ಮಂಡ್ಯ: ಅಕ್ರಮ ಸ್ಫೋಟಕ ಸಾಗಣೆ, ಇಬ್ಬರ ಬಂಧನ

By Kannadaprabha NewsFirst Published Jan 22, 2021, 3:09 PM IST
Highlights

ದಾಳಿ ವೇಳೆ ಸುಮಾರು 1,750 ಕೆ.ಜಿ. ಜೆಲ್‌ಮತ್ತು 1600 ಸ್ಫೋಟಕ ವಶ| ಮಾಲು ಸಮೇತ ಟೆಂಪೋವನ್ನು ವಶ| ಮಂಡ್ಯ ಜಿಲ್ಲೆಯ ಕೆ.ಆರ್‌.ನಗರ ತಾಲೂಕಿನ ಭೇರ್ಯ ಗ್ರಾಮದಿಂದ ಶ್ರೀರಂಗಪಟ್ಟಣಕ್ಕೆ ಅಕ್ರಮ ಸಾಗಣೆ|  

ಕೆ.ಆರ್‌.ಪೇಟೆ(ಜ.22): ಕೆ.ಆರ್‌.ನಗರ ತಾಲೂಕಿನ ಭೇರ್ಯ ಗ್ರಾಮದಿಂದ ಶ್ರೀರಂಗಪಟ್ಟಣಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಸ್ಫೋಟಕವಿದ್ದ ಟೆಂಪೊವೊಂದನ್ನು ವಶಕ್ಕೆ ಪಡೆದಿರುವ ಕೆ.ಆರ್‌.ಪೇಟೆ ಗ್ರಾಮಾಂತರ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. 

ಬುಧವಾರ ರಾತ್ರಿ 9ರ ಸುಮಾರಿಗೆ ಭೇರ್ಯ ಕಡೆಯಿಂದ ಕೆಎ 09 ಡಿ, 7614 ಸಂಖ್ಯೆಯ ಟೆಂಪೋ ಅಕ್ಕಿಹೆಬ್ಬಾಳು ಮಾರ್ಗವಾಗಿ ಸಾಗುತಿತ್ತು. ಈ ವೇಳೆ ದಾಳಿ ನಡೆಸಿದ ಪೊಲೀಸರು, ಟೆಂಪೋ ಹಾಗೂ ಸುಮಾರು 1,750 ಕೆ.ಜಿ. ಜೆಲ್‌ಮತ್ತು 1600 ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ. ಚಾಲಕ ಸೇರಿ ಇಬ್ಬರನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಬಂಧಿತರಿಬ್ಬರು ಅಪ್ರಾಪ್ತರಾಗಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಖೋಟಾ ನೋಟಿನ ಜಾಲ ಪತ್ತೆ..!

ಅಕ್ಕಿಹೆಬ್ಬಾಳು ಬಳಿ ರಾತ್ರಿ ಗಸ್ತಿನಲ್ಲಿದ್ದ ಪಿಎಸ್‌ಐ ಸುರೇಶ್‌ನೇತೃತ್ವದ ಗ್ರಾಮಾಂತರ ಪೊಲೀಸರ ತಂಡ ಅನುಮಾನದ ಮೇರೆಗೆ ಟೆಂಪೋ ತಡೆದು ಪರಿಶೀಲನೆ ನಡೆಸಿದೆ. ಈ ವೇಳೆ ಟೆಂಪೋದಲ್ಲಿ ಪರವಾನಗಿ ಇಲ್ಲದೆ ಸುಮಾರು 1,750 ಕೆ.ಜಿ. ಜೆಲ್‌ಹಾಗೂ 1600 ಸ್ಫೋಟಕಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಮಾಲು ಸಮೇತ ಟೆಂಪೋವನ್ನು ವಶಕ್ಕೆ ಪಡೆದ ಪೊಲೀಸರು ಚಾಲಕ ಸೇರಿ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಆರೋಪಿಗಳಿಬ್ಬರು ಅಪ್ರಾಪ್ತರಾಗಿದ್ದಾರೆ.
 

click me!