
ರಾಮನಗರ (ನ.3) : ಕಂಚುಗಲ್ ಬಂಡೇಮಠದ ಶ್ರೀ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಾದ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ನೀಲಾಂಬಿಕೆ ಮತ್ತು ಮಹದೇವಯ್ಯ ಅವರು ಸಾಕ್ಷ್ಯನಾಶಕ್ಕೆ ಯತ್ನಿಸಿರುವ ವಿಚಾರ ಬೆಳಕಿಗೆ ಬಂದಿದೆ. ಆರೋಪಿಗಳ ಮೊಬೈಲ್ ಪರಿಶೀಲನೆ ವೇಳೆ ಸುಮಾರು 6 ತಿಂಗಳ ವಾಟ್ಸ್‌ಆಪ್ ಚಾಟ್ ಅನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಮೊಬೈಲ…ಗಳನ್ನು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಹನಿ ಲೇಡಿಯ ವಿಡಿಯೋ ಕಹಾನಿ! ಮತ್ತಷ್ಟು ಸ್ವಾಮೀಜಿಗಳು, ಮತ್ತಷ್ಟು ವಿಡಿಯೋ! ಪೊಲೀಸರೇ ದಂಗು!
ನೀಲಾಂಬಿಕೆ ಮೊದಲೇ ಪ್ಲಾನ್ ಮಾಡಿ ಹನಿಟ್ರ್ಯಾಪ್‌ಗೆ ಬಳಸಿದ್ದ ಮೊಬೈಲ… ನಾಶಪಡಿಸಿ ನಂತರ ಹೊಸ ಮೊಬೈಲ್ ಖರೀದಿಸಿದ್ದಾಳೆ. ಆ ಹೊಸ ಮೊಬೈಲ… ನಲ್ಲಿರುವ ಮಾಹಿತಿಗಳನ್ನೂ ಡಿಲೀಚ್ ಮಾಡಿದ್ದಾಳೆ. ಈಗ ಮೂವರ ಮೊಬೈಲ…ನಲ್ಲಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಹಾಗಾಗಿ ವಶಪಡಿಸಿಕೊಂಡಿರುವ ಮೊಬೈಲ…ನಲ್ಲಿನ ಕಾಲ…ಹಿಸ್ಟರಿ, ವಾಟ್ಸ… ಆಪ್ ಮೆಸೇಜ್ ರಿಕವರಿಗಾಗಿ ಬೆಂಗಳೂರಿನ ಎಫ್‌ಎಸ್‌ಎಲ…ಗೆ ಕಳುಹಿಸಲಾಗಿದೆ. ಸದ್ಯ ವೈರಲ… ಆಗಿರುವ ವಿಡಿಯೋಗಳನ್ನೇ ಆಧಾರವಾಗಿರಿಸಿಕೊಂಡು ಅದನ್ನು ರೆಕಾರ್ಡ್ ಮಾಡಿರುವ ಮೂಲ ಮೊಬೈಲ…ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆ ಮೊಬೈಲ್ ಪತ್ತೆಯಾದರೆ ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯ ಸಿಕ್ಕಂತಾಗಲಿದೆ.
ಮೂವರು ಆರೋಪಿಗಳು ಹನಿಟ್ರ್ಯಾಪ್ ಮಾಡಿದ್ದ ಸಿಡಿಗಳನ್ನು ಸಚ್ಚಿದಾನಂದಗೆ ತಲುಪಿಸಿದ್ದರು. ಇದೇ ವಿಚಾರ ಮುಂದಿಟ್ಟುಕೊಂಡು ಸಚ್ಚಿದಾನಂದಮೂರ್ತಿ ಸ್ವಾಮೀಜಿ ಬಳಿ ಮಾತನಾಡಿದ್ದರು. ಹಾಗಾಗಿ ಪೋಲಿಸರು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುವಂತೆ ಪೋಲಿಸರು ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್, ಮೂವರ ಬಂಧನ
ವೀರಶೈವ ಸಮಾಜದ ಮುಖಂಡ ಸಚ್ಚಿದಾನಂದ ವಿಚಾರಣೆ
ಮಾಗಡಿ ಪೊಲೀಸರು ವೀರಶೈವ ಸಮಾಜದ ಮುಖಂಡ ಸಚ್ಚಿದಾನಂದ ಮೂರ್ತಿ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಶ್ರೀ ಬಸವಲಿಂಗ ಸ್ವಾಮೀಜಿ ಬರೆದಿದ್ದ ಡೆತ್‌ನೋಟ್‌ನಲ್ಲಿ ಸಚ್ಚಿದಾನಂದ ಮೂರ್ತಿ ಹೆಸರು ಉಲ್ಲೇಖಿಸಿದ್ದರು. ಅದರಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀಸರು ನೋಟಿಸ್ ನೀಡಿ ಬೆಂಗಳೂರು ಬಸವೇಶ್ವರ ನಗರ ವಾಸಿಯಾದ ಸಚ್ಚಿದಾನಂದಮೂರ್ತಿಯನ್ನು ವಿಚಾರಣೆಗೆ ಒಳಪಡಿಸಿದರು. ಪ್ರಕರಣದಲ್ಲಿ ಈಗಾಗಲೇ ಬಂಧಿತ ಮೂವರು ಆರೋಪಿಗಳು ಸ್ವಾಮೀಜಿಯನ್ನು ಹನಿಟ್ರ್ಯಾಪ್ ಮಾಡಿದ್ದ ಸಿಡಿಗಳನ್ನು ಸಚ್ಚಿದಾನಂದನಿಗೆ ತಲುಪಿಸಿದ್ದರು. ಇದೇ ವಿಚಾರ ಮುಂದಿಟ್ಟುಕೊಂಡು ಸಚ್ಚಿದಾನಂದಮೂರ್ತಿ ಸ್ವಾಮೀಜಿ ಬಳಿ ಮಾತನಾಡಿದ್ದರು. ಹಾಗಾಗಿ ಪೋಲಿಸರು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುವಂತೆ ಪೋಲಿಸರು ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