* ತುಮಕೂರಿನ ಪೊಲೀಸ್ ಅಧಿಕಾರಿಗೆ ಶಿಕ್ಷೆ
* ಉಮೇಶ್ ಶಿಕ್ಷೆಗೆ ಗುರಿಯಾದ ಎಎಸ್‌ಐ
* 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1 ಲಕ್ಷ ದಂಡ
ತುಮಕೂರು(ಫೆ.01): ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರವೆಸಗಿದ್ದ(Rape) ಎಎಸ್‌ಐಗೆ(ASI) ಇಲ್ಲಿನ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(Court) 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1 ಲಕ್ಷ ದಂಡ ವಿಧಿಸಿ ಸೋಮವಾರ ಆದೇಶ ಹೊರಡಿಸಿದೆ.
ತುಮಕೂರಿನ(Tumakuru) ಹೊಸ ಬಡಾವಣೆ ಠಾಣೆಯ ಉಮೇಶ್ ಶಿಕ್ಷೆಗೆ ಗುರಿಯಾದ ಎಎಸ್‌ಐ. 2017, ಜನವರಿ 15ರ ಬೆಳಗಿನ ಜಾವ 3 ಗಂಟೆ ವೇಳೆ ಅಂತರಸನಹಳ್ಳಿ ಕೆಳಸೇತುವೆ ಬಳಿ ಪತ್ತೆಯಾಗಿದ್ದ ಬುದ್ಧಿಮಾಂದ್ಯ ಯುವತಿ ಮೇಲಿನ ಅತ್ಯಾಚಾರ ಸಂಬಂಧ ಉಮೇಶ್ ವಿರುದ್ಧ ತುಮಕೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ 5 ವರ್ಷಗಳ ಬಳಿಕ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಸ್.ಮಲ್ಲಿಕಾರ್ಜುನಸ್ವಾಮಿ ಜ.28 ರಂದು ಎಎಸ್‌ಐ ತಪ್ಪಿತಸ್ಥ ಎಂದು ತೀರ್ಪು ನೀಡಿ, ಸೋಮವಾರ ಶಿಕ್ಷೆ(Punishment) ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದ್ದರು.
Winter Session: ಅಲ್ಪ ಪ್ರಮಾಣದಲ್ಲಿ ಡ್ರಗ್ಸ್ ಹೊಂದಿದ್ದರೆ ಅಪರಾಧ ಅಲ್ಲ!
ಅದರಂತೆ ಇದೀಗ ಶಿಕ್ಷೆ ಪ್ರಕಟಿಸಿರುವ ನ್ಯಾಯಾಧೀಶರು, ಸಂತ್ರಸ್ತೆಗೆ(Victim) ಆಗಿರುವ ಹಾನಿ ಬಗ್ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮೌಲ್ಯಮಾಪನ ನಡೆಸಿ ಪರಿಹಾರ(compensation) ಮೊತ್ತ ನಿಗದಿ ಮಾಡಲು ಸೂಚಿಸಿದ್ದಾರೆ.
ಘಟನೆ ಹಿನ್ನೆಲೆ:
ಹೊಸ ಬಡಾವಣೆ ಠಾಣೆ ಎಎಸ್‌ಐ ಉಮೇಶ್ ತನ್ನ ಬೈಕಿನಲ್ಲಿ ಪೇದೆಯೊಬ್ಬರ ಜೊತೆ ತೆರಳುತ್ತಿದ್ದಾಗ ಅಂತರಸನಹಳ್ಳಿ ಕೆಳಸೇತುವೆ ಬಳಿ ಬುದ್ಧಿಮಾಂದ್ಯೆ ಯುವತಿಯೊಬ್ಬಳು ಪತ್ತೆಯಾಗಿದ್ದಾಳೆ. ಆಗ ಮಾರ್ಗ ಅದೇ ಮಾರ್ಗವಾಗಿ ತೆರಳುತ್ತಿದ್ದ ಜೀಪೊಂದನ್ನು ಅಡ್ಡಗಟ್ಟಿದ ಉಮೇಶ್ ಯುವತಿಯನ್ನು ತುಮಕೂರಿಗೆ ಕರೆದೊಯ್ದಿದ್ದ. ಮಾರ್ಗ ಮಧ್ಯೆ ಅತ್ಯಾಚಾರವೆಸಗಿದ್ದ. ಬಳಿಕ ಆಕೆಯನ್ನು ಕುಟುಂಬದವರಿಗೆ ಒಪ್ಪಿಸಿದ್ದ. ಯುವತಿ ಗಾಬರಿಯಾಗಿದ್ದನ್ನು ಗಮನಿಸಿದ ಮನೆಯವರು ವಿಚಾರಣೆ ನಡೆಸಿದಾಗ ಅತ್ಯಾಚಾರ ಆಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಮರುದಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಕವಿತಾ ವಾದಿಸಿದ್ದರು.
