ಬೆಳಗಾವಿ: ಬಸ್ ನಿಲ್ದಾಣದ ಕಟ್ಟಡದಲ್ಲೇ ಡಿಪೋ ಕಂಟ್ರೋಲರ್ ನೇಣಿಗೆ ಶರಣು

By Govindaraj SFirst Published Aug 9, 2023, 9:34 AM IST
Highlights

ಬೆಳಗಾವಿ ಜಿಲ್ಲೆಯ ರಾಯಬಾಗ ಬಸ್ ನಿಲ್ದಾಣದಲ್ಲಿ ಡಿಪೋ ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿವಾನಂದ ಭಜಂತ್ರಿ (48) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಚಿಕ್ಕೋಡಿ (ಆ.09): ಬೆಳಗಾವಿ ಜಿಲ್ಲೆಯ ರಾಯಬಾಗ ಬಸ್ ನಿಲ್ದಾಣದಲ್ಲಿ ಡಿಪೋ ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿವಾನಂದ ಭಜಂತ್ರಿ (48) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಯಬಾಗ ಬಸ್ ನಿಲ್ದಾಣದ ಕಟ್ಟಡದ ಮೊದಲ ಮಹಡಿಯಲ್ಲಿಯೇ ಕಿಟಕಿಗೆ ಹಗ್ಗ ಕಟ್ಟಿ ನೇಣಿಗೆ ಶರಣಾಗಿದ್ದು, ಇಂದು ಬೆಳಗ್ಗೆ ಎಂದಿನಂತೆ ಸಿಬ್ಬಂದಿ ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ರಾಯಬಾಗ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಮಾಡುತ್ತಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಠಾಣೆ ಬಳಿಯೇ ವ್ಯಕ್ತಿ ಆತ್ಮಹತ್ಯೆಗೆ ಯತ್ನ: ವ್ಯಕ್ತಿಯೊಬ್ಬರ ಕಿರುಕುಳದಿಂದ ನೊಂದಿದ್ದ ವ್ಯಕ್ತಿಯೊಬ್ಬ ಪೊಲೀಸ್‌ ಠಾಣೆ ಸಮೀಪವೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ಸೋಮವಾರ ನಡೆದಿದೆ. ತಾಲೂಕಿನ ಮಾಯಕೊಂಡ ಹೋಬಳಿಯ ಬೊಮ್ಮೇನಹಳ್ಳಿ ತಾಂಡಾ ವಾಸಿ ರವಿನಾಯ್ಕ ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿ. ತಮ್ಮದೇ ತಾಂಡಾದ ವ್ಯಕ್ತಿಯೊಬ್ಬ ಕಳೆದ 2-3 ವರ್ಷದಿಂದ ನೀಡುತ್ತಿದ್ದ ಕಿರುಕುಳದಿಂದ ರೋಸಿ ಹೋಗಿದ್ದ ರವಿನಾಯ್ಕ ಈ ಬಗ್ಗೆ ಮಾಯಕೊಂಡ ಪೊಲೀಸ್‌ ಠಾಣೆಗೆ ಪತ್ನಿ ಸಮೇತ ಬಂದಿದ್ದ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. 

Latest Videos

ದಸರಾ ಮಹೋತ್ಸವದ ಗಜಪಡೆ ಮೊದಲ ಪಟ್ಟಿ ಫೈನಲ್: ಆನೆಗಳ ವಿವರ ಇಲ್ಲಿದೆ!

ಪೊಲೀಸ್‌ ಠಾಣೆಯ ಒಳಗೆ ವಿಚಾರಣೆಗೆ ಬಂದಿದ್ದ ರವಿನಾಯ್ಕ ವಿಷ ಸೇವಿಸಿದ ವಿಚಾರ ತಿಳಿದ ಠಾಣೆ ಒಳಗಿದ್ದ ರೇಣುಕಾಬಾಯಿ ಹಾಗೂ ಸಂಬಂಧಿಕರು ತಕ್ಷಣವೇ ಪೊಲೀಸರ ಸಹಾಯದಿಂದ ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ತಕ್ಷಣವೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೂಕನಹಳ್ಳಿ ಕೆರೆಗೆ ಬಿದ್ದು ಶಿಕ್ಷಕ ಆತ್ಮಹತ್ಯೆ: ಸಾಲದ ಬಾಧೆಯಿಂದ ಶಿಕ್ಷಕನೋರ್ವ ತಾಲೂಕಿನ ಮೂಕನಹಳ್ಳಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ಜರುಗಿದೆ. ತಾಲೂಕಿನ ಬೀಜಗನಹಳ್ಳಿ ಕ್ಲಸ್ಟರ್‌ನ ಸೋಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾಗಿದ್ದ ಎಚ್‌.ಎ. ರೇವಣ್ಣ (53) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಮೂಲತಃ ರಂಗಯ್ಯನಕೊಪ್ಪಲು ನಿವಾಸಿಯಾಗಿದ್ದು, ಮೃತರಿಗೆ ಪತ್ನಿ ವರಲಕ್ಷ್ಮೀ, ಓರ್ವ ಪುತ್ರಿ ಇದ್ದಾರೆ.

ಆ.20ಕ್ಕೆ ಗೃಹಲಕ್ಷ್ಮೀ ಯೋಜನೆಗೆ ರಾಹುಲ್‌, ಪ್ರಿಯಾಂಕಾ ಚಾಲನೆ: ಬೆಳಗಾವಿಯಲ್ಲಿ ಲೋಕಾರ್ಪಣೆ

ಶಿಕ್ಷಕ ರೇವಣ್ಣ ಅವರು ಕಳೆದ ಮೂರು ತಿಂಗಳ ಹಿಂದೆ ಸಾಲದ ಬಾಧೆಯಿಂದ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಜೈಲಿಗೂ ಹೋಗಿ ಬಂದಿದ್ದರು ಎನ್ನಲಾಗಿದೆ. ಸೋಮವಾರ ರಾತ್ರಿ ಮನೆಯಲ್ಲಿ ಜಗಳವಾಗಿದೆ ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಮೂಕನಹಳ್ಳಿಯ ಕೆರೆಯ ಏರಿಯ ಮೇಲೆ ಸ್ಕೂಟಿ ಮತ್ತು ಚಪ್ಪಲಿ ಇರುವುದನ್ನು ಗ್ರಾಮಸ್ಥರು ನೋಡಿ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಹುಣಸೂರು ಟೌನ್‌ ಪೊಲೀಸ್‌ ಠಾಣೆಗೆ ಮೃತರ ಪತ್ನಿ ವರಲಕ್ಷ್ಮೀ ದೂರು ನೀಡಿದ್ದಾರೆ. ಸಿಪಿಐ ದೇವೇಂದ್ರ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

click me!