ಪಾಕಿಸ್ತಾನ ವಿರುದ್ಧ ಭಾರತಕ್ಕೆ ಸೋಲು: ಪಾಕ್‌ ಪರ ಜಯಘೋಷ, ಕೇಸ್ ಬುಕ್

Published : Sep 08, 2022, 12:25 PM ISTUpdated : Sep 08, 2022, 12:28 PM IST
ಪಾಕಿಸ್ತಾನ ವಿರುದ್ಧ ಭಾರತಕ್ಕೆ ಸೋಲು: ಪಾಕ್‌ ಪರ ಜಯಘೋಷ, ಕೇಸ್ ಬುಕ್

ಸಾರಾಂಶ

ಪಾಕ್ ವಿರುದ್ದದ ಪಂದ್ಯದಲ್ಲಿ ಭಾರತ ಸೋಲು ಹಿನ್ನೆಲೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಿ ಸಂದೇಶ ರವಾನಿಸಿದ್ದ ಮೂವರ ವಿರುದ್ದ FIR ದಾಖಲಾಗಿದೆ.

ಕೋಲಾರ , (ಸೆಪ್ಟೆಂಬರ್.08): ಮೊನ್ನೇ ಏಷ್ಯಾಕಪ್ ನಲ್ಲಿ ಭಾರತ ತಂಡದ ವಿರುದ್ದ ಪಾಕಿಸ್ತಾನ ಜಯ ಹಿನ್ನಲೆಯಲ್ಲಿ ಪಾಕ್‌ ಪರ ಜಯಘೋಷ ಮೊಳಗಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಘಟನೆ ನಡೆದಿದೆ. ಪಾಕ್ ವಿರುದ್ದದ ಪಂದ್ಯದಲ್ಲಿ ಭಾರತ ಸೋಲು ಹಿನ್ನೆಲೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಿ ಸಂದೇಶ ರವಾನಿಸಿದ್ದ ಮೂವರ ವಿರುದ್ದ FIR ದಾಖಲಾಗಿದೆ. ಮೂವರಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.

Asia Cup 2022 ರಿಜ್ವಾನ್‌ ಅರ್ಧಶತಕದ ಆಟ, ಪಾಕಿಸ್ತಾನಕ್ಕೆ ಗೆಲುವು

ಸಹೇಲ್ ಪಾಷಾ,ತೋಹಿದ್ ಪಾಷ,ಮುನ್ಸೂರ್ ಉಲ್ಲಾ  ವಿರುದ್ದ FIR ದಾಖಲಾಗಿದೆ. ಪಾಕಿಸ್ತಾನ ಧ್ಗವಜದೊಂದಿಗೆ  ಭಾರತ ತಂಡಕ್ಕೆ ಅಣುಕಿಸುವ ಹಾಗೆ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಕಿಡಿಗೇಡಿಗಳು.

Kaisa harai mamu ek bar boldalo haters ko ee. Thumari smile ko fida hojartin haters king always king. Kya pak hi kyat um, support pak ಎಂದು ಪಾಕಿಸ್ಥಾನದ ಧ್ವಜ ಹಾಕಿದ್ದರು.

ಸಧ್ಯ ಮೂವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮುಖಂಡ ರಾಮಾಂಜಿ ದೂರು ನೀಡಿದ್ದರೆ. ಈ ದೂರಿನ ಅನ್ವಯ ಶ್ರೀನಿವಾಸಪುರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನಿಬ್ಬರು ಎಸ್ಕೇಪ್ ಆಗಿದ್ದು, ಅವರ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!