ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ವಿಸಿ ನಾಲೆಗೆ ಬಿದ್ದು, ಕಾರಿನಲ್ಲಿದ್ದ ಐವರೂ ಜಲಸಮಾಧಿಯಾದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನಘಟ್ಟದ ಬಳಿ ನಡೆದಿದೆ. ಚಂದ್ರಪ್ಪ(61), ಕೃಷ್ಣಪ್ಪ (60) ಧನಂಜಯ್ಯ (55), ಬಾಬು, ಜಯಣ್ಣ ಮೃತ ದುರ್ದೈವಿಗಳು.
ಮಂಡ್ಯ (ನ.7): ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ವಿಸಿ ನಾಲೆಗೆ ಬಿದ್ದು, ಕಾರಿನಲ್ಲಿದ್ದ ಐವರೂ ಜಲಸಮಾಧಿಯಾದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನಘಟ್ಟದ ಬಳಿ ನಡೆದಿದೆ.
ಚಂದ್ರಪ್ಪ(61), ಕೃಷ್ಣಪ್ಪ (60) ಧನಂಜಯ್ಯ (55), ಬಾಬು, ಜಯಣ್ಣ ಮೃತ ದುರ್ದೈವಿಗಳು.
undefined
ಮೈಸೂರು ಕಡೆಯಿಂದ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ವಿಸಿ ನಾಲೆಗೆ ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಕಾರನ್ನು ಹೊರ ತೆಗೆದಿದ್ದು, ಕಾರಿನಲ್ಲಿ ಐವರ ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಪ್ರತ್ಯಕ್ಷದರ್ಶಿಗಳು ಹೇಳೋದೇನು?
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು ಚಾಲಕ ಎದುರಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ನಾಲೆಗೆ ಉರುಳಿ ಬಿದ್ದಿದೆ. ಸ್ಥಳಕ್ಕೆ ಮಂಡ್ಯ ಎಸ್ ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರವಷ್ಟೇ ಕೆಆರ್ ಎಸ್ ಡ್ಯಾಂನಿಂದ ವಿಸಿ ನಾಲೆಗೆ ನೀರು ಬಿಡಲಾಗಿತ್ತು ಎಂದು ತಿಳಿದು ಬಂದಿದೆ.
ಕಾರು ಮೇಲೆತ್ತುವ ವೇಳೆ ಮೃತನ ಮೊಬೈಲ್ ರಿಂಗ್:
ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಮೇಲೆತ್ತುವ ವೇಳೆ ಓರ್ವ ಮೃತನ ಮೊಬೈಲ್ ರಿಂಗ್ ಆಗುತ್ತಲೇ ಇತ್ತು. ಅದೇ ಮೊಬೈಲ್ ನಲ್ಲಿ ಓರ್ವರ ಕುಟುಂಬಕ್ಕೆ ಮಾಹಿತಿ ನೀಡಲಾಯಿತು. ಐವರು ಬೇರೆ ಬೇರೆ ಕಡೆಯವರು ತಿಪಟೂರು, ಚನ್ನರಾಯಪಟ್ಟಣ, ಭದ್ರಾವತಿ, ಶಿವಮೊಗ್ಗದವರು ಎನ್ನಲಾಗ್ತಿದೆ. ಕಾರಿನಲ್ಲಿ ಊಟ, ಬಾಳೆ ಹಣ್ಣು ತೆಗೆದುಕೊಂಡು ಹೋಗ್ತಿದ್ದ ವೇಳೆ ನಡೆದಿರುವ ದುರಂತ.
Bengaluru ನಾಲ್ಕು ದಿನ ಆಹಾರವಿಲ್ಲದೇ ಬಳಲಿದ್ದ ಚಿರತೆ ಎದೆಗೆ ಗುಂಡಿಟ್ಟು ಕೊಂದ ಅರಣ್ಯ ಇಲಾಖೆ: ಈ ಸಾವು ನ್ಯಾಯವೇ?
