ಸ್ನೇಹಿತರ ಬಳಿ ಚೀಟಿ ಹಾಕಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದ ಹೆಂಡತಿಯ ಸಾಲವನ್ನ ತೀರಿಸಿದ ಗಂಡನಿತ್ಯ ಬೈಯುತ್ತಿದ್ದ, ಗಂಡನ ಬೈಗುಳಕ್ಕೆ ಬೇಸತ್ತ ಹೆಂಡತಿ ಗಂಡನ ಕೊಲೆಗೆ ಸುಪಾರಿ ಕೊಟ್ಟಿದ್ದ ಘಟನೆ ಪೊಲೀಸರ ತನಿಖೆಯಿಂದ ಬಯಲಾಗಿದೆ.
ದೊಡ್ಡಬಳ್ಳಾಪುರ (ಜೂ.07): ಸ್ನೇಹಿತರ ಬಳಿ ಚೀಟಿ ಹಾಕಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದ ಹೆಂಡತಿಯ ಸಾಲವನ್ನ ತೀರಿಸಿದ ಗಂಡನಿತ್ಯ ಬೈಯುತ್ತಿದ್ದ, ಗಂಡನ ಬೈಗುಳಕ್ಕೆ ಬೇಸತ್ತ ಹೆಂಡತಿ ಗಂಡನ ಕೊಲೆಗೆ ಸುಪಾರಿ ಕೊಟ್ಟಿದ್ದ ಘಟನೆ ಪೊಲೀಸರ ತನಿಖೆಯಿಂದ ಬಯಲಾಗಿದೆ. ಕಳೆದ ಮೇ 25 ರಂದು ದರೋಡೆ ಯತ್ನ ಕೇಸ್ ಗೆ ಈಗ ಟ್ವಿಸ್ಟ್ ಸಿಕ್ಕಿದ್ದು, ಹೆಂಡತಿಯೇ ಗಂಡನ ಕೊಲೆಗೆ ಸುಫಾರಿ ನೀಡಿದ್ದಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.
ಬೆಂಗಳೂರಿನ ಟಿ.ದಾಸರಹಳ್ಳಿಯ ಭುವನೇಶ್ವರ ನಗರದ ನಿವಾಸಿ 44 ವರ್ಷದ ಮಮತಾ ಗಂಡನ ಕೊಲೆಗೆ ಸುಪಾರಿ ಕೊಟ್ಟ ಕಿಲಾಡಿ ಹೆಣ್ಣು. ಈಕೆಯ ಗಂಡ ಮುಕುಂದ ಬೆಂಗಳೂರು ಗ್ರಾಮಾಂತರ ಡಿಡಿಪಿಐ ಕಚೇರಿಯಲ್ಲಿ FDA ಆಗಿ ಕೆಲಸ ಮಾಡುತ್ತಿದ್ದ. ಹೆಂಡತಿ ಮಮತಾ ಪಕ್ಕದ್ಮನೆಯವರ ಬಳಿ ಚೀಟಿ ಹಾಕಿದ್ದಲ್ಲದೆ ತನ್ನ ಸ್ನೇಹಿತರನ್ನು ಕರೆದು ಚೀಟಿ ಹಾಕಿಸಿದ್ಳು, ಚೀಟಿ ನಡೆಸುತ್ತಿದ್ದ ಪಕ್ಕದ್ಮನೆಯವಳು ಚೀಟಿ ಹಣದೊಂದಿಗೆ ಪರಾರಿಯಾಗಿದ್ಳು, ಚೀಟಿ ಹಾಕಿದ ಮಮತಾಳ ಸ್ನೇಹಿತರು ಹಣ ಕೇಳೊಕ್ಕೆ ಶುರು ಮಾಡಿದ್ರು, ಚೀಟಿದಾರರ ಕಿರುಕುಳದಿಂದ ಹೆಂಡತಿಯನ್ನ ಪಾರು ಮಾಡಲು ಗಂಡ ಮುಕುಂದ 25 ಲಕ್ಷ ಹಣ ಕೊಟ್ಟಿದ್ದ.
undefined
Ramanagara: ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನ!
ಹೆಂಡತಿ ಮಾಡಿದ ಘನಂದಾರಿ ಕೆಲಸಕ್ಕೆ ಸುಮ್ಮನಾದ ಆತ ನಿತ್ಯ ಬೈಯುತ್ತಿದ್ದ, ಗಂಡನ ಬೈಗುಳದಿಂದ ಬೇಸತ್ತು ಹೋಗಿದ್ದ ಮಮತಾ ತನ್ನ ನೋವನ್ನು ಸ್ನೇಹಿತೆ ತಸ್ಲೀಮಾ ಬಳಿ ಹೇಳಿಕೊಂಡಿದ್ಳು. ಬೈಯುವ ಗಂಡನನ್ನೇ ಮುಗಿಸುವ ಐಡಿಯಾ ಕೊಟ್ಟಿದ್ಳು, ಈ ಕೆಲಸಕ್ಕೆ ಬೇಕಿರುವ ಹುಡುಗರು ನನ್ನ ಬಳಿ ಇದ್ದಾರೆಂದು ಹೇಳಿದ್ಳು, ಬೆಂಗಳೂರಿನ ಕೆ.ಜಿ.ಹಳ್ಳಿಯ ಸೈಯದ್ ನಹೀಮ್ ನನ್ನ ಕರ್ಕೊಂಡು ಬಂದು ಮಮತಾಳಿಗೆ ಪರಿಚಯ ಮಾಡಿದ್ಳು. ಗಂಡನ ಕೊಲೆ ಸುಪಾರಿಗೆ 40 ಲಕ್ಷ ಫಿಕ್ಸ್ ಮಾಡಿ ತನ್ನ ಒಡವೆ ಅಡವಿಟ್ಟ 10 ಲಕ್ಷ ಹಣವನ್ನ ಸುಪಾರಿ ಹಂತಕರಿಗೆ ಅಡ್ವಾನ್ಸ್ ಹಣವನ್ನ ಕೊಟ್ಟು ಬಿಟ್ಟಳು ಮಮತಾ.
