ತುಮಕೂರಿನ ಜೆರಾಕ್ಸ್​ ಅಂಗಡಿಯಲ್ಲಿ ಲವ್​: ಗರ್ಭಿಣಿ ಪತ್ನಿ ಬಿಟ್ಟು ಮತ್ತೊಂದು ಮದ್ವೆಗೆ ರೆಡಿಯಾದ ಪತಿ

Published : May 06, 2026, 01:41 PM IST
Tumkur Incident

ಸಾರಾಂಶ

ತುಮಕೂರಿನಲ್ಲಿ ಏಳು ವರ್ಷಗಳ ಕಾಲ ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಮದುವೆಯಾದ ಯುವತಿಯೊಬ್ಬರು ಗರ್ಭಿಣಿಯಾದಾಗ, ಆಕೆಯ ಪತಿ ಬೇರೊಬ್ಬರನ್ನು ಮದುವೆಯಾಗಲು ಮುಂದಾಗಿದ್ದಾನೆ. ಇದೀಗ ಆರು ತಿಂಗಳ ಗರ್ಭಿಣಿಯಾಗಿರುವ ಆ ಯುವತಿ, ನ್ಯಾಯಕ್ಕಾಗಿ ಪತಿ ಹಾಗೂ ಆತನ ಕುಟುಂಬದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜೆರಾಕ್ಸ್​ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಲವ್​ ಮಾಡಿ, ಮದುವೆಯಾಗಿ ಈಗ ಆಕೆ ಗರ್ಭಿಣಿಯಾದಾಗ ಇನ್ನೊಬ್ಬರ ಜೊತೆ ಮದುವೆಯಾಗಲು ಹೊರಟ ವ್ಯಕ್ತಿಯೊಬ್ಬನ ಆಘಾತಕಾರಿ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ. ಇದೀಗ ಆ ಯುವತಿ ನ್ಯಾಯಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಏಳು ವರ್ಷ ಲವ್​ ಮಾಡಿ, ಬಳಿಕ ಮದುವೆಯಾಗಿ ಗರ್ಭಿಣಿಯಾದ ಬಳಿಕ ತನ್ನ ಗಂಡ ತನ್ನನ್ನು ಬಿಟ್ಟು ಬೇರೊಬ್ಬರನ್ನು ಮದುವೆಯಾಗಲು ಹೊರಟಿದ್ದು ತನಗೆ ನ್ಯಾಯ ಕೊಡಿಸುವಂತೆ ಆಕೆ ಕೇಳಿಕೊಂಡಿದ್ದಾರೆ.

ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆಯ ಯುವತಿ ಕಾಲೇಜು ಓದುತ್ತಿದ್ದ ಸಂದರ್ಭದಲ್ಲಿ ಜೆರಾಕ್ಸ್​ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಜೆರಾಕ್ಸ್ ಬಂದಿದ್ದ ಬೊಮ್ಮಾ ನಾಯಕ್ ಈಕೆಯನ್ನು ನೋಡಿದ್ದ. ಕೊನೆಗೆ ಇಬ್ಬರಲ್ಲಿಯೂ ಪ್ರೀತಿ ಅರಳಿತ್ತು. ಪರಸ್ಪರ ಪ್ರೀತಿಯ ವಿಷಯ ಮಾತನಾಡಿದ್ದರು. ಏಳು ವರ್ಷಗಳವರೆಗೆ ಪ್ರೀತಿ ನಡೆದಿತ್ತು. ಬಳಿಕ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿ ಒಂದೂವರೆ ವರ್ಷವಾಗಿದೆ.

ಗರ್ಭಿಣಿಯಾದ ಬಳಿಕ ದೂರ

ಇದೀಗ ಯುವತಿ ಗರ್ಭಿಣಿಯಾಗಿದ್ದಾರೆ. ಗರ್ಭಿಣಿಯಾಗುತ್ತಲೇ ಈ ಮದುವೆಗೆ ತನ್ನ ಮನೆಯವರ ವಿರೋಧ ಇರುವ ಕಾರಣ, ಬೇರೊಂದು ಮದುವೆಯಾಗಲು ಹೊರಟಿದ್ದಾರೆ ತನ್ನ ಪತಿ ಎಂದು ಯುವತಿ ಪೊಲೀಸರಲ್ಲಿ ದೂರಿದ್ದಾರೆ. ನಾವಿಬ್ಬರೂ ಏಳು ವರ್ಷಗಳ ಕಾಲ ಜೊತೆಗಿದ್ದೆವು. ತಮ್ಮದು ಬೇರೆ ಜಾತಿ. ಆದ್ದರಿಂದ ಅವರ ಮನೆಯಲ್ಲಿ ಈ ಮದುವೆಗೆ ಒಪ್ಪಿಗೆ ಇರಲಿಲ್ಲ. ಇದರ ಹೊರತಾಗಿಯೂ ನಾವಿಬ್ಬರೂ ಮದುವೆಯಾದೆವು. ಆದರೆ ಇದೀಗ ನಾನು ಪ್ರೆಗ್ನೆಂಟ್​ ಆದ ಬಳಿಕ ಕಿರುಕುಳ ಕೊಡುತ್ತಿದ್ದಾರೆ. ಅವರ ಮನೆಯವರು ಬೇರೊಂದು ಮದುವೆಗೆ ರೆಡಿ ಮಾಡಿದ್ದರೂ, ಪತಿ ಏನೂ ಹೇಳುತ್ತಿಲ್ಲ ಎನ್ನುತ್ತಿದ್ದಾರೆ ಯುವತಿ.

ಎಫ್​ಐಆರ್​ ದಾಖಲು

ಪೊಲೀಸರಲ್ಲಿ ದೂರಿರುವ ಯುವತಿ, ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ ಮತ್ತು ಕೊ*ಲೆ ಬೆದರಿಕೆ ದೂರು ದಾಖಲಿಸಿದ್ದಾರೆ. ಸದ್ಯ ಯುವತಿ ಆರು ತಿಂಗಳ ಗರ್ಭಿಣಿ. ನನಗೆ ಪತಿ ಬೇಕು. ನ್ಯಾಯ ಬೇಕು. ಹುಟ್ಟುವ ಮಗುವಿಗೆ ಅಪ್ಪ ಬೇಕು. ನ್ಯಾಯ ಕೊಡಿಸಿ ಎಂದು ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪತಿ, ಆತನ ತಾಯಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಣ್ಣ ವಿಷಯ ದೊಡ್ಡ ದುರಂತ, ಯೂಟ್ಯೂಬ್‌ ನೋಡಿ ಹೆಂಡತಿಯ ಹತ್ಯೆ
ವ್ಯಾಯಾಮಕ್ಕೂ ಮುನ್ನ ಪ್ರಜ್ಞೆ ತಪ್ಪಿಸಿ ಮಹಿಳೆಯರ ಅಶ್ಲೀಲ ವಿಡಿಯೋ ಚಿತ್ರೀಕರಿಸುತ್ತಿದ್ದ ಜಿಮ್ ಟ್ರೈನರ್ಸ್ ಬಂಧನ