Illegal in Exam: ಅಕ್ರಮ ಪರೀಕ್ಷೆ: ನಕಲಿ, ಅಸಲಿ ವಿದ್ಯಾರ್ಥಿಗಳಿಗೆ ಶಿಕ್ಷೆ ಪ್ರಕಟ
ಧಾರವಾಡ: ತನ್ನ ಬದಲು ಬೇರೊಬ್ಬ ಅಭ್ಯರ್ಥಿಯಿಂದ ಪರೀಕ್ಷೆ(Exam) ಬರೆಯಿಸಿದ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆದ ನಕಲಿ ವಿದ್ಯಾರ್ಥಿ ಹಾಗೂ ಬರೆಯಿಸಿದ ಅಸಲಿ ವಿದ್ಯಾರ್ಥಿ(Student) ಇಬ್ಬರಿಗೂ ನ್ಯಾಯಾಲಯವು(Court) ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿತ್ತು.
Allahabad High Court| ಮಕ್ಕಳ ಜೊತೆ ಮುಖ ಮೈಥುನ ಅಷ್ಟು ಗಂಭೀರವಲ್ಲ: ಹೈಕೋರ್ಟ್
2007ನೇ ಸಾಲಿನಲ್ಲಿ ಧಾರವಾಡದ(Dharwad) ಎಸ್‌ಡಿಎಂ ಎಂಜನೀಯರಿಂಗ್ ಕಾಲೇಜಿನಲ್ಲಿ(SDM Engineering College) ನಡೆಸಲಾದ ಪರೀಕ್ಷೆಗಳಲ್ಲಿ ಅದೇ ಕಾಲೇಜಿನ ಓರ್ವ ವಿದ್ಯಾರ್ಥಿಯು ತನ್ನ ಬದಲಿಗೆ ಬೇರೆಯೊಬ್ಬ ಅಭ್ಯರ್ಥಿಯನ್ನು ನಕಲಿ ದಾಖಲೆಗಳನ್ನು(Duplicate Documents) ಸೃಷ್ಟಿಸುವ ಮೂಲಕ ಅಸಲಿ ಅಭ್ಯರ್ಥಿಯನ್ನಾಗಿ(Candidate) ರೂಪಗೊಳಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿದ್ದನು. ನಕಲಿ ವಿದ್ಯಾರ್ಥಿಯು ಮೂರನೇ ಸೆಮಿಸ್ಟೆರ್ ಪರೀಕ್ಷೆ ಬರೆಯುವಾಗ ಪರಿಶೀಲನಾ ಅಧಿಕಾರಿಗಳು ಈತನು ನಕಲಿ ವಿದ್ಯಾರ್ಥಿ ಎಂದು ಗೊತ್ತಾಗಿತ್ತು. ಆದ್ದರಿಂದ ಕಾಲೇಜು ಪ್ರಾಚಾರ್ಯರು ಈ ಕುರಿತು ವಿದ್ಯಾಗಿರಿ ಪೊಲೀಸ್(Police) ಠಾಣೆಗೆ ದೂರು(Complaint) ನೀಡಿದ್ದರು.
ಈ ಬಗ್ಗೆ ತನಿಖೆ(Investigation) ಕೈಗೊಂಡಿದ್ದ ಎಎಸೈ ಎಸ್.ಎಫ್. ದೊಡಮನಿ, ಇನ್ಸ್‌ಪೆಕ್ಟರ್ ವಿಜಯ ಬಿರಾದರ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಮೂರನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶ ಮಹೇಶ ಚಂದ್ರಕಾಂತ ಅವರು ಇಬ್ಬರು ಆರೋಪಿತರು(Accused) ತಪ್ಪಿತಸ್ಥರೆಂದು ತಿರ್ಮಾನಿಸಿ ಕಳೆದ ನವೆಂಬರ್ 27ರಂದು ಇಬ್ಬರಿಗೂ ತಲಾ ಎರಡೂವರೆ ವರ್ಷಗಳ ಜೈಲು(Jail) ಶಿಕ್ಷೆ ಮತ್ತು ತಲಾ .6 ಸಾವಿರ ದಂಡ ವಿಧಿಸಿ ತೀರ್ಪು(Verdict) ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ವಕೀಲರಾದ ಆರ್.ಜಿ. ದೇವರೆಡ್ಡಿ ಹಾಗೂ ಅನೀಲಕುಮಾರ ಆರ್. ತೊರವಿ ವಕಾಲತ್ತು ವಹಿಸಿದ್ದರು.