ತಡೆಗೋಡೆ, ಸೂಚನಾ ಫಲಕ ಇಲ್ಲ:
ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣ ಆಗ್ತಿದೆ. ಘಟನೆ ನಡೆದಿರುವ ಸ್ಥಳದಲ್ಲಿ ಯಾವುದೇ ಸೂಚನೆ ಫಲಕ, ತಡೆಗೋಡೆ ಹಾಕಲಾಗಿಲ್ಲ. ಈ ಹಿಂದೆ ಇಂಥ ದುರಂತ ಘಟನೆಗಳು ನಡೆದಿದ್ದರೂ ತಡೆಗೋಡೆ, ಸೂಚನಾ ಫಲಕ ಹಾಕದಿರುವುದು ಇಂದಿನ ದುರಂತಕ್ಕೆ ಕಾರಣವಾಗಿದೆ. ತಡೆಗೋಡೆ ಮತ್ತೆ ಸೂಚನ ಫಲಕ ಅಳವಡಿಕೆಗೆ ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕ ದರ್ಶನ ಪುಟ್ಟಣ್ಣಯ್ಯ. ಈ ಘಟನೆ ಹಿನ್ನೆಲೆ ನಾಳೆ ಬೆಳಗ್ಗೆ 8 ಗಂಟೆಗೆ ಅಧಿಕಾರಿಗಳ ತುರ್ತು ಸಭೆ ಕರೆದಿರುವ ಶಾಸಕ ದರ್ಶನ ಪುಟ್ಟಣ್ಣಯ್ಯ.
ಮೂರು ತಿಂಗಳಲ್ಲಿ ಮೂರು ಕಾರು ಅಪಘಾತ:
ಕಳೆದ ಮೂರು ತಿಂಗಳಲ್ಲಿ ವಿಸಿ ನಾಲೆಗೆ ಮೂರು ಕಾರುಗಳು ಉರುಳಿವೆ. ಜುಲೈ 27ರಂದು ಮಂಡ್ಯ ತಾಲೂಕಿನ ತಿಬ್ಬನಹಳ್ಳಿಯಲ್ಲಿ ವಿಸಿ ನಾಲೆಗೆ ಬಿದ್ದಿದ್ದ ಕಾರು. ಈ ವೇಳೆ ಲೋಕೇಶ್ ಎಂಬಾತ ಸಾವು. ಜುಲೈ 29ರಂದು ಶ್ರೀರಂಗಪಟ್ಟಣದ ಗಾಮನಗಳ್ಳಿಯ ವಿಸಿ ನಾಲೆಗೆ ಉರುಳಿದ್ದ ಕಾರು. ಈ ವೇಳೆ ನಾಲ್ಕು ಜನ ಮಹಿಳೆಯರು ಸಾವು. ಇಂದು ಪಾಂಡವಪುರ ಬನಘಟ್ಟದ ವಿಸಿ ನಾಲೆಗೆ ಉರುಳಿರುವ ಕಾರು.
ಕಾರಿನಲ್ಲಿ ಐವರೂ ಸಾವಿಗೀಡಾಗಿದ್ದಾರೆ.
ಮನೆ ಮುಂದೆ ಆಟವಾಡ್ತಿದ್ದ ಏಳು ವರ್ಷದ ಮಗು ಮೇಲೆ ಚಿರತೆ ದಾಳಿ; ಕಾದಾಡಿ ಮಗುವನ್ನು ಉಳಿಸಿಕೊಂಡ ತಂದೆ!
ನಾಲೆಗೆ ನೀರು ನಿಲುಗಡೆ:
ವಿಸಿ ನಾಲೆಗೆ ಕಾರು ಉರುಳಿದ ಘಟನೆ ಹಿನ್ನೆಲೆ ಕೆಎಆರ್‌ಎಸ್ ಡ್ಯಾಂನಿಂದ ನಾಲೆಗೆ ಹರಿಯುತ್ತಿದ್ದ ನೀರು ನಿಲುಗಡೆ ಮಾಡಲಾಗಿದೆ.