ಈಕೆ ವೃತ್ತಿಯಲ್ಲಿ ಟೈಲರ್ ಆದ್ರೂ ಪ್ರೌವೃತ್ತಿಯಲ್ಲಿ ಖತರ್ನಾಕ್ ಕಳ್ಳಿ. ಸಮಯ ನೋಡಿ ಸಂಚು ಹೂಡು ಹೊಂಚು ಹಾಕುತ್ತಿದ್ದ ಐನಾತಿ ಲೇಡಿ. ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಮನೆ ಹೊಕ್ಕವಳು ದೋಚಿದ್ದು ನೂರಾರು ಗ್ರಾಂ ಚಿನ್ನ, ಕೇಜಿಗಟ್ಟಲೆ ಬೆಳ್ಳಿ.
ವರದಿ: ಮಧು.ಎಂ.ಚಿನಕುರಳಿ
ಮೈಸೂರು (ಜು.10): ಈಕೆ ವೃತ್ತಿಯಲ್ಲಿ ಟೈಲರ್ ಆದ್ರೂ ಪ್ರೌವೃತ್ತಿಯಲ್ಲಿ ಖತರ್ನಾಕ್ ಕಳ್ಳಿ. ಸಮಯ ನೋಡಿ ಸಂಚು ಹೂಡು ಹೊಂಚು ಹಾಕುತ್ತಿದ್ದ ಐನಾತಿ ಲೇಡಿ. ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಮನೆ ಹೊಕ್ಕವಳು ದೋಚಿದ್ದು ನೂರಾರು ಗ್ರಾಂ ಚಿನ್ನ, ಕೇಜಿಗಟ್ಟಲೆ ಬೆಳ್ಳಿ. ಸಾಂಸ್ಕೃತಿಕ ನಗರಿಯ ಸುಂದರಿ ಕಳ್ಳಿಯ ಸ್ಟೋರಿ ಇಲ್ಲಿದೆ ನೋಡಿ. ಏರಿಯಾದಲ್ಲೇ ಇದ್ದುಕೊಂಡು ಸಮಯ ನೋಡಿ ಕಳ್ಳತನ ಮಾಡುತ್ತಿದ್ದವಳ ಹೆಸರು ಪ್ರಭಾಮಣಿ. ಮೈಸೂರು ನಗರದ ಹೊರ ವಲಯ ಆಲನಹಳ್ಳಿ ನಿವಾಸಿ. ಪ್ರಭಾಮಣಿ ವೃತ್ತಿಯಲ್ಲಿ ಟೈಲರ್ ಆದ್ರೂ ಪ್ರೌವೃತ್ತಿಯಲ್ಲಿ ಮಾತ್ರ ದೊಡ್ಡ ಕಳ್ಳಿ.
ಕಳ್ಳಿ ಅಂದ್ರೆ ಅಂತಿಂತ ಕಳ್ಳಿ ಅಲ್ಲ ಇವಳು. ಕಳೆದ ಮೂರು ನಾಲ್ಕು ವರ್ಷದಿಂದ ಕಳ್ಳತನವನ್ನು ಮೈಗೂಡಿಸಿಕೊಂಡು ಬಂದಿರುವ ಈಕೆ, ಏರಿಯಾದ ಸುತ್ತುಮುತ್ತಲ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ್ದಾಳೆ. ಸದ್ಯ ಪೊಲೀಸರ ಮುಂದೆ ಬಾಯಿ ಬಿಟ್ಟಿರುವ ಪ್ರಕಾರ ಎರಡು ವರ್ಷದಲ್ಲಿ ನಾಲ್ಕು ಮನೆ ಕಳ್ಳತನ ಮಾಡಿ 190 ಗ್ರಾಂ ಚಿನ್ನ, 3 ಕೆಜಿ 250 ಗ್ರಾಂ ಬೆಳ್ಳಿ ಹಾಗೂ 90 ಸಾವಿರ ನಗದು ಕಳ್ಳತನ ಮಾಡಿದ್ದಾಳೆ. ಆಲನಹಳ್ಳಿ, ನಂದಿನಿ ಲೇಔಟ್, ಗಿರಿದರ್ಶಿನಿ ಲೇಔಟ್‌ನಲ್ಲಿ ಈಕೆ ತನ್ನ ಕೈಚಳಕ ತೋರಿಸಿ ಸಿಕ್ಕಿಬಿದ್ದಿದ್ದಾಳೆ.
