ದೊಡ್ಡಕಲ್ಲಸಂದ್ರದ ಮುತ್ತುರಾಜ್ ಬಂಧಿತ ಆಟೋ ಚಾಲಕ. ಸೆ.2ರಂದು ರಾಜಾಜಿನಗರದ ಡಾ| ರಾಜ್ ಕುಮಾರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ನೀತಿ ಶರ್ಮಾ ವವರು ನೀಡಿದ ದೂರಿನ ಆಟೋ ಬಂಧಿಸಿ ಚಾಲಕನ್ನು ವಿಚಾರಣೆಗೆ ಒಳ ಪಡಿಸಲಾಗಿದೆ ಎಂದು ತಿಳಿಸಿದ ಅಧಿಕಾರಿಗಳು
ಬೆಂಗಳೂರು(ಸೆ.06): ಓಲಾ ಆಟೋ ಬುಕಿಂಗ್ ಕ್ಯಾನಲ್ ಮಾಡಿದ್ದಕ್ಕೆ ಹೊರರಾಜ್ಯದ ವಿದ್ಯಾರ್ಥಿ ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ ಆರೋಪದಡಿ ಆಟೋ ಚಾಲಕನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಕಲ್ಲಸಂದ್ರದ ಮುತ್ತುರಾಜ್ ಬಂಧಿತ ಆಟೋ ಚಾಲಕ. ಸೆ.2ರಂದು ರಾಜಾಜಿನಗರದ ಡಾ| ರಾಜ್ ಕುಮಾರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ನೀತಿ ಶರ್ಮಾ ವವರು ನೀಡಿದ ದೂರಿನ ಆಟೋ ಬಂಧಿಸಿ ಚಾಲಕನ್ನು ವಿಚಾರಣೆಗೆ ಒಳ ಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀತಿ ಶರ್ಮಾ ಮತ್ತು ಆಕೆಯ ಸ್ನೇಹಿತೆ ಪ್ರತ್ಯೇಕವಾಗಿ ಓಲಾ ಆ್ಯಪ್ ನಲ್ಲಿ ಬಿಹಾರ ಮೂಲದ ವಿದ್ಯಾರ್ಥಿನಿ ನೀತಿ ಮೇರೆಗೆ ಆಟೋರಿಕ್ಷಾ ಬುಕ್ ಮಾಡಿದ್ದರು. ನೀತಿ ಶರ್ಮಾ ಬುಕ್ ಮಾಡಿದ್ದ ಆಟೋ ನಿಗದಿತ ಸ್ಥಳಕ್ಕೆಮೊದಲು ಬಂದಿದೆ. ಈ ವೇಳೆ ಸ್ನೇಹಿತೆ ಮಾಡಿದ್ದ ವನು ಕ್ಯಾನ್ಸಲ್ ಮಾಡಿ ದ್ದಾರೆ. ಬಳಿಕ ಇಬ್ಬರು ಒಂದೇ ಆಟೋ ರಿಕ್ಷಾ ಏರಿ ಹೊರಟ್ಟಿದ್ದಾರೆ.
undefined
ಕಿಲ್ಲಿಂಗ್ ಸ್ಟಾರ್‌ನ ಕರಾಳ ಮುಖ: ರೇಣುಕಾಸ್ವಾಮಿಯ ಅಶ್ಲೀಲ ಮೆಸೇಜ್ ಓದ್ತಾ ಓದ್ತಾ ಚಚ್ಚಿದ ದರ್ಶನ್..!
ಅಷ್ಟರಲ್ಲಿ ಸ್ಥಳಕ್ಕೆ ಬಂದಿದ್ದ ಆಟೋ ಚಾಲಕ ಮುತ್ತುರಾಜ್, ನೀತಿ ಹಾಗೂ ಆಕೆಯ ಸ್ನೇಹಿತೆ ಪ್ರಯಾಣಿಸುತ್ತಿದ್ದ ಆಟೋ ತಡೆದು ಏಕೆ ಬುಕಿಂಗ್ ಕ್ಯಾನ್ಸಲ್ ಮಾಡಿದ್ದು ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ನೀತಿ ಸ್ನೇಹಿತೆ ಬೇಗ ಕಾಲೇಜಿಗೆ ಹೋಗಬೇಕಿತ್ತು. ನಾನು ಬುಕ್ ಮಾಡಿ ದ್ದ ಆಟೋ ಬೇಗ ಬಂದಿದ್ದರಿಂದ ನಿಮ್ಮ ಆಟೋ ಕ್ಯಾನ್ಸಲ್ ಮಾಡಿ ತೆರಳುತ್ತಿ ದೇವೆ ಎಂದಿದ್ದಾರೆ. ಚಾಲಕ ಮುತ್ತುರಾಜ್, ನೀತಿಶರ್ಮಾ ಅವರನ್ನು ಅಚಾಚ್ಯ ಶಬ್ದಗಳಿಂದ ನಿಂದಿ ಸಿದ್ದಾನೆ. ಇದನ್ನು ಮೊಬೈಲ್‌ನಲ್ಲಿ ರೆಕಾ ರ್ಡ್ ಮಾಡಲು ಮುಂದಾದಾಗ, ಆಕೆಯ ಕೈಗೆ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಬಳಿಕ ನೀತಿಶರ್ಮಾ ಪ್ರಯಾಣಿಸುತ್ತಿದ್ದ ಆಟೋ ಚಾಲಕ ಮಧ್ಯ ಪ್ರವೇಶಿಸಿ, ಮುತ್ತುರಾಜ್‌ನನ್ನು ಸಮಾಧಾನಪಡಿಸಿ ಸ್ಥಳದಿಂದ ಕಳುಹಿಸಿದ್ದಾರೆ. ಚಾಲಕ ಮುತ್ತುರಾಜ್ ವರ್ತನೆ ವಿಡಿ ಯೋ ಹಂಚಿಕೊಂಡು ಘಟನೆ ಬಗ್ಗೆ ಬರೆದುಕೊಂಡಿದ್ದರು. ಓಲಾ ಕಂಪನಿ ಹಾಗೂ ನಗರ ಪೊಲೀಸರಿಗೂ ಟ್ಯಾಗ್ ಮಾಡಿದ್ದರು.
ಘಟನೆ ನಡೆದ ಸ್ಥಳದ ಆಧಾರದ ಮೇಲೆ ಮಾಗಡಿ ರಸ್ತೆ ಠಾಣೆ ಪೊಲೀಸರು, ನೀತಿ ಶರ್ಮಾ ಅವರ ದೂರಿಗೆ ಸಂದಿಸಿದ್ದಾರೆ. ನೀತಿಯಿಂದ ದೂರು ಪಡೆದು ಪ್ರಕರಣ ದಾಖಲಿಸಿ, ಆಟೋ ಚಾಲಕ ಮುತ್ತುರಾಜ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.