Chikkaballapur: ಎಎಸ್‌ಐ ಮನೆ ದರೋಡೆ ನಡೆಸಿದ್ದ ಅಂತರಾಜ್ಯ ಕಳ್ಳರ ಬಂಧನ

By Govindaraj S  |  First Published Nov 30, 2022, 11:43 AM IST

ಆರಕ್ಷಕ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಎಎಸ್‌ಐ ಮನೆಗೆ ನುಗ್ಗಿ ಲಕ್ಷಾಂತರು ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಎಸ್ಕೇಪ್‌ ಆಗುವ ವೇಳೆ ಎಎಸ್‌ಐ ಪುತ್ರನ ಮೇಲೆ ಶೂಟೌಟ್‌ ನಡೆಸಿ ಪರಾರಿಯಾಗಿದ್ದ ಐದು ಮಂದಿ ಕುಖ್ಯಾತ ಅಂತರಾಜ್ಯ ಕಳ್ಳರನ್ನು ಬಂಧಿಸಲಾಗಿದೆಯೆಂದು ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್‌ ತಿಳಿಸಿದರು.


ಚಿಕ್ಕಬಳ್ಳಾಪುರ (ನ.30): ಆರಕ್ಷಕ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಎಎಸ್‌ಐ ಮನೆಗೆ ನುಗ್ಗಿ ಲಕ್ಷಾಂತರು ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಎಸ್ಕೇಪ್‌ ಆಗುವ ವೇಳೆ ಎಎಸ್‌ಐ ಪುತ್ರನ ಮೇಲೆ ಶೂಟೌಟ್‌ ನಡೆಸಿ ಪರಾರಿಯಾಗಿದ್ದ ಐದು ಮಂದಿ ಕುಖ್ಯಾತ ಅಂತರಾಜ್ಯ ಕಳ್ಳರನ್ನು ಬಂಧಿಸಲಾಗಿದೆಯೆಂದು ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್‌ ತಿಳಿಸಿದರು.

ನಗರದ ಹೊರ ವಲಯದ ಅಣಕನೂರು ಬಳಿ ಇರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನ.9 ರಂದು ಎಎಸ್‌ಐ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣದದಲ್ಲಿ ಬಂಧಿಸಲಾಗಿರುವ ಆರೋಪಿಗಳ ಕುರಿತು ಮಾಹಿತಿ ನೀಡಿದ ಅವರು, ಆರೋಪಿಗಳ ಬಂಧನಕ್ಕೆ 5 ವಿಶೇಷ ತಂಡಗಳನ್ನು ರಚಿಸಲಾಗಿತ್ತು ಎಂದರು.

Tap to resize

Latest Videos

ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವಿಲ್ಲ: ಡಿ.ಕೆ.ಶಿವಕುಮಾರ್‌

ಬಂಧಿತರ ವಿವರ: ಬಂಧಿತರಲ್ಲಿ ಉತ್ತರಪ್ರದೇಶದ ಬಿಜ್ನೋರ್‌ ಜಿಲ್ಲೆಯ ಹೈದರ್‌ ಆಲಿ ಆಲಿಯಾಸ್‌ ವೀರ್‌ ಸಿಂಗ್‌ ಠಾಕೂರ್‌ ಬಿನ್‌ ಇಲ್ಲಾಮುದ್ದೀನ್‌ (26), ಆರೀಪ್‌ ಬಿನ್‌ ಮಹಮದ್‌ ಹನೀಪ್‌ (35) ಹಾಗೂ ಜಮ್‌ ಷೀದ್‌ ಖಾನ್‌ ಬಿನ್‌ ರಯಿಸ್‌ ಖಾನ್‌ (27) ಸೇರಿ ಮೂವರು ಸೇರಿದ್ದರೆ ಇನ್ನೂ ಇಬ್ಬರು ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕದಿರಿ ಪಟ್ಟಣದ ನಿಜಾಮವಲಿ ಕಾಲೋನಿ ನಿವಾಸಿ ಪಠಾಣ್‌ ಮಹಮದ್‌ ಹ್ಯಾರೀಸ್‌ ಖಾನ್‌ ಬಿನ್‌ ಸುಭಾನ್‌ ಖಾನ್‌ (30) ಹಾಗೂ ದೆಹಲಿ ಮೂಲದ ವಿರೇಂದ್ರ ಸಿಂಗ್‌ ಬಿನ್‌ ಅಮೇಸಿಂಗ್‌ (55) ಎಂದು ಗುರುತಿಸಲಾಗಿದೆ. ವಿಶೇಷವಾಗಿ ಆಂಧ್ರದ ಕದಿರಿ, ನಿಜಾಮಾಬಾದ್‌ ಜಿಲ್ಲೆಯ ಇಂದಲವಾಯಿ ಪೊಲೀಸ್‌ ಅಧಿಕಾರಿಗಳ ಹಾಗೂ ಗಾಜಿಯಾಬಾದ್‌ನ ಅಪರಾಧ ಪತ್ತೆ ದಳ ವಿಭಾಗದ ಪೊಲೀಸರ ನೆರವಿನೊಂದಿಗೆ ಆರೋಪಿಗಳನ್ನು ಬಂಧಿಸಲಾಗಿದೆಯೆಂದು ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್‌ ಮಾಹಿತಿ ನೀಡಿದರು.

ಕಳ್ಳರ ಮೇಲೆ ವಿವಿಧ ಠಾಣೆಗಳಲ್ಲಿ ದೂರು: ದರೋಡೆ ಪ್ರಕರಣದ ಮಾಸ್ಟರ್‌ ಮೈಂಡ್‌ ಆಗಿರುವ ಪ್ರಮುಖ ಆರೋಪಿ ಹೈದರ್‌ ಆಲಿ ವಿರುದ್ದ ಕೋಲಾರ ನಗರ ಠಾಣೆಯಲ್ಲಿ 2 ಪ್ರಕರಣ ಸೇರಿ ಆಂಧ್ರದ ರೇಣುಗುಂಟದಲ್ಲಿ 1, ವಿಜಯಪುರ, ಡೆಹ್ರಾಡೂನ್‌ ಸೇರಿ ಒಟ್ಟು 6 ಪ್ರಕರಣಗಳು ದಾಖಲಾದರೆ ವಿರೇಂದ್ರಸಿಂಗ್‌ ವಿರುದ್ದ 3 ಪ್ರಕರಣ, ಹ್ಯಾರೀಸ್‌ ಖಾನ್‌ ವಿರುದ್ದ 2 ಪ್ರಕರಣ ದಾಖಲಾಗಿವೆಂದರು.

ಎಎಸ್‌ಐ ಮನೆಯಲ್ಲಿ ದೋಚಿದ್ದು 17 ಲಕ್ಷ ರು, ನಗದು, 629 ಗ್ರಾಂ ಚಿನ್ನ!: ಎಎಸ್