ಗಂಡನ ಸಾಲಕ್ಕೆ ಹೆಂಡತಿ, ಮಕ್ಕಳಿಗೆ ಚಿತ್ರಹಿಂಸೆ; ಸಾಲ ಕೊಡುವವರು ಹೀಗೂ ಇರ್ತಾರಾ!

By Ravi Nayak  |  First Published Jul 28, 2022, 11:19 AM IST
  • ತಂದೆ ಮಾಡಿದ ಸಾಲಕ್ಕೆ ಮಕ್ಕಳಿಗೆ ಶಿಕ್ಷೆ!
  • ಹಣ ವಸೂಲಿ ಮಾಡಲು ಮಕ್ಕಳನ್ನೇ ಜೀತಕ್ಕಿಟ್ಟುಕೊಂಡ ಮಹಿಳೆಯರು
  • ಮೀಟರ್ ಬಡ್ಡಿ ದಂಧೆಗೆ ನಲುಗಿ ಹೋದ ನಾಲ್ವರು ಮಕ್ಕಳು
  • ಮಕ್ಕಳನ್ನ ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ ಮಹಿಳೆಯರು

ವರದಿ ನರಸಿಂಹ ಮೂರ್ತಿ ಕುಲಕರ್ಣಿವರದಿ ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಜು.28) :ಕಷ್ಟ ಅಂತಾ ಕಂಡಕಂಡವರ ಬಳಿ ಸಾಲ ಮಾಡಿದ್ದ. ಕೊನೆಗೆ ಆ ಬಡ ಕಾರ್ಮಿಕ ಅನಾರೋಗ್ಯಕ್ಕೆ ತುತ್ತಾಗಿ ಜೀವ ಬಿಟ್ಟಿದ್ದ. ಆದ್ರೆ ಸಾಲ ಕೊಟ್ಟವರು ಮಾತ್ರ ಆತ ಸತ್ತ ನಂತರವೂ ಸುಮ್ಮನಾಗಲಿಲ್ಲ. ನಿಮ್ಮ ಅಪ್ಪ ಮಾಡಿದ ಸಾಲ ನೀವೂ ತೀರಿಸಿ ಅಂತಾ ನಾಲ್ಕು ಮಕ್ಕಳ ಜೊತೆ ತಾಯಿಯನ್ನು ಕೂಡ ಒಂದು ರೀತಿಯಲ್ಲಿ ಜೀತಕ್ಕಿರಿಸಿಕೊಂಡಿದ್ರು. ಮಕ್ಕಳಿಗೆ ನಿತ್ಯ ಚಿತ್ರಹಿಂಸೆ ನೀಡೋದು ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡ್ತಿರೋ ವಿಷಯ ಒಬ್ಬರಿಂದ ಮತ್ತೊಬ್ಬರಿಗೆ ಹರಡೋ ಮೂಲಕ ಮಹಿಳೆಯರ ತಂಡ ವೊಂದು ಮನೆಯ ಮೇಲೆ ದಾಳಿ ಮಾಡೋ ಮೂಲಕ ಮಕ್ಕಳನ್ನು ರಕ್ಷಣೆ ಮಾಡಿ ಪೊಲೀಸರಿಗೊಪ್ಪಿಸಿರೋ ಘಟನೆ ಬಳ್ಳಾರಿಯಲ್ಲಿ ನಡೆದಿದೆ..

Tap to resize

Latest Videos

undefined

ಮೀಟರ್ ಬಡ್ಡಿ ದಂಧೆ:
ಹೌದು, ಆ ಮಕ್ಕಳು ಆಟ ಆಡ್ತಾ ಪಾಠ ಕಲಿಯಬೇಕಾಗಿದ್ದ ವಯಸ್ಸು. ಆದ್ರೆ ತಂದೆ ಮಾಡಿದ ತಪ್ಪಿಗೆ ಅನುಭವಿಸ ಬಾರದ ಶಿಕ್ಷೆ ಅನುಭವಿಸಿದ್ದಾರೆ. ಕೂಲಿ ಕಾರ್ಮಿಕನಾಗಿದ್ದ ಈ ಮಕ್ಕಳ ತಂದೆ ನಾಗರಾಜ ಬಳ್ಳಾರಿಯ ರಾಜ್ಯೋತ್ಸವ ನಗರದ ಸಫುರಾ ಎನ್ನುವವರ ಬಳಿ 3೦ಸಾವಿರ ರೂಪಾಯಿ ಸಾಲ ಪಡೆದಿದ್ದ. ಸಾಲ ತೀರಿಸುವ ಮುನ್ನವೇ ನಾಗರಾಜ ಅನಾರೋಗ್ಯ ದಿಂದ ಸಾವನ್ನಪ್ಪಿದ್ದನು. ಆದ್ರೆ ನಾಗರಾಜಗೆ ಬಡ್ಡಿಗೆ ಸಾಲ ನೀಡಿದ್ದ ಸಪುರಾ ಎನ್ನುವ ವ್ಯಕ್ತಿಗೆ ಮುನ್ನಿ ಮತ್ತು ಬೀಬಿ ಎನ್ನುವವರು ಹಣ ಕೊಟ್ಟು ಸಾಲ ತೀರಿಸಿದ್ರು.  ಸಾಲ ತೀರಿಸಿದ ಬಳಿಕ ಮುನ್ನಿ ಮತ್ತು ಬೀಬಿ ನಾಗರಾಜನ ನಾಲ್ಕು ಮಕ್ಕಳ ಪೈಕಿ ಮೂವರನ್ನು ಸಾಲ ತೀರುವವರೆಗೂ ತಮ್ಮ ಬಳಿ ಜೀತಕ್ಕೀರಿಸಿ ಕೊಂಡಿದ್ರು.

