Bengaluru: ತೆಂಗಿನ ಮರ ಏರಿ ಮನೆಗೆ ಕನ್ನ ಹಾಕಿದ್ದ ಆರೋಪಿಯ ಬಂಧನ!

Published : May 30, 2022, 07:35 PM IST
Bengaluru: ತೆಂಗಿನ ಮರ ಏರಿ ಮನೆಗೆ ಕನ್ನ ಹಾಕಿದ್ದ ಆರೋಪಿಯ ಬಂಧನ!

ಸಾರಾಂಶ

ಆ ಮನೆಯಲ್ಲಿ ಬಾಗಿಲು ಒಡೆದಿರಲಿಲ್ಲ. ಕಿಟಕಿಯೂ ಪೀಸ್ ಪೀಸ್ ಆಗಿರಲಿಲ್ಲ. ರಾತ್ರಿ ಕಳೆದು ಬೆಳಗಾಗೊದ್ರೊಳಗೆ ಕಬೋರ್ಡ್‌ನಲ್ಲಿದ್ದ ಚಿನ್ನಾಭರಣ ಕಾಣೆಯಾಗಿತ್ತು. ಮನೆ ಮಂದಿ ಇರುವಾಗ್ಲೇ ಮನೆಗೆ ನುಗ್ಗಿದ್ದ ಖರ್ತನಾಕ್ ಕಳ್ಳ.

ವರದಿ: ಪ್ರದೀಪ್ ಕಗ್ಗೆ, ಬೆಂಗಳೂರು

ಬೆಂಗಳೂರು (ಮೇ.30): ಆ ಮನೆಯಲ್ಲಿ ಬಾಗಿಲು ಒಡೆದಿರಲಿಲ್ಲ. ಕಿಟಕಿಯೂ ಪೀಸ್ ಪೀಸ್ ಆಗಿರಲಿಲ್ಲ. ರಾತ್ರಿ ಕಳೆದು ಬೆಳಗಾಗೊದ್ರೊಳಗೆ ಕಬೋರ್ಡ್‌ನಲ್ಲಿದ್ದ ಚಿನ್ನಾಭರಣ ಕಾಣೆಯಾಗಿತ್ತು. ಮನೆ ಮಂದಿ ಇರುವಾಗ್ಲೇ ಮನೆಗೆ ನುಗ್ಗಿದ್ದ ಖರ್ತನಾಕ್ ಕಳ್ಳ. ಅದು ಮೇ 27 ರ ಮಧ್ಯರಾತ್ರಿ. ಗಂಡ ಹೆಂಡತಿ ಹಾಗೂ ಪುಟ್ಟ ಮಗು ಇರೊ ಸಂಸಾರ ಅದು. ಎಲ್ಲರೂ ಊಟ ಮಾಡಿ ಮಲಗಿದ್ರು. ಬಾಗಿಲಿಗೆ ಹಾಕಿದ್ದ ಬೀಗ ತೆಗೆದಿರಲಿಲ್ಲ. ಬಾಗಿಲು ಒಡೆದಿರಲಿಲ್ಲ. ಹಾಕಲಾಗಿದ್ದ ಕಿಟಕಿ ಹಾಗೆ ಮುಚ್ಚಿದ್ವು. ಆದ್ರೆ ಮನೆಯಲ್ಲಿಟ್ಟಿದ್ದ ಚಿನ್ನ ,ಬೆಳ್ಳಿ ಮಾತ್ರ ನಾಪತ್ತೆಯಾಗಿತ್ತು. ಎಲ್ಲರೂ ಮನೆಯಲ್ಲೇ ಇರುವಾಗ ಚಿನ್ನ ಕದ್ದವರ್ಯಾರು ಅನ್ನೋ ಅನುಮಾನ ಶುರುವಾಗಿತ್ತು. 

ಠಾಣೆಗೆ ಬಂದು ದೂರು ಕೊಟ್ಟಾಗಲೇ ಇದೇ ತೆಂಗಿನ ಮರದ ಕಹಾನಿ ಬಯಲಾಗಿದ್ದು, ಟಾಟಾ ಸಿಲ್ಕ್ ಫಾರ್ಮ್ ನ ಒಂದನೇ ಅಡ್ಡ ರಸ್ತೆಯ ಇದೇ ದಿವ್ಯಾ ರೆಜೆನ್ಸಿ ಅಪಾರ್ಟ್ ಮೆಂಟ್ ನ ಫ್ಲಾಟ್ ನಂಬರ್ 105 ಕ್ಕೆ ಒಂದು ತಿಂಗಳ ಹಿಂದಷ್ಟೇ ರಾಮಚಂದ್ರ ಕೌಲಗಿ ಕುಟುಂಬ ಬಂದು ನೆಲೆಸಿದ್ರು. 27 ರ ರಾತ್ರಿ ಗಂಡ, ಹೆಂಡತಿ ಹಾಗೂ ಪುಟ್ಟ ಮಗು ಮೂವರು ಬೇರೆ ಬೇರೆ ರೂಮ್ ನಲ್ಲಿ ಮಲಗಿದ್ರು. ಆದ್ರೆ ಮಧ್ಯರಾತ್ರಿ ಬಂದ ಕಳ್ಳ. ಮನೆ ಮಂದಿ ಎಲ್ಲಾ ಮಲಗಿರುವಾಗಲೇ ಮೊಬೈಲ್ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಆವತ್ತು ಭಂಡ ಧೈರ್ಯ ತೋರಿ ಮನೆಗಳ್ಳತನ ಮಾಡಿದ್ದ ಆರೋಪಿ ಸಾದಿಕ್. ರಾತ್ರಿ ಬಂದವನೇ ಅಪಾರ್ಟ್ ಮೆಂಟ್ ನ ಬಾಲ್ಕನಿ ಪಕ್ಕ ಇರುವ ಇದೇ ಮರ ಏರಿ ಬಾಲ್ಕನಿಗೆ ಧುಮುಕಿದ್ದ. 

