ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಮೇಲೆ ಫುಡ್​ ಆಫೀಸರ್ಸ್ ದೌರ್ಜನ್ಯ!

By Govindaraj S  |  First Published Jul 10, 2022, 5:00 PM IST

ವ್ಯಾಪಾರಿಗಳು ಮಂತ್ಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಬೀದಿ ಬದಿ ವ್ಯಾಪಾರಿಗಳ ಮೇಲೆ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ. ದುಡಿದು ಬದುಕೋ ಬಡವರ ಮೇಲೆ ಫುಡ್ ಆಫೀಸರ್ಸ್ ವಿರುದ್ದ ರೊಚ್ಚಿಗೆದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.


ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್ .ಬೆಂಗಳೂರು

ಬೆಂಗಳೂರು (ಜು.10): ಸಿಲಿಕಾನ್ ಸಿಟಿಯಲ್ಲಿ ವ್ಯಾಪಾರಿಗಳು ಮಂತ್ಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಬೀದಿ ಬದಿ ವ್ಯಾಪಾರಿಗಳ ಮೇಲೆ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ. ದುಡಿದು ಬದುಕೋ ಬಡವರ ಮೇಲೆ ಫುಡ್ ಆಫೀಸರ್ಸ್ ವಿರುದ್ದ ರೊಚ್ಚಿಗೆದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಗಿರಿನಗರದ ಹೊಸಕೆರೆಹಳ್ಳಿ ಬಳಿ ಘಟನೆ ನಡೆದಿದೆ. ಫುಡ್ ಆಫೀಸರ್‌ಗಳ ದೌರ್ಜನ್ಯದ ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 

Tap to resize

Latest Videos

ರೋಡ್ ಸೈಡ್ ಹರಿ ಎಂಬ ಯುವಕ ಮೀನು ವ್ಯಾಪರ ಮಾಡ್ತಿದ್ದ. ಯಾವುದೇ ನೋಟಿಸ್ ಇಲ್ಲದೆ ಏಕಾಏಕಿ ದಾಳಿ ಮಾಡಿದ ಫುಡ್ ಆಫೀಸರ್ಸ್‌ಗಳು, ರಾತ್ರಿ 9:20 ಸಮಯದಲ್ಲಿ ಮೀನು ವ್ಯಾಪಾರಿ ಹರಿ ಎಂಬ ಯುವಕನ ತಳ್ಳೋ ಗಾಡಿ ಮೇಲೆ ದಾಳಿ ಮಾಡಿದ್ದಾರೆ. ವ್ಯಾಪಾರಿಗಳು ಕಾಲಿಗೆ ಬಿದ್ದು ಬೇಡಿಕೊಂಡರೂ, ಅಧಿಕಾರಿಗಳು ತಳ್ಳೋ ಗಾಡಿ ಬಿಸಾಡಿದಿದ್ದಾರೆ. ವ್ಯಾಪಾರಕ್ಕೆ ತಂದಿದ್ದ, ಆಹಾರ ಮಣ್ಣು ಪಾಲು ಮಾಡಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. 

ಸೆಕ್ಯುರಿಟಿ ಗಾರ್ಡ್ ನಿಯತ್ತು, ವ್ಯಕ್ತಿಯ ಜೀವಕ್ಕೆ ಕುತ್ತು: ಅರೇ ಬೆತ್ತಲೆ ಬಂದ ಬ್ಯಾಂಕ್ ಉದ್ಯೋಗಿ ಮರ್ಡರ್!

ಅಲ್ಲದೇ ಅವಾಚ್ಯ ಪದಗಳಲ್ಲಿ ನಿಂದಿಸಿ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ‌. ಟ್ರಾಕ್ಟರ್ ತಂದು ತಳ್ಳೊ ಗಾಡಿ, ವಸ್ತುಗಳನ್ನ ತುಂಬಿಕೊಂಡು ಅಧಿಕಾರಿಗಳು ಹೋಗಿದ್ದಾರೆ. ಎಷ್ಟೇ ಗೊಗರೆದರೂ ಅಧಿಕಾರಿಗಳು ಮನಸ್ಸು ಕರಗದೇ ದೌರ್ಜನ್ಯ ಎಸಗಿದ್ದಾರೆ‌. ಜನಗಳು ಸೇರುತಿದ್ದಂತೆ ತಳ್ಳೋ ಗಾಡಿ, ವಸ್ತುಗಳನ್ನ ಬಿಸಾಡಿದ್ದಾರೆ. ಅದೇ ಜಾಗದಲ್ಲಿ ಹತ್ತಾರು ತಳ್ಳೋ ಗಾಡಿಗಳು ಇದ್ದರೂ ಈ ಮೀನಿನ ವ್ಯಾಪರಿ ಮೇಲೆ ಕೋಪ. ಬೇರೆ ವ್ಯಾಪಾರಿಗಳು ಮಂತ್ಲಿ ಹಣ ನೀಡುತಿದ್ದಾರೆ. ಆದರೆ ಹರಿ ಎಂಬ ಯುವಕ ಯಾವುದೇ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಹಣ ನೀಡುತ್ತಿರಲಿಲ್ಲ. 

ಶಾಲಾ ಶುಲ್ಕದ ‌ನಡುವೆ ಪೋಷಕರಿಗೆ ಮತ್ತೊಂದು ದರ ಏರಿಕೆ ಬಿಸಿ: ಖಾಸಗಿ ಶಾಲೆಗಳ ವಾಹನ ಶುಲ್ಕ ಹೆಚ್ಚಳ?

ಹೀಗಾಗಿ ವ್ಯಾಪಾರಿ ಹರಿ ಬಳಿ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪವಿದೆ. ತಿಂಗಳಿಗೆ ಹಣ ಕೊಡ್ತಿಲ್ಲ ಅಂತ ಏಕಾಏಕಿ ದಾಳಿ ನಡೆಸಲಾಗಿದೆ ಎಂದು ವ್ಯಾಪಾರಿಗಳು ಆರೋಪ ಮಾಡಿದ್ದಾರೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳೊದಾಗಿ ನೊಂದ ವ್ಯಾಪಾರಿ ಹರಿ ಅಳಲು ತೊಡಿಕೊಂಡಿದ್ದಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ವ್ಯಾಪಾರಿ ಹರಿಯನ್ನ ಸ್ಥಳೀಯ ಗಿರಿನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇದಕ್ಕೆ ಪೊಲೀಸರು ಕೂಡ ಅಧಿಕಾರಿಗಳಿಗೆ ಸಾಥ್ ನೀಡಿದ್ದು, ವ್ಯಾಪಾರ ಮಾಡದಂತೆ ಯುವಕನಿಗೆ ವಾರ್ನಿಂಗ್ ಮಾಡಿದ್ದಾರೆ.

click me!