
ಬೆಂಗಳೂರು(ಜೂ.17): ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ದುಂಡಾವರ್ತನೆ ಮಾಡಿದ್ದಾನೆ ಎಂಬ ಆರೋಪವೊಂದು ಕೇಳಿ ಬಂದಿದೆ. ಟ್ರಿಪ್ ಕ್ಯಾನ್ಸಲ್ ಮಾಡದಿದ್ದಕ್ಕೆ ಪ್ರಯಾಣಿಕನಿಗೆ ಆಟೋದಿಂದ ಗುದ್ದಿ, ಹಲ್ಲೆ ಮಾಡಿದ್ದಾನೆ ಅಂತ ಆರೋಪಿಸಲಾಗಿದೆ.
ಪ್ರಯಾಣಿಕ ಆನ್‌ಲೈನ್‌ನಲ್ಲಿ ಆಟೋ ಬುಕ್ ಮಾಡಿದ್ದ, ನಂತರ ಬುಕಿಂಗ್ ಕ್ಯಾನ್ಸಲ್ ಮಾಡಿ ಆಫ್‌ಲೈನ್ ಬರುವಂತೆ ಆಟೋ ಚಾಲಕ ಕೇಳಿದ್ದನಂತೆ. ಆಫ್‌ಲೈನ್ ಆಗಲ್ಲ ಎಂದಿದ್ದಕ್ಕೆ ಪ್ರಯಾಣಿಕನ ಜೊತೆ ಆಟೋ ಚಾಲಕ ದುಂಡಾವರ್ತನೆ ಮಾಡಿದ್ದಾನೆ. ಪ್ರಯಾಣಿಕ ಇದ್ದ ಸ್ಥಳಕ್ಕೆ ಬಂದು ಆಟೋದಲ್ಲಿ ಡಿಕ್ಕಿ ಹೊಡೆದ ಚಾಲಕ. ಬಳಿಕ ಪ್ರಯಾಣಿಕನ ಮೇಲೆಯೇ ಹಲ್ಲೆಗೆ ಕೂಡ ಯತ್ನಿಸಿದ್ದಾನೆ.
ಬೆಂಗಳೂರು: ರೌಡಿಯ ಮಚ್ಚಿನ ಹಿಡಿಕೆ ಏಟಿಗೆ ವ್ಯಕ್ತಿ ಸಾವು
ಪ್ರಯಾಣಿಕ ತನ್ನ ತಾಯಿಯ ಜೊತೆಗೆ ಆಟೋಗೆ ಕಾದಿದ್ದ, ತಾಯಿ ಮುಂದೆಯೇ ಪ್ರಯಾಣಿಕನ ಮೇಲೆ ಆಟೋ ಚಾಲಕ ದುಂಡಾವರ್ತನೆ ಮಾಡಿದ್ದಾನೆ.
ಆಟೋ ಚಾಲಕನ ದುಂಡಾವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಟೋ ಚಾಲಕನ ದುರ್ವತನೆ ಆರೋಪಿಸಿ ಪ್ರಯಾಣಿಕ ಟ್ವೀಟ್ ಮಾಡಿದ್ದಾನೆ. ಟ್ವೀಟ್ ಮೂಲಕ ನಗರ ಪೊಲೀಸರಿಗೆ ಪ್ರಯಾಣಿಕ ದೂರು ನೀಡಿದ್ದಾನೆ. ಆಟೋ ಸಂಖ್ಯೆ ನಮೂದಿಸಿ ಸೂಕ್ತ ಕ್ರಮಕ್ಕೆ ದೂರು ನೀಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