ಬೆಳಗಾವಿ: ಮನೆಯ ಹತ್ತಿರ ಮೂತ್ರ ಮಾಡಿದ್ದಕ್ಕೆ ಮಾರಣಾಂತಿಕ ಹಲ್ಲೆ

By Kannadaprabha News  |  First Published Jan 3, 2024, 8:26 PM IST

ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಾಕತಿ ಪೊಲೀಸರು ದಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಾಕತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬೆಳಗಾವಿ(ಜ.03):  ಅಂಗನವಾಡಿ ಶಾಲೆ ಮಕ್ಕಳು ತಮ್ಮ ಮನೆಯ ಕಡೆಗೆ ಬಂದು ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಅಸಮಾಧನಗೊಂಡು ಮಹಿಳೆಯೋರ್ವಳು ಕುಡಗೋಲಿನಿಂದ ಅಂಗನವಾಡಿ ಸಹಾಯಕಿಯನ್ನು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಸೋಮವಾರ ಬೆಳಗಾವಿ ತಾಲೂಕಿನ ಬಸೂರ್ತೆ ಗ್ರಾಮದಲ್ಲಿ ನಡೆದಿದೆ.

ಬಸೂರ್ತೆ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿಯಾಗಿರುವ ಸುಗಂಧಾ ಗಜಾನನ ಮೋರೆ ಮಾರಣಾಂತಿಕ ಹಲ್ಲೆಗೊಳಗಾದ ಮಹಿಳೆ. ಅದೇ ಗ್ರಾಮದ ಕಲ್ಯಾಣಿ ಜ್ಯೋತಿಭಾ ಮೋರೆ ಕುಡಗೋಲಿನಿಂದ ಹಲ್ಲೆ ಮಾಡಿದ ಆರೋಪಿ. ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಗಂಧಾ ಮೋರೆ, ಮಧ್ಯಾಹ್ನ 12.30 ಗಂಟೆಯ ಸುಮಾರಿಗೆ ಮಕ್ಕಳನ್ನು ಮೂತ್ರವಿಸರ್ಜನಗೆಂದು ಹೊರಗೆ ಬಿಟ್ಟಿದ್ದಾಳೆ. ಮಕ್ಕಳು ಆರೋಪಿ ಕಲ್ಯಾಣಿ ಮೋರೆ ಅವರ ಮನೆಯ ಕಡೆಗೆ ತೆರಳಿ ಮೂತ್ರ ವಿಸರ್ಜನೆ ಮಾಡಿದ್ದರಿಂದ ಆಕ್ರೋಶಗೊಂಡು ಕೈಯಲ್ಲಿ ಕುಡುಗೋಲು ಹಿಡಿದುಕೊಂಡು ಅಂಗನವಾಡಿಗೆ ಬಂದು ನಮ್ಮ ಮನೆಯ ಕಡೆಗೆ ಮಕ್ಕಳನ್ನು ಮೂತ್ರ ವಿಸರ್ಜನೆಗೆ ಏಕೆ ಬಿಟ್ಟಿದ್ದಿಯಾ ಎಂದು ಜಗಳ ಆರಂಭಿಸಿದ್ದಾಳೆ. ಈ ವೇಳೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದು ವಿಕೋಪಕ್ಕೆ ಹೋಗುತ್ತಿದಂತೆ ತಾಳ್ಮೆ ಕಳೆದುಕೊಂಡು ಆರೋಪಿ ಕಲ್ಯಾಣಿ ಮೋರೆ, ಕೈಯಲ್ಲಿದ್ದ ಕುಡಗೋಲಿನಿಂದ ಅಂಗನವಾಡಿ ಸಹಾಯಕಿ ಸುಗಂಧಾ ಮೋರೆ ಹಣೆಗೆ ಹಾಗೂ ಮೂಗಿಗೆ ಹೊಡೆದು ಹಲ್ಲೆ ಮಾಡಿದ್ದಾಳೆ. 

Tap to resize

Latest Videos

ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಸಾರ್ವಜನಿಕವಾಗಿ ಬಟ್ಟೆ ಹರಿದು ಮಹಿಳೆ ಮೇಲೆ ಹಲ್ಲೆ

ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಾಕತಿ ಪೊಲೀಸರು ದಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಾಕತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!