ನಗರದಲ್ಲಿ ಅರ್ಬನ್ ಪ್ರೊಫೆಷನ್ ಫ್ಯಾಮಿಲಿ ಸಲೂನ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿ ದಂಧೆಯಲ್ಲಿ ತೊಡಗಿದ್ದ ಏಳು ಜನ ಮಹಿಳೆಯರನ್ನು ರಕ್ಷಿಸಿಸಲಾಗಿದೆ.
ಶಿವಮೊಗ್ಗ (ಜೂ.25) : ನಗರದಲ್ಲಿ ಅರ್ಬನ್ ಪ್ರೊಫೆಷನ್ ಫ್ಯಾಮಿಲಿ ಸಲೂನ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿ ದಂಧೆಯಲ್ಲಿ ತೊಡಗಿದ್ದ ಏಳು ಜನ ಮಹಿಳೆಯರನ್ನು ರಕ್ಷಿಸಿಸಲಾಗಿದೆ.
ಶಿವಮೊಗ್ಗ ವಿನೋಬನಗರದಲ್ಲಿ ಸ್ಪಾ ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಸುಳಿವು. ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪಿಗಳು ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಐಪಿಎಸ್ ಬಿಂದುಮಣಿ ನೇತೃತ್ವದಲ್ಲಿ ಸ್ಪಾ ಮೇಲೆ ದಾಳಿ ನಡೆಸಿದ ಪೊಲೀಸರು.
Wildlife: ಸುಣ್ಣದ ಡಬ್ಬಿ ನುಂಗಿ ನರಳಾಡಿದ ನಾಗರಹಾವಿಗೆ ಡಾಕ್ಟರ್ ಯಶಸ್ವಿ ಶಸ್ತ್ರ ಚಿಕಿತ್ಸೆ!
ಸದ್ಯ ಏಳು ಸಂತ್ರಸ್ತ ಮಹಿಳೆಯರನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ ಪೊಲೀಸರು
ಜಿಲ್ಲೆಯಲ್ಲಿ ವೇಶ್ಯಾವಾಟಿಕೆ ಜಾಲ ಹೆಚ್ಚಳವಾಗಿದ್ದು. ಒಂದು ತಿಂಗಳ ಅವಧಿಯಲ್ಲಿ ಇದು ಎರಡನೇ ಪ್ರಕರಣವಾಗಿದೆ. ಕಳೆದ ಕೆಲದಿನಗಳ ಹಿಂದೆಯಷ್ಟೇ ಶಿರಾಳಕೊಪ್ಪದ ಪೊಲೀಸರು ವೇಶ್ಯಾವಾಟಿಕೆ ಅಡ್ಡೆಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ತೀರ್ಥಹಳ್ಳಿ ಪಟ್ಟಣದ ಮಧ್ಯಭಾಗದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ರಾತ್ರಿ ವೇಳೆ ಮನೆಯ ಮೇಲೆ ದಾಳಿ ನಡೆಸಿದ್ದರು. ಪೊಲೀಸರು. ಕಮ್ಮರಡಿಯ ಪ್ರಶಾಂತ್ ಮತ್ತು ಮೇಲಿನ ಕುರುವಳ್ಳಿಯ ಮಂಜುನಾಥ್ ಬಂಧಿಸಿದ್ದರು. ಬೆಂಗಳೂರು ಮೂಲದ ಇಬ್ಬರು ಯುವತಿಯರನ್ನು ಕರೆಯಿಸಿ ಬಾಡಿಗೆ ಮನೆಯನ್ನು ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.
ಇದೀಗ ತಿಂಗಳು ಕಳೆಯುವ ಮೊಲದೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿರುವುದು ಜಿಲ್ಲೆಯಲ್ಲಿ ವೇಶ್ಯಾವಾಟಿಕೆ ಜಾಲ ಬೀಡುಬಿಟ್ಟಿದೆ. ಜಿಲ್ಲೆಯ ಪೊಲೀಸರು ಹೈಅಲರ್ಟ್ ಆಗಿದ್ದು, ಎಲ್ಲೆಡೆ ಮಾಹಿತಿ ಕಲೆಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ವೇಶ್ಯಾವಾಟಿಕೆ ದಂಧೆಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.