ಬೆಂ.ವಿವಿ ಅಂಕ ಪಟ್ಟಿತಿದ್ದಿದ ಕೇಸ್‌ ಸಿಐಡಿಗೆ

By Kannadaprabha News  |  First Published Jan 6, 2021, 9:10 AM IST

 840 ವಿದ್ಯಾರ್ಥಿಗಳ ಫಲಿತಾಂಶ ಹಿಂಪಡೆಯಲು ವಿವಿ ನಿರ್ಧಾರ | ಆಂತರಿಕ ತನಿಖೆಗೂ ಸಿಂಡಿಕೇಟ್‌ ಸಭೆಯಲ್ಲಿ ಒಮ್ಮತದ ನಿರ್ಣಯ


ಬೆಂಗಳೂರು(ಜ.06): ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 2019 ಮತ್ತು 2020ನೇ ಸಾಲಿನಲ್ಲಿ ನಡೆದ ವಿವಿಧ ಸ್ನಾತಕೋತ್ತರ ಪದವಿ ಪರೀಕ್ಷಾ ಮೌಲ್ಯಮಾಪನದ ಬಳಿಕ 804 ವಿದ್ಯಾರ್ಥಿಗಳ ಅಂಕಗಳನ್ನು ತಿದ್ದಿ ಅಕ್ರಮ ಎಸಗಿರುವ ಆರೋಪ ಕೇಳಿಬಂದಿರುವ ಸಂಬಂಧ 804 ವಿದ್ಯಾರ್ಥಿಗಳ ಫಲಿತಾಂಶವನ್ನು ಹಿಂಪಡೆಯಲು ವಿಶ್ವವಿದ್ಯಾಲಯ ನಿರ್ಧರಿಸಿದೆ.

ಅಲ್ಲದೆ, ಅಂಕ ತಿದ್ದಿದ ಅಕ್ರಮ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಲು ನಿರ್ಧರಿಸಿದೆ. ಜೊತೆಗೆ ವಿವಿಯಲ್ಲೇ ಆಂತರಿಕ ತನಿಖೆಗೂ ಆಂತರಿಕ ತಾಂತ್ರಿಕ ಸಮಿತಿ ರಚಿಸಲು ಮಂಗಳವಾರ ನಡೆದ ವಿವಿಯ ಸಿಂಡಿಕೇಟ್‌ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.

Tap to resize

Latest Videos

ಭಾರೀ ಹಗರಣ: BDAಗೆ 50 ಕೋಟಿ ನಷ್ಟ, IAS‌ ಅಧಿಕಾರಿಗೆ ನೋಟಿಸ್‌

ಕುಲಪತಿ ಕೆ.ಆರ್‌.ವೇಣುಗೋಪಾಲ್‌, ಕುಲಸಚಿವೆ ಕೆ.ಜ್ಯೋತಿ ಹಾಗೂ ಹಣಕಾಸು ಅಧಿಕಾರಿ ಪಾರ್ವತಿ ಅವರ ನಡುವಿನ ಸಮನ್ವಯ ಕೊರತೆಯಿಂದ ಕಳೆದ ಬಾರಿ ಸಿಂಡಿಕೇಟ್‌ ಸಭೆ ಮುಂದೂಡಿಕೆಯಾಗಿತ್ತು. ಮಂಗಳವಾರ ಆನ್‌ಲೈನ್‌ ಮತ್ತು ಆಫ್‌ಲೈನ್‌ ಎರಡೂ ರೀತಿಯಲ್ಲೂ ಸಿಂಡಿಕೇಟ್‌ ಸಭೆ ಆಯೋಜಿಸಲಾಗಿತ್ತು.

ಸಿಂಡಿಕೇಟ್‌ ನಿರ್ಣಯದಂತೆ ಆರೋಪ ಕೇಳಿಬಂದಿರುವ 804 ವಿದ್ಯಾರ್ಥಿಗಳಿಗೂ ನೋಟಿಸ್‌ ಜಾರಿ ಮಾಡಿ ಅವರ ಅಂಕಪಟ್ಟಿಗಳನ್ನು ವಾಪಸ್‌ ಪಡೆಯಲಾಗುತ್ತದೆ. ಅಲ್ಲದೆ, ಇನ್ನೂ ವಿತರಣೆಯಾಗದ ಅಂಕಪಟ್ಟಿಗಳನ್ನೂ ವಿಶ್ವವಿದ್ಯಾಲಯ ಹಿಂಪಡೆಯಲಿದೆ. ಇದರಿಂದ ಈ ಎಲ್ಲ ವಿದ್ಯಾರ್ಥಿಗಳಿಗೆ ಸಂಕಷ್ಟಎದುರಾಗಲಿದೆ ಎಂದು ವಿವಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅತ್ಯಾಚಾರ ಎಸಗಿ ಗೃಹಿಣಿ ಕೊಲೆ ಶಂಕೆ

