ರಾಧಿಕಾ ಕುಮಾರಸ್ವಾಮಿ ಜತೆ ನಿಕಟ ಸಂಪರ್ಕ ಹೊಂದಿದ್ದ ಫ್ರಾಡ್ ಯುವರಾಜನಿಗೆ ಬಿಗ್ ಶಾಕ್

By Suvarna NewsFirst Published Jan 22, 2021, 3:33 PM IST
Highlights

ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ನಾಯಕರಗಳ ಹೆಸರು ಹೇಳಿಕೊಂಡು ಹಲವರಿಗೆ ವಂಚನೆ ಮಾಡಿದ್ದ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮಿಗೆ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ.

ಬೆಂಗಳೂರು, (ಜ.22): ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವರಾಜ್ ಆಸ್ತಿ ಜಪ್ತಿಗೆ ಬೆಂಗಳೂರಿನ ಸಿಸಿಹೆಚ್‌ 67ನೇ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಯುವರಾಜ್​ಗೆ ಸೇರಿದ ಸುಮಾರು 80 ರಿಂದ 90 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಆಗಲಿದೆ.  ಯುವರಾಜ್​ ಜೊತೆ ಆತನ ಪತ್ನಿ ಆಸ್ತಿ ಕೂಡ ಜಪ್ತಿ ಆಗಲಿದೆ.

ನಿವೃತ್ತ ಜಡ್ಜ್‌ನ್ನೇ ವಂಚಿಸಿದ ಯುವರಾಜ್..!

ಆಸ್ತಿ ಜಪ್ತಿಗೆ ಸಿಸಿಬಿ ಪೊಲೀಸರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸಿಸಿಹೆಚ್‌ 67ನೇ ನ್ಯಾಯಾಲಯ, ಆಸ್ತಿ ಜಪ್ತಿ ಮಾಡಲು ನ್ಯಾಯಾಧೀಶರಾದ ಕಾತ್ಯಾಯಿನಿ ಅವರು ಒಪ್ಪಿಗೆ ನೀಡಿ ಯುವರಾಜ್‌ಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಹಾಸನ, ಮದ್ದೂರು, ದ್ವಾರ ಕೊತ್ತನಹಳ್ಳಿಯಲ್ಲಿ ನಿವೇಶನ, ಮನೆಗಳು, ಜಮೀನು ಸೇರಿ ಒಟ್ಟು 26 ಆಸ್ತಿ ಮುಟ್ಟುಗೋಲಿಗೆ ಆದೇಶ ಹೊರಡಿಸಲಾಗಿದೆ. 

ಯುವರಾಜ್​ ಹಲವರಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿರುವ ಆರೋಪ ಇದೆ. ಈತ ನಿವೃತ್ತ ಮಹಿಳಾ ನ್ಯಾಯಮೂರ್ತಿಗೆ ಗವರ್ನರ್​ ಹುದ್ದೆ ಕೊಡಿಸುವುದಾಗಿ ಆಸೆ ತೋರಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ ಎಂದು ವಿಲ್ಸನ್​ ಗಾರ್ಡನ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

click me!