Drugs Cases: ಕಳೆದ ವರ್ಷ ಅತೀ ಹೆಚ್ಚು ಡ್ರಗ್ಸ್‌ ಕೇಸ್‌ ದಾಖಲು!

By Kannadaprabha NewsFirst Published Jan 1, 2022, 9:53 AM IST
Highlights

ನಗರ ಪೊಲೀಸರು 2021ನೇ ಸಾಲಿನಲ್ಲಿ ಮಾದಕವಸ್ತು ಮಾರಾಟ ಸಂಬಂಧ ಎನ್‌ಡಿಪಿಎಸ್‌ ಕಾಯ್ದೆಯಡಿ 4,547 ಪ್ರಕರಣ ದಾಖಲಿಸಿದ್ದು, 5,741 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ 176 ವಿದೇಶಿ ಪ್ರಜೆಗಳಾಗಿದ್ದಾರೆ.

ಬೆಂಗಳೂರು (ಜ. 1): ನಗರ ಪೊಲೀಸರು 2021ನೇ ಸಾಲಿನಲ್ಲಿ ಮಾದಕವಸ್ತು ಮಾರಾಟ ಸಂಬಂಧ ಎನ್‌ಡಿಪಿಎಸ್‌ ಕಾಯ್ದೆಯಡಿ 4,547 ಪ್ರಕರಣ ದಾಖಲಿಸಿದ್ದು, 5,741 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ 176 ವಿದೇಶಿ ಪ್ರಜೆಗಳಾಗಿದ್ದಾರೆ.

ಮಾದಕ ವಸ್ತು ಪ್ರಕರಣಗಳ ಸಂಬಂಧ ಹಿಂದಿನ ಎರಡು ವರ್ಷಕ್ಕೆ ಹೋಲಿಕೆ ಮಾಡಿದರೆ 2021ನೇ ಸಾಲಿನಲ್ಲೇ ಅತಿಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಂದರೆ, 2019ರಲ್ಲಿ 768 ಪ್ರಕರಣ ಸಂಬಂಧ 1,260 ಮಂದಿ ಮತ್ತು 2020ರಲ್ಲಿ 2,766 ಪ್ರಕರಣ ಸಂಬಂಧ 3,673 ಮಂದಿ ಬಂಧಿಸಿದ್ದಾರೆ. ಈ ಪೈಕಿ ಕ್ರಮವಾಗಿ 38 ಮತ್ತು 84 ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.

ಶಾಮಿನಿಸಂ ಪ್ರಭಾವ, ಬೆಂಗಳೂರಿನ 17 ವರ್ಷದ ಬಾಲಕಿ 2 ತಿಂಗಳಿನಿಂದ ನಿಗೂಢವಾಗಿ ನಾಪತ್ತೆ!