ಪಿಂಚಣಿ ಇಲ್ಲ, ತುತ್ತು ಅನ್ನಕ್ಕಾಗಿ ಬಿಪಿಎಲ್ ಕಾರ್ಡನ್ನು ಆಶ್ರಯಿಸಿದ ಮಾಜಿ ಶಾಸಕ!

 ಜೀತಕ್ಕಿಟ್ಟುಕೊಂಡಿದ್ದಷ್ಟೇ ಅಲ್ಲದೇ ಅಮಾನುಷವಾಗಿ ವರ್ತಿಸಿ ಮಕ್ಕಳ ಮೇಲೆ ಆಗಾಗ ಹಲ್ಲೆ ಮಾಡಿದ್ದಾರೆ.  ಮಕ್ಕಳನ್ನ ಬೇರೆ  ಮನೆಗಳಿಗೆ ಕೆಲಸಕ್ಕೆ‌ ಕಳುಹಿಸಿ ಹಣ ವಸೂಲಿ ಮಾಡಿದ್ದಾರೆ. ಮಕ್ಕಳು ಹಾಗೂ ನಾಗರಾಜ ಪತ್ನಿ ಸುನೀತಾ ಗಂಡ ಮಾಡಿದ ಸಾಲ ತೀರಿಸಲು ಕಳೆದ  10 ತಿಂಗಳಿನಿಂದ ಕಂಡ ಕಂಡವರ ಮನೆಕೆಲಸ‌ ಮಾಡಿ ಹಣ ತಂದು ಕೊಟ್ಟರು ಮುನ್ನಿ ಹಾಗೂಬೀಬಿಯ ಧನದಾಹ ತೀರಿಲ್ಲ. ಇದನ್ನು ನೋಡಲಾಗದ ಸ್ಥಳೀಯರು ಕಳೆದ ರಾತ್ರಿ ಬಳ್ಳಾರಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಂಜುಳಾ‌ ನೇತೃತ್ವದಲ್ಲಿ ಮುನ್ನಿ ಮನೆ ಮೇಲೆ‌ ಪೊಲೀಸರ ಜೊತೆ ದಾಳಿ ನಡೆಸಿ ಮಕ್ಕಳನ್ನ ಬಂಧಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾಳಿ ಬಳಿಕ‌ ಆರೋಪಿಗಳು ನಾಪತ್ತೆ:
ಮನೆಗೆ ದಾಳಿ‌ ನಡೆಸುತ್ತಿದ್ದಂತೆ ಮುನ್ನಿ ಮತ್ತು  ಬೀಬಿ ಮನೆಯಿಂದ ಪರಾರಿಯಾಗಿದ್ದಾರೆ.  ಗಣೇಶ, ಅಂಬು, ಲತಾ, ಚಿನ್ನಾ ಎನ್ನುವ ಮಕ್ಕಳನ್ನಯ ಬ್ರೂಸ್ ಪೇಟರ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದು ಮಾಹಿತಿ ಪಡೆದಿದ್ದಾರೆ. ಮುನ್ನಿ ಹಾಗೂ ಬೀಬಿಯ ಮನೆಯವರು ಮಾತ್ರ ತಪ್ಪು ಒಪ್ಪಿಕೊಳ್ಳುತ್ತಿಲ್ಲ. ಸಾಲ ಕೊಟ್ಟಿದ್ದು ನಿಜ;  ಆದ್ರೆ ಅವರೇ ಮಕ್ಕಳನ್ನ ನಮ್ಮ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ. ಮಕ್ಕಳ ತಂದೆ ಸತ್ತಾಗ ಯಾರು ಸಹಾಯ ಮಾಡಲಿಲ್ಲ. ನಾವು ಮಾಡಿದ್ದೇವೆ. ಕೊಟ್ಟ ಹಣ ವಸೂಲಿ ಮಾಡುವುದರಲ್ಲೇನು ತಪ್ಪಿದೆ ಅಂತಾ ವಾದಿಸುತ್ತಿದ್ದಾರೆ.
 ಮುನ್ನಿ ಹಾಗೂ ಬೀಬಿ ಸಂಬಂಧಿಕ ಶೇಕ್ಷಾವಲಿ

ದೆವ್ವದ ಜೀತ..! ಮೌಢ್ಯದ ಹೆಸರಿನಲ್ಲಿ ಮಕ್ಕಳೇ ಜೀತದಾಳುಗಳು!

ಬಂಧಮುಕ್ತಗೊಂಡ ಮಕ್ಕಳು:

ಸದ್ಯ ನಾಲ್ಕು ಮಕ್ಕಳು ಮತ್ತು ತಾಯಿಯನ್ನು ಬಂಧಮುಕ್ತ ಗೊಳಿಸಿದ ನಂತರ ಬ್ರೂಸ್ ಪೇಟೆ ಪೊಲೀಸರು ಮಕ್ಕಳ ಬಳಿ‌ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸೋದಾಗಿ  ಹೇಳುತ್ತಿದ್ದಾರೆ. ಅದೇನೆ ಇರಲಿ  ಗಂಡ ಮಾಡಿದ ಸಾಲಕ್ಕೆ ಪತ್ನಿ ಹಾಗೂ ನಾಲ್ಕು ಮಕ್ಕಳು ಚಿತ್ರಹಿಂಸೆ ಅನುಭವಿಸಿದ್ದು ಮೀಟರ್ ಬಡ್ಡಿ ದಂಧೆಗೆ ಸಾಕ್ಷಿಯಾಗಿದೆ. 
 

click me!