತ್ರಿ 10 ಗಂಟೆಯ ಸುಮಾರಿಗೆ ದೂರುದಾರರು ತನ್ನ ಸ್ನೇಹಿತನ ಜತೆ ಎಂ.ಎಸ್‌.ಆರ್‌. ನಗರದ 3 ಕ್ರಾಸ್‌ ಬಳಿ ವಾಕಿಂಗ್‌ ಮಾಡುವಾಗ ಕಪ್ಪು ಬಣ್ಣದ ಶರ್ಟ್‌ ಧರಿಸಿದ್ದ ಯುವಕನೊಬ್ಬ ಕಪ್ಪು ಬಣ್ಣದ ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಯುವತಿಯ ಹಿಂಭಾಗಕ್ಕೆ ಟಚ್‌ ಮಾಡಿ ಪರಾರಿಯಾಗಿದ್ದ. 

ನೊಂದ ಯುವತಿ ಈ ಸಂಬಂಧ ದೂರು ದಾಖಲಿಸಿದ್ದರು. ದೂರಿನನ್ವಯ ಘಟನಾ ಸ್ಥಳದ ಸುತ್ತ ಮುತ್ತಲಿನ ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದಾಶಿವನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತುಮಕೂರಿನ ಜೆರಾಕ್ಸ್​ ಅಂಗಡಿಯಲ್ಲಿ ಲವ್​: ಗರ್ಭಿಣಿ ಪತ್ನಿ ಬಿಟ್ಟು ಮತ್ತೊಂದು ಮದ್ವೆಗೆ ರೆಡಿಯಾದ ಪತಿ
ಸಣ್ಣ ವಿಷಯ ದೊಡ್ಡ ದುರಂತ, ಯೂಟ್ಯೂಬ್‌ ನೋಡಿ ಹೆಂಡತಿಯ ಹತ್ಯೆ