KGF-2 ಪ್ರದರ್ಶನ ವೇಳೆ ಗುಂಡಿನ ದಾಳಿ: ಪಿಸ್ತೂಲ್ ಸಪ್ಲೈ ಮಾಡಿದ್ದ ಬಿಹಾರದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ಮಹಿಳೆ ಮಲಗಿದ್ದ ರೂಮ್ ಅಲ್ಲಿಯೇ ಇದ್ದಿದ್ರಿಂದ ಗಾಳಿ ಬೀಸಲಿ ಅಂತಾ ಸ್ವಲ್ಪ ಕಿಟಕಿ ಓಪನ್ ಮಾಡಿಟ್ಟಿದ್ರು. ಅದೇ ಕಿಟಕಿ ಮೂಲಕ ಕೈ ಹಾಕಿದ ಆರೋಪಿ ಬಾಲ್ಕನಿ ಬಾಗಿಲು ಓಪನ್ ಮಾಡಿ ಒಳಗೆ ನುಗ್ಗಿದ್ದ. ಟೇಬಲ್ ಮೇಲಿದ್ದ ಮೊಬೈಲ್ ಓಪನ್ ತೆಗೆದುಕೊಂಡು ಇನ್ನೇನು ಹೊರಡಬೇಕು. ಅಷ್ಟರಲ್ಲೆ ರೂಮ್ ನಲ್ಲಿರುವ ಕಬೋರ್ಡ್ ಓಪನ್ ಆಗಿತ್ತು. ಬಂದು ನೋಡಿದವನಿಗೆ ಚಿನ್ನಾಭರಣ ಕಣ್ಣು ಕುಕ್ಕುವಂತೆ ಮಾಡಿತ್ತು. ಮೊಬೈಲ್‌ ಜೊತೆಗೆ 330 ಗ್ರಾಂ ಚಿನ್ನ‌ 2 ಕೆಜಿ ಬೆಳ್ಳಿ ಪರಿಕರಗಳನ್ನು ಕದ್ದೊಯ್ದಿದ್ದ. ಅದೇ ರೂಮ್ ನಲ್ಲಿ ಮಹಿಳೆ ಮಾತ್ರೆ ಸೇವಿಸಿ ಮಲಗಿದ್ರಿಂದ ಎಚ್ಚರವಾಗಲಿಲ್ಲ. ಇನ್ನೂ ಕಳ್ಳನಿಗೂ ಮನೆಯಲ್ಲಿ ಜನ್ರಿದ್ದಾರೆ ಅನ್ನೋ ಭಯನು ಇರ್ಲಿಲ್ಲ ನೋಡಿ.

ಕಲಘಟಗಿ‌ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಹೆರಿಗೆಗೆ ಬಂದ ಗರ್ಭಿಣಿ ಸಾವು

ಇನ್ನು‌  31 ವರ್ಷದ ಆರೋಪಿ ಸಾದಿಕ್ ಮಂಗಳೂರು ಮೂಲದವನು. 18 ವರ್ಷದ ಹಿಂದೆ ತಂದೆ ತಾಯಿ ತೀರಿಕೊಂಡಿದ್ದು, ಅನಾಥನಾಗಿ ಬೆಂಗಳೂರಿನ ಸಿಟಿ ಮಾರ್ಕೆಟ್ ನ ಹೋಟೆಲ್ ವೊಂದರಲ್ಲಿ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡಿದ್ದ .ಅಲ್ಲಿ ಬರೊ ಹೈಫೈ ಮಂದಿ ನೋಡಿ ತಲೆಕೆಡಿಸಿಕೊಳ್ತಿದ್ದ .ತಾನು ಕೂಡ ಅವರಂತೆ ದುಡ್ಡು ಮಾಡ್ಬೇಕು. ಲೈಫ್ ಎಂಜಾಯ್ ಮಾಡ್ಬೇಕು ಅಂದುಕೊಂಡು ಹಣ ಮಾಡೊ‌ ಹೊಂಚು ಹಾಕಿ ಕಳ್ಳತನದ ಹಾದಿ ಹಿಡಿದಿದ್ದ. ಈತ ಈ ಹಿಂದೆ ಕೂಡ ಮಂಗಳೂರಿನ ಹಲವೆಡೆ ಕಳ್ಳತನ ಮಾಡಿ ಜೈಲು ಸೇರಿ ಬಂದಿದ್ದು.  ಮತ್ತೆ ಹಳೆ ಚಾಳಿ ಮುಂದುವರೆಸಿ ಬಸವನಗುಡಿ ಪೊಲೀಸರ ಕೈಗೆ ಲಾಕ್ ಆಗಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿರೊ ಪೊಲೀಸರು 18 ಲಕ್ಷ ಮೌಲ್ಯದ 330 ಗ್ರಾಂ ಚಿನ್ನ, 2 ಕೆಜಿ‌ 619 ಗ್ರಾಂ ಬೆಳ್ಳಿ ಆಭರಣ 2 ಮೊಬೈಲ್ ವಶಕ್ಕೆ ಪಡೆದಿದ್ದು, ಆರೋಪಿಯನ್ನ ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