ಬೆಂಗಳೂರಲ್ಲಿ ಬಾಂಗ್ಲಾದ ರೋಹಿಂಗ್ಯಾ ಮುಸ್ಲಿಮರಿಂದ ಉಗ್ರ ಚಟುವಟಿಕೆ: 10 ಕಡೆ ಎನ್‌ಐಎ ದಾಳಿ

By Sathish Kumar KH  |  First Published Nov 8, 2023, 9:32 AM IST

ಬೆಂಗಳೂರಿನಲ್ಲಿ ಬಾಂಗ್ಲಾದ ರೋಹಿಂಗ್ಯಾ ಮುಸ್ಲಿಮರಿಂದ ಉಗ್ರ ಚಟುವಟಿಕೆ ನಡೆಸುತ್ತಿರುವ ಅನುಮಾನದಿಂದ ಎನ್‌ಐಎ ಅಧಿಕಾರಿಗಳು ವಿವಿಧೆಡೆ ದಾಳಿ ಮಾಡಿದ್ದಾರೆ.


ಬೆಂಗಳೂರು (ನ.08): ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಲು, ಮಹಿಳೆಯರ ಕಳ್ಳ ಸಾಗಣೆಯ ಉದ್ದೇಶದಿಂದ ಬಾಂಗ್ಲಾ ದೇಶದಿಂದ ರೋಹಿಂಗ್ಯಾ ಮುಸ್ಲಿಂ ಒಳನುಸುಳಿ ಬೆಂಗಳೂರಿನಲ್ಲಿ ಅಡಗಿರುವ ಅನುಮಾನದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency-NIA) ಬೆಂಗಳೂರಿನ ವಿವಿಧೆಡೆ 10 ಸ್ಥಳಗಳ ಮೇಲೆ ದಾಳಿ ಮಾಡಿದೆ.

ಬೆಂಗಳೂರಿನಲ್ಲಿ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಹಿಳೆಯರ ಕಳ್ಳ ಸಾಗಣೆ ಹಾಗೂ ದೇಶದಲ್ಲಿ ಉಗ್ರ ಚಟುವಟಿಕೆಗಳನ್ನಿ ವಿಸ್ತರಣೆ ಮಾಡುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಬಾಂಗ್ಲಾದ ರೋಹಿಂಗ್ಯಾ ಮುಸ್ಲಿಮರ ಪತ್ತೆಗೆ ಎನ್‌ಐಎ ಅಧಿಕಾರಿಗಳು ಬೆಳಗಿನ ಜಾವ 3 ಗಂಟೆಯಿಂದ ದಾಳಿ ಆರಂಭಿಸಿದ್ದಾರೆ. ರೋಹಿಂಗ್ಯಾ ಮುಸ್ಲಿಂರಿಂದ ಅಕ್ರಮದ ಮಾಹಿತಿ ಲಭ್ಯವಾಘಿದೆ. ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ದಾಳಿ ನಡೆಸಿದ್ದು, 10ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಶೋಧನೆ ಮಾಡಲಾಗುತ್ತಿದೆ.

Tap to resize

Latest Videos

undefined

ಎನ್‌ಐಎ ಅಧಿಕಾರಿಗಳಿಗೆ ಸಾಥ್‌ ನೀಡಿದ ಸಿಸಿಬಿ: ಬೆಂಗಳೂರಿನ ಹೊರಮಾವು ಸೇರಿದಂತೆ ಹಲವೆಡೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಇದ್ದುಕೊಂಡೇ ಕೆಲವು ಬಾಂಗ್ಲಾ ಮೂಲದ ರೋಹಿಂಗ್ಯಾಗಳು ಉಗ್ರ ಚಟುವಟಿಕೆ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ವಿವಿಧೆಡೆ ದಾಳಿ ನಡೆಸಿದ ಅಧಿಕಾರಿಗಳು ಸಾಕ್ಷಿಗಳನ್ನ ಸಂಗ್ರಹಿಸುತ್ತಿದ್ದಾರೆ. ಜೊತೆಗೆ, ಕೆಲ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ದಾಳಿ ಮಾಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳಿಗೆ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಕೂಡ ಕಾರ್ಯಾಚರಣೆಗೆ ಸಾಥ್‌ ನೀಡಿದ್ದಾರೆ. ರೋಹಿಂಗ್ಯಾ ಮುಸ್ಲಿಮರ ಪತ್ತೆಗೆ ಎನ್‌ಐಎ ಅಧಿಕಾರಿಗಳು  ಸಿಸಿಬಿ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ಬಳಸಿಕೊಂಡಿದ್ದಾರೆ. ವಿವಿಧೆಡೆ ಸಿಸಿಬಿ ಮತ್ತು ಎನ್‌ಐಎ ಅಧಿಕಾರಿಗಳು ಜಂಟಿಯಾಗಿ ದಾಳಿ ಮಾಡಿದ್ದಾರೆ. 

ಎಂಟು ಅಕ್ರಮ ವಲಸಿಗರನ್ನು ವಶಕ್ಕೆ ಪಡೆದ ಎನ್‌ಐಎ: ಈಗ 8 ಅಕ್ರಮ ಬಾಂಗ್ಲಾ ವಲಸಿಗರು ಎನ್‌ಐಎ ವಶಕ್ಕೆ ಪಡೆದ ಎನ್‌ಐಎ ಅಧಿಕಾರಿಗಳು, ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ಈಗ ವಶಕ್ಕೆ ಪಡೆಯಲಾಗಿರುವ ವಲಸಿಗರಿಂದ ಮಾನವ ಕಳ್ಳಸಾಗಾಣಿಕೆ ಮತ್ತು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದದೆ. ಈ ಸಂಬಂಧ ಎನ್‌ಐಎ ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆಧಾರದ ಮೇಲೆ 15 ತಂಡಗಳಿಂದ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಬೆಂಗಳೂರಿನ ಸೋಲದೇವನಹಳ್ಳಿ, ಕೆಆರ್ ಪುರಂ, ಬೆಳ್ಳಂದೂರು ಸೇರಿದಂತೆ ಹಲವು ಕಡೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ.

click me!