* ದೇಶದಲ್ಲಿ ಮತ್ತೆ ಏರಿಕೆಯಾಗುತ್ತಿರುವ ಓಮಿಕ್ರೋನ್ ಮತ್ತು ಕೊರೋನಾ
* ಪ್ರಮಾಣ ಪತ್ರ ನೀಡುತ್ತೇವೆ ಎಂದು ನಿಮ್ಮನ್ನು ವಂಚಿಸಬಹುದು ಎಚ್ಚರ
* ವಿವಿಧ ಲಿಂಕ್ ಕಳಿಸಿ ಓಪನ್ ಮಾಡಲು ಪ್ರೇರೇಪಿಸಬಹುದು
* ನಕಲಿ ವೆಬ್ ತಾಣಗಳಿಂದಲೂ ಎಚ್ಚರ'
ನವದೆಹಲಿ(ಡಿ. 31) ಒಂದು ಕಡೆ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈನ ನಡುವೆ ಸರ್ಕಾರ ಒಂದು ಎಚ್ಚರಿಕೆಯನ್ನು ನೀಡಿದೆ. ಗೃಹ ವ್ಯವಹಾರಗಳ ಸಚಿವಾಲಯವು (MHA) ಎಲ್ಲ ನಾಗರಿಕರಿಗೆ ಎಚ್ಚರಿಕೆ ರವಾನಿಸಿದೆ.
ಓಮಿಕ್ರೋನ್ ಪರೀಕ್ಷೆ ಮಾಡಿ ವರದಿ ಕೊಡುತ್ತೇವೆ ಎಂದು ನಿಮ್ಮನ್ನು ಸುಲಿಗೆ ಮಾಡಬಹುದು ಎಂದು ಎಚ್ಚರಿಕೆ ನೀಡಿದೆ. Omicron ರೂಪಾಂತರವನ್ನು ಪತ್ತೆಹಚ್ಚಲು ಉಚಿತ ಪರೀಕ್ಷೆಗಳನ್ನು ನೀಡುತ್ತೇವೆ ಎಂದು ಕೆಲವರು ವಿವಿಧ ಮಾರ್ಗಗಳ ಮೂಲಕ ಸಂಪರ್ಕ ಮಾಡಬಹುದು ಎಂದು ಎಚ್ಚರಿಕೆ ನೀಡಿದೆ.
undefined
ಸೈಬರ್ ಅಪರಾಧಿಗಳು ಯಾವಾಗಲೂ ನಾಗರಿಕರನ್ನು ವಂಚಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ Omicron ರೂಪಾಂತರ ವಿಷಯಾಧಾರಿತ ಸೈಬರ್ ಅಪರಾಧಗಳು ಪ್ರತಿದಿನ ಹೆಚ್ಚುತ್ತಿವೆ. ಪರಿಸ್ಥಿತಿಯನ್ನು ಲಾಭ ಮಾಡಿಕೊಳ್ಳಲು ಸೈಬರ್ ಅಪರಾಧಗಳನ್ನು ನಡೆಸಲು ವಿವಿಧ ತಂತ್ರಗಳನ್ನು ಬಳಸುತ್ತಿದ್ದಾರೆ. ಲಿಂಕ್ ಗಳನ್ನು ಕಳಿಸಿ ನಿಮ್ಮನ್ನು ದಾರಿ ತಪ್ಪಿಸುವ ಕೆಲಸ ಮಾಡಬಹುದು ಎಂದು ಎಚ್ಚರಿಕೆ ನೀಡಿದೆ.
ಸರ್ಕಾರದ ಅಧಿಕೃತ ಮುದ್ರೆ ಇರುವ ಪ್ರಮಾಣಪತ್ರವನ್ನೇ ನೀಡುತ್ತೇವೆ ಎಂದು ಹೇಳುತ್ತಾರೆ. ನಕಲಿ ವೆಬ್ ತಾಣಗಳನ್ನು ಕ್ರಿಯೆಟ್ ಮಾಡಿಕೊಂಡು ಸಂಪರ್ಕ ಮಾಡುವ ಯತ್ನ ನಡೆಸುತ್ತಾರೆ ಎಂದು ಎಚ್ಚರಿಸಿದೆ.
Cybercrime: ಬೇಡಿಕೆಗೆ ಬಗ್ಗದ ಮಹಿಳೆಯನ್ನು ಕಾಲ್ ಗರ್ಲ್ ಮಾಡಿದ ಸ್ಟುಡೆಂಟ್!