ಮುಕುಂದನಾ ಕೊಲೆಗೆ ಸುಪಾರಿ ಪಡೆದ ಸೈಯದ್ ನಹೀಮ್ ಶಿಡ್ಲಘಟ್ಟದ ಮೌಲಾನ ಜೊತೆ ಸೇರಿ ಸ್ಚೇಚ್ ಹಾಕಿದ, ಜೊತೆಗೆ ಇನ್ನಿಬ್ಬರು ಸಹಚರರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡರು, ಸುಪಾರಿ ಕೊಲೆಗೆ ಪಡೆದ ಅಡ್ವಾನ್ಸ್ ಹಣದಲ್ಲಿ ಕಾರು ಖರೀದಿಸಿ ಹಂತಕರು ಹತ್ಯೆಗೆ ಸಂಚು ಹಾಕಿ ಕಾಯುತ್ತಿದ್ದರು. ಡಿಡಿಪಿಐ ಕಚೇರಿಯಲ್ಲಿ FDA ಕೆಲಸ ಮಾಡುವ ಮುಕುಂದ ಭುವನೇಶ್ವರಿ ನಗರದಿಂದ ದೇವನಹಳ್ಳಿಯ ಜಿಲ್ಲಾಧಿಕಾರಿ ಕಚೇರಿಗೆ ಕಾರಿನಲ್ಲಿ ಬಂದು ಹೋಗುತ್ತಿದ್ದ, ಇದೇ ಕಾರಿನಲ್ಲಿ ಮುಕುಂದನ ಸಹದ್ಯೋಗಿಗಳಾದ ಹನುಮಂತರಾಜು, ನಾಗವೇಣಿ ಮತ್ತು ಮಂಜುಳಮ್ಮ ಕಚೇರಿಗೆ ಬಂದು ಹೋಗುತ್ತಿದ್ದರು. ಮುಕುಂದನ ಫಾಲೋ ಮಾಡುತ್ತಿದ್ದ. ಹಂತಕರು ಮೇ 25 ಸಂಜೆ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿದ್ರು, ಡಿಡಿಪಿಐ ಕಚೇರಿಯಿಂದ ಯಲಹಂಕ ಕಡೆಗೆ ಮುಕುಂದ ತನ್ನ ಕಾರಿನಲ್ಲಿ ಸಹದ್ಯೋಗಿಗಳ ಜೊತೆ ಬರುತ್ತಿದ್ದ.
Chitradurga: ಫಸಲಿಗೆ ಬಂದಿದ್ದ 200 ಅಡಿಕೆ ಮರಗಳನ್ನು ಕಡಿದ ದುಷ್ಕರ್ಮಿಗಳು!
ದೊಡ್ಡಬಳ್ಳಾಪುರ ಹೊರವಲಯ ಅಪೆರಲ್ಸ್ ಪಾರ್ಕ್ ನಲ್ಲಿ ಮುಕುಂದ ಕಾರನ್ನ ಅಡ್ಡಗಟ್ಟಿದ ಹಂತಕರು ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಮುಕುಂದ ಕಾರಿನ ಬಾಗಿಲ ತೆಗೆಯದೆ ಕಾರಿನಲ್ಲೇ ಇದ್ದರು. ಇದೇ ರಸ್ತೆಯಲ್ಲಿ ಮತ್ತೊಂದು ಕಾರು ಬರುವುದನ್ನ ಕಂಡ ಹಂತಕರು ಅಲ್ಲಿಂದ ಪರಾರಿಯಾಗಿದ್ದಾರೆ. ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಹಂತಕರ ಬೆನ್ನತ್ತ ಪೊಲೀಸರು ಕಾರಿನ ನಂಬರ್ ಬೆನ್ನತ್ತಿ ಸುಪಾರಿ ಕೊಲೆಯನ್ನ ಬಯಲು ಮಾಡಿದ್ದಾರೆ ಆರೋಪಿಗಳಾದ ಸೈಯದ್ ನಹೀಮ್, ಮೌಲಾ, ತಸ್ಲೀಮಾ ಮತ್ತು ಮಮತಾಳನ್ನ ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತಿಬ್ಬರ ಪತ್ತೆಗಾಗಿ ತಲಾಶ್ ನಡೆಸುತ್ತಿದ್ದಾರೆ.