Mysuru ತನ್ನ ಕಾಮದ ತೀಟೆಗಾಗಿ ಕಟ್ಟಿಕೊಂಡ ಗಂಡನನ್ನೇ ಕೊಂದ ಪಾಪಿ ಪತ್ನಿ
ಸಿಕ್ಕಿ ಬಿದ್ದಿದ್ದು ಆ ಒಂದು ಸಾಕ್ಷಿಯಿಂದ: ಎರಡು ವರ್ಷದಿಂದ ಕಳ್ಳತನದಲ್ಲಿ ತೊಡಗಿರುವ ಪ್ರಭಾಮಣಿ, ಹಲವು ವರ್ಷಗಳಿಂದ ಏರಿಯಾದಲ್ಲಿ ಚೀಟಿ ವ್ಯವಹಾರ ಮಾಡಿಕೊಂಡಿದ್ದಾಳೆ. ಸರಿಯಾಗಿ ಚೀಟಿ ಹಣ ಕೊಡದಿದ್ದಾಗ ನಂದಿನಿ ಲೇಔಟ್‌ನ ಡಾಕ್ಟರ್ ಕುಮಾರ್ ಪತ್ನಿ ಆಶ ಜಗಳ ಮಾಡಿ ದೂರು ಇಟ್ಟಿದ್ದರು. 5 ವರ್ಷ ಮಾತನಾಡದೆ ಇದ್ದ ಪ್ರಭಾಮಣಿ ಜೂನ್ 30 ರಂದು ಮಧ್ಯಾಹ್ನ ಆಶಾ ಮನೆಗೆ ಬಂದು ಮಾತನಾಡಿಸಿಕೊಂಡು ಹೋಗಿದ್ದಾಳೆ. ಇದೇ ವೇಳೆ ಅವರ ಮನೆಯ ಡೋರ್ ಲಾಕ್ ಕದ್ದು ಡೂಪ್ಲಿಕೇಟ್ ಕೀ ಮಾಡಿಸಿಕೊಂಡಿದ್ದಾಳೆ.
ಅದೇ ದಿನ ಸಂಜೆ 7.30ಕ್ಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಬಂದು ಬೀರುವಿನಲ್ಲಿದ್ದ 165 ಗ್ರಾಂ ಚಿನ್ನದ ಒಡವೆಗಳು, 2 ಕೆಜಿ ಬೆಳ್ಳಿ ಪಧಾರ್ಥ ಕದ್ದು ಹೋಗಿದ್ದಾಳೆ. ಕಳ್ಳಿ ಪ್ರಭಾಮಣಿ ಜೂನ್ 30ರಂದು ಸಂಜೆ ಆಶಾ ಮನೆಗೆ ಬಂದಿರುವ ದೃಶ್ಯಗಳು ಪಕ್ಕದ ಮನೆಯ ಸಿಸಿ.ಟಿವಿಯಲ್ಲಿ ರೆಕಾರ್ಡ್ ಆಗಿದೆ. 7.30ಕ್ಕೆ ಜರ್ಕಿನ್ ಹಾಕಿಕೊಂಡು ಕೈಯಲ್ಲಿ ಕವರ್ ಹಿಡಿದು ಬರುವ ಐನಾತಿ, 18 ನಿಮಿಷ ಮನೆಯಲ್ಲಿ ಸುತ್ತಾಡಿ ಎರಡು ಕವರ್‌ನಲ್ಲಿ ಚಿನ್ನ ಬೆಳ್ಳಿ ದೋಚಿಕೊಂಡು ಹೋಗುವುದು ಸೆರೆಯಾಗಿದೆ.
ಮೈಸೂರು: ಕೆಲಸ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂ. ವಂಚನೆ: ಆನ್‌ಲೈನ್ ದೋಖಾ ಮಾಡುತ್ತಿದ್ದ ಮೂವರು ಅರೆಸ್ಟ್
ಮಾರನೇ ದಿನ ಆಷಾಢ ಪೂಜೆಗೆ ಬೀರು ನೋಡಿದ ಮನೆಯವರಿಗೆ ಕಳ್ಳತನದ ಸುಳಿವು ಗೊತ್ತಾಗಿ ಪಕ್ಕದ ಮನೆಯ ಸಿಸಿಟಿವಿ ನೋಡಿದ್ದಾರೆ. ಆಗ ಚಾಲಾಕಿಯ ಬಣ್ಣ ಬಯಲಾಗಿದ್ದು, ತಕ್ಷಣ ಆಲನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಪ್ರಭಾಮಣಿ ವಿಚಾರಣೆ ನಡೆಸಿ ಪೊಲೀಸರು ನಾಲ್ಕು ಪ್ರತ್ಯೇಕ ಪ್ರಕರಣ ಭೇದಿಸಿದ್ದಾರೆ. ಕದ್ದ ವಸ್ತುವನೆಲ್ಲ ವಶಕ್ಕೆ ಪಡೆದಿದ್ದು, ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ. ಒಟ್ಟಾರೆ ಇಡೀ ನೋಡಿದಾಗ ನೇರೆ ಹೊರೆಯವರು ಎಷ್ಟೇ ಹತ್ತಿರ ಇದ್ದರೂ ಅವರಿಗೆ ನಮ್ಮ ಗುಟ್ಟು ಬಿಟ್ಟು ಕೊಡಬಾರದು ಎನ್ನುವುದು ಸಾಭೀತಾಗಿದೆ.