ಮೌಲ್ಯಮಾಪಕರು ಮೌಲ್ಯಮಾಪನ ಮಾಡಿ ಅಂಕ ನೀಡಿದ ಬಳಿಕ ಉತ್ತರ ಪತ್ರಿಕೆಗಳನ್ನು ಸ್ಕಾ್ಯನ್‌ ಮಾಡಿ ಅಂಕಪಟ್ಟಿಯನ್ನು (ಮಾರ್ಕ್ಸ್‌ಲಿಸ್ಟ್‌) ಸಿಡಿ ಅಥವಾ ಇ-ಮೇಲ್‌ ಮೂಲಕ ವಿವಿಯ ಕುಲಸಚಿವರಿಗೆ ಕಳುಹಿಸಬೇಕಾಗುತ್ತದೆ. ಈ ಕಾರ್ಯವನ್ನು ತಮಿಳುನಾಡು ಮೂಲದ ಖಾಸಗಿ ಸಂಸ್ಥೆಯೊಂದಕ್ಕೆ ನೀಡಲಾಗಿದೆ. ಈ ಸಂಸ್ಥೆಯವರು 804 ವಿದ್ಯಾರ್ಥಿಗಳ ಅಂಕಗಳನ್ನು ತಿದ್ದಿ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ವಿವಿಯ ಕುಲಸಚಿವೆ ಕೆ.ಜ್ಯೋತಿ ಅವರು ಜ್ಞಾನಭಾರತಿ ಪೊಲೀಸ್‌Ü ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಿಸಿದ್ದಾರೆ.

2019 ಮತ್ತು 2020ರಲ್ಲಿ ಆಗಿರುವ ಅಂಕ ತಿದ್ದುಪಡಿಯಲ್ಲಿ ಸ್ಕಾ್ಯನಿಂಗ್‌ ಜವಾಬ್ದಾರಿ ಹೊತ್ತ ಖಾಸಗಿ ಸಂಸ್ಥೆ, ಆ ಸಂಸ್ಥೆಯ ಸಿಬ್ಬಂದಿ ಹಾಗೂ ವಿವಿಯ ಕೆಲ ವಿದ್ಯಾರ್ಥಿಗಳು ಮತ್ತು ಕೆಲ ಸಿಬ್ಬಂದಿ ಶಾಮೀಲಾಗಿರುವ ಸಂಶಯ ಇದೆ. ಈ ಸಂಬಂಧ 2018ರಿಂದ ಇದುವರೆಗೆ ನಡೆದಿರುವ ವಿವಿಯ ಎಲ್ಲಾ ಸ್ನಾತಕೋತ್ತರ ಕೋರ್ಸುಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಂಬಂಧ ಸಮಗ್ರ ತನಿಖೆ ನಡೆಸಬೇಕೆಂದು ಕೂಡ ದೂರಿನಲ್ಲಿ ಕೋರಿದ್ದಾರೆ.

ಭೂ ಒತ್ತುವರಿ ತನಿಖೆಗೆ ಕಾರ್ಯಪಡೆ ರಚನೆ

ಒತ್ತುವರಿಯಾಗಿರುವ ಬೆಂಗಳೂರು ವಿವಿಯ ಭೂಮಿ ಸರ್ವೆ ನಡೆಸಲು ಕಾರ್ಯಪಡೆ ರಚನೆ ಮಾಡಲು ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸುಮಾರು 1200 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವು ಭೂಮಾಫಿಯಾದವರಿಂದ ಸುಮಾರು 200 ಎಕರೆಯಷ್ಟುಭೂಮಿ ಒತ್ತುವರಿಯಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರ ಸರ್ವೆ ನಡೆಸಿ ಒತ್ತುವರಿಯಾಗಿರುವ ಭೂಮಿ ವಿವಿಯ ವಶಕ್ಕೆ ಪಡೆಯಲು ವಿಶ್ವವಿದ್ಯಾಲಯ ಮುಂದಾಗಿದ್ದು, ಸರ್ವೆ ಕಾರ್ಯಕ್ಕೆ ಕಾರ್ಯಪಡೆ ರಚಿಸಲು ನಿರ್ಧರಿಸಿದೆ.

click me!