Davanagere: ಗೋವಿನ ಕೋವಿ ಬಳಿ ರೌಡಿಗಳ ಅಟ್ಟಹಾಸ: ಸ್ಥಳದಲ್ಲೇ ಒಬ್ಬನ ಸಾವು, ಮತ್ತೊಬ್ಬನ ಸ್ಥಿತಿ ಚಿಂತಾಜನಕ

By Govindaraj S  |  First Published Mar 15, 2023, 11:59 PM IST

ಜಿಲ್ಲೆಯ ನ್ಯಾಮತಿ ತಾಲ್ಲೂಕ್ ಗೋವಿನ ಕೋವಿ ಬಳಿ ರೌಡಿಶೀಟರ್‌ವೊಬ್ಬ ಬರ್ಬರವಾಗಿ ಕೊಲೆಯಾಗಿದ್ದಾನೆ. ನಟೋರಿಯಸ್ ರೌಡಿಶೀಟರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿರುವ ಅಂಜನಿ ಆಲಿಯಾಸ್ ಆಂಜನೆಯ ಕೊಲೆಯಾದ ದುರ್ದೈವಿ.


ದಾವಣಗೆರೆ (ಮಾ.15): ಜಿಲ್ಲೆಯ ನ್ಯಾಮತಿ ತಾಲ್ಲೂಕ್ ಗೋವಿನ ಕೋವಿ ಬಳಿ ರೌಡಿಶೀಟರ್‌ವೊಬ್ಬ ಬರ್ಬರವಾಗಿ ಕೊಲೆಯಾಗಿದ್ದಾನೆ. ನಟೋರಿಯಸ್ ರೌಡಿಶೀಟರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿರುವ ಅಂಜನಿ ಆಲಿಯಾಸ್ ಆಂಜನೆಯ ಕೊಲೆಯಾದ ದುರ್ದೈವಿ.

ಕೊಲೆ ಹಿನ್ನಲೆ: ರೌಡಿ ಶೀಟರ್  ಹಂದಿಅಣ್ಣಿ ಕಳೆದ‌ ಒಂದು ವರ್ಷದ ಹಿಂದೆ ಶಿವಮೊಗ್ಗದಲ್ಲಿ ಕೊಲೆಯಾಗಿದ್ದ. ಆ ಕೇಸ್‌ನಲ್ಲಿ ದಾವಣಗೆರೆ ಮೂಲದ ಮಧು ಹಾಗು ಅಂಜನಿ ಸಹ ಭಾಗಿಯಾಗಿದ್ದರು. ಕೊಲೆ ಕೇಸ್‌ನಲ್ಲಿ ಆರೋಪಿಗಳಾಗಿದ್ದ  ಮಧು ಹಾಗು ಆಂಜನೇಯ ರೌಡಿ ಶೀಟರ್ ಹಂದಿಅಣ್ಣಿ ಕೇಸ್‌ನಲ್ಲಿ ಆರೋಪಿಗಳಾಗಿದ್ದರು. ಇಂದು ಶಿವಮೊಗ್ಗದ ಕೋರ್ಟ್‌ಗೆ ಹಾಜರಾಗಿ ದಾವಣಗೆರೆಗೆ  ವಾಪಸ್ ಆಗುವಾಗ ನ್ಯಾಮತಿ ತಾಲ್ಲೂಕ್ ಗೋವಿನಕೋವಿ ಬಳಿ ಸ್ಕಾರ್ಪಿಯಾದಲ್ಲಿ ಬಂದ ದುಷ್ಕರ್ಮಿಗಳು ತಲ್ವಾರ್ ಮಚ್ಚು ಲಾಂಗ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಅಂಜನಿ ಸ್ಥಳದಲ್ಲೇ ಮೃತಪಟ್ಟರೆ ಮಧು ತೀವ್ರ ಸ್ವರೂಪದ ಗಾಯಗಳಿಂದ ಶಿವಮೊಗ್ಗ ಮೆಗ್ಗಾನ ಆಸ್ಪತ್ರೆ ಸೇರಿದ್ದಾನೆ.

Tap to resize

Latest Videos

ಚುನಾವಣೆ ಸಂದರ್ಭ ಅಬಕಾರಿ ಅಕ್ರಮ ತಡೆಗಟ್ಟಲು ವಿಶೇಷ ತಂಡ ರಚನೆ

ಆಂಜನೇಯ ರೌಡಿಶೀಟರ್ ಆಗಿದ್ದು ಮೂಲತಃ ಹರಿಹರದ ಭಾನುವಳ್ಳಿ ಗ್ರಾಮದವನು. ಈತನ‌ ಮೇಲು ದಾವಣಗೆರೆ ಹಾಗು ಶಿವಮೊಗ್ಗ ಪೊಲೀಸ್ ಠಾಣೆಗಳಲ್ಲಿ‌ ಹಲವು ಕೇಸ್‌ಗಳಿವೆ. ನ್ಯಾಮತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ದಾವಣಗೆರೆ ಎಸ್ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ‌ ಪರಿಶೀಲನೆ‌‌ ನಡೆಸಿದ್ದು ಕೊಲೆ ಆರೋಪಿಗಳನ್ನು ಪತ್ತೆ ಹಚ್ವಲು ವಿಶೇಷ ತಂಡವೊಂದನ್ನು ರಚನೆ ಮಾಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು ಅದರ ವಿವರ ಹೀಗಿದೆ.

ಮಂಗಳೂರು-ಮುಂಬೈ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳ್ಳತನ: ಇಬ್ಬರು ಕುಖ್ಯಾತ ಕಳ್ಳಿಯರ ಬಂಧನ

ಶಿವಮೊಗ್ಗದ ಹಂದಿಹಣ್ಣಿ ಈತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹರಿಹರ ತಾಲೂಕು ಬಾನೊಳ್ಳಿ ಗ್ರಾಮದ ಮಧು ಮತ್ತು ಆಂಜನೇಯ ಇವರುಗಳು ಮೇಲ್ಕಂಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ತಮ್ಮ ಗ್ರಾಮಕ್ಕೆ ತಮ್ಮ ಮೋಟಾರ್ ಸೈಕಲ್‌ನಲ್ಲಿ  ಹಿಂದಿರಿಗುತ್ತಿರುವಾಗ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಗೋವಿನಾಕೋವಿ ಗ್ರಾಮದ ಹೊನ್ನಾಳಿ ಶಿವಮೊಗ್ಗ ರಸ್ತೆಯಲ್ಲಿ ಅವರನ್ನು ಹಿಂಬಾಲಿಸಿದ ಸ್ಕಾರ್ಪಿಯೋ ವಾಹನದಲ್ಲಿದ್ದವರು ಅಡ್ಡಗಟ್ಟಿ ತಡೆದು ತಲ್ವಾರ್‌ನಿಂದ ಹಲ್ಲೆ  ಮಾಡಿದ್ದರಿಂದ ಸ್ಥಳದಲ್ಲಿಯೇ ಆಂಜನೇಯ ಮೃತಪಟ್ಟಿದ್ದು ಈತನ ಜೊತೆಯಲ್ಲಿದ್ದ ಮಧುಗೆ ಮೈಕೈಗೆ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮವಹಿಸಲಾಗುವುದು.

click me!