ಓಮಿಕ್ರೋನ್ ಪರೀಕ್ಷೆ ಮಾಡಿಕೊಂಡು ವರದಿ ಪಡೆದುಕೊಂಡರೆ ನೀವು ಲಾಕ್ ಡೌನ್ ಮುಕ್ತವಾಗಿ ತಿರುಗಾಟ ನಡೆಸಬಹುದು. ಕೊರೋನಾ ಸರ್ಟಿಫಿಕೇಟ್ ನಂತೆ ಕೆಲಸ ಮಾಡುತ್ತದೆ ಎಂದು ನಂಬಿಕೆ ಹುಟ್ಟಿಸುತ್ತಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಆಧಾರವಿಲ್ಲದ ಮೂಲಗಳಿಂದ, ಸೋಶಿಯಲ್ ಮೀಡಿಯಾಗಳಿಂದ, ವಾಟ್ಸಾಪ್ ನಿಂದ ದೊರೆಯುವ ಲಿಂಕ್ ಓಪನ್ ಮಾಡಬೇಡಿ ಎಂದು ತಿಳಿಸಿದೆ. ಈ ಮಧ್ಯೆ ಭಾರತದ ಓಮಿಕ್ರೋನ್ ಕೇಸುಗಳ ಸಂಖ್ಯೆ 1,200 ದಾಟಿದೆ.
ಸೈಬರ್ ಅಪರಾಧಕ್ಕೆ ತಡೆ ಇಲ್ಲ: ಸೈಬರ್ ಅಪರಾಧ (Cybercrime) ಆನ್ ಲೈನ್ ವಂಚನೆ ಪ್ರಕರಣ ಬಗ್ಗೆ ಪ್ರತಿ ದಿನ ವರದಿಯಾಗುತ್ತಲೇ ಇರುತ್ತವೆ. ನಿವೃತ್ತ ಬ್ಯಾಂಕ್ (Retired Bank Mnager) ಅಧಿಕಾರಿಯೇ ದೊಡ್ಡ ಮೊತ್ತದ ವಂಚನೆಗೆ ಒಳಗಾಗಿದ್ದರು. ನಿವೃತ್ತ ಮಹಿಳಾ ಅಧಿಕಾರಿಗೆ ನೀವು 7.5 ಲಕ್ಷ ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದೀರಿ ಎಂದು ನಂಬಿಸಿ 12.5 ಲಕ್ಷ ರೂಪಾಯಿ (Fraud) ವಂಚಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.
ನೀವು ನಾಪ್ಟೋಲ್ ಕಂಪನಿಯಿಂದ ಲಾಟರಿ ಗೆದ್ದಿದ್ದೀರಿ ಎಂದು ಹೇಳಿದ್ದು ಮಹಿಳೆ ನಿವಾಸದ ವಿಳಾಸಕ್ಕೆ ಸ್ಕ್ರಾಚ್ ಕಾರ್ಡ್ ಕಳಿಸಿದ್ದಾರೆ. ಹಣ ಪಡೆದುಕೊಳ್ಳಲು ಮೊಬೈಲ್ ನಂಬರ್ ಗೆ ಕರೆ ಮಾಡಿ ಎಂದು ನಂಬರ್ ನೀಡಿದ್ದಾರೆ. ನಂಬಿ ಕರೆ ಮಾಡಿದ ಮಹಿಳೆ ಹಣ ಕಳೆದುಕೊಂಡಿದ್ದಾರೆ.
ನಿಮ್ಮ ಬ್ಯಾಂಕ್ ಖಾತೆ ಕೆವೈಸಿ ಅಪ್ ಡೇಟ್ ಮಾಡಬೇಕು... ನಿಮ್ಮ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗಿದೆ ಹೀಗೆ ಹತ್ತು ಹಲವು ಕಾರಣ ಹೇಳಿ ಕರೆ ಮಾಡಿ ವಂಚನೆಗೆ ಯತ್ನ ಮಾಡುತ್ತಲೇ ಇದ್ದಾರೆ. ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿಗೂ ವಂಚನೆ ಮಾಡಲಾಗಿತ್ತು. ಈಗ ಕೊರೋನಾ ಮತ್ತು ಓಮಿಕ್ರೋನ್ ಸಹ ವಂಚಕರ ಕೈಯಲ್ಲಿ ಬೇರೆ ರೀತಿ ಬಳಕೆಯಾಗುತ್ತಿದೆ.