ಅಂತೆಯೆ ನಗರದಲ್ಲಿ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ 2021ನೇ ಸಾಲಿನಲ್ಲಿ 26 ಮಂದಿ ರೌಡಿ ಶೀಟರ್‌ಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದ್ದು, 10 ರೌಡಿಗಳನ್ನು ಗಡಿಪಾರು ಮಾಡಿದ್ದಾರೆ. 2019ನೇ ಸಾಲಿನಲ್ಲಿ 21 ಹಾಗೂ 2020ನೇ ಸಾಲಿನಲ್ಲಿ 15 ಮಂದಿ ರೌಡಿ ಶೀಟರ್‌ಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿತ್ತು. ಆದರೆ, ಒಬ್ಬರನ್ನೂ ಗಡಿಪಾರು ಮಾಡಿರಲಿಲ್ಲ. ಹೀಗಾಗಿ 2021ನೇ ಸಾಲಿನಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ರೌಡಿ ಶೀಟರ್‌ಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ, ಗಡಿಪಾರು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜೂಜಾಟ: 3,989 ಮಂದಿ ಬಂಧನ: ಇನ್ನು ನಗರದಲ್ಲಿ ಅಕ್ರಮ ಜೂಟಾಟದ ಅಡ್ಡೆಗಳ ಮೇಲೆ ದಾಳಿ ಮಾಡಿರುವ ಪೊಲೀಸರು, 2021ನೇ ಸಾಲಿನಲ್ಲಿ 491 ಜೂಜಾಟ ಪ್ರಕರಣ ದಾಖಲಿಸಿ, 3,989 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. 2019ನೇ ಸಾಲಿನಲ್ಲಿ 352 ಪ್ರಕರಣ ದಾಖಲಿಸಿ, 3,791 ಆರೋಪಿಗಳ ಬಂಧಿಸಿದ್ದರು. 2020ನೇ ಸಾಲಿನಲ್ಲಿ 502 ಪ್ರಕರಣ ದಾಖಲಿಸಿ, 4,611 ಮಂದಿಯನ್ನು ಬಂಧಿಸಿದ್ದಾರೆ. ಇನ್ನು 2021ನೇ ಸಾಲಿನಲ್ಲಿ 96 ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣ ದಾಖಲಿಸಿ, 238 ಜನರನ್ನು ಬಂಧಿಸಿದ್ದಾರೆ. ಇನ್ನು 2021ನೇ ಸಾಲಿನಲ್ಲಿ ಕಾನೂನುಬಾಹಿರವಾಗಿ ಆಯುಧಗಳನ್ನು ಹೊಂದಿರುವ ಅಪರಾಧಿಗಳ ವಿರುದ್ಧ ಆಮ್ಸ್‌ರ್‍ ಕಾಯ್ದೆಯಡಿ 217 ಪ್ರಕರಣ ದಾಖಲಿಸಿದ್ದಾರೆ.

Rowdy Shot in Bengaluru: ಎಸ್‌ಐಗೆ ಚಾಕು ಇರಿದಿದ್ದ ರೌಡಿಗೆ ಗುಂಡೇಟಿನ ಪಾಟ!

363 ಸುಲಿಗೆ ಪ್ರಕರಣ ವರದಿ: 2021ನೇ ಸಾಲಿನಲ್ಲಿ ನಗರದಲ್ಲಿ 363 ಸುಲಿಗೆ ಪ್ರಕರಣ ದಾಖಲಾಗಿದ್ದು, 273 ಪತ್ತೆಯಾಗಿವೆ. 2019 ಮತ್ತು 2020ನೇ ಸಾಲಿನಲ್ಲಿ ಕ್ರಮವಾಗಿ 506 ಮತ್ತು 378 ಪ್ರಕರಣ ವರದಿಯಾಗಿದ್ದು, 405 ಮತ್ತು 323 ಪ್ರಕರಣ ಪತ್ತೆಯಾಗಿವೆ.

ಸರಗಳವು ಇಳಿಕೆ: 2021ರಲ್ಲಿ 165 ಸರಗಳವು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 130 ಪ್ರಕರಣ ಪತ್ತೆ ಮಾಡಲಾಗಿದೆ. 2019 ಮತ್ತು 2020ನೇ ಸಾಲಿನಲ್ಲಿ ಕ್ರಮವಾಗಿ 225 ಹಾಗೂ 152 ಪ್ರಕರಣ ದಾಖಲಾಗಿದ್ದು, 214 ಹಾಗೂ 145 ಪ್ರಕರಣ ಪತ್ತೆಯಾಗಿವೆ.

2021ನೇ ಸಾಲಿನಲ್ಲಿ ಮಾದಕವಸ್ತು ಪ್ರಕರಣಗಳ ಮಾಹಿತಿ
ಮಾದಕವಸ್ತು ತೂಕ ಬಂಧಿತರ ಸಂಖ್ಯೆ
ಗಾಂಜಾ 3,589 ಕೆ.ಜಿ. 5,368
ಹ್ಯಾಶಿಶ್‌ 48.61 ಕೆ.ಜಿ. 16
ಎಕ್ಸ್‌ಟೆಸಿ 8206 ಮಾತ್ರೆ 46
ಎಲ್‌ಎಸ್‌ಡಿ 12,451 ಸ್ಟ್ರಿಫ್ಸ್‌ 7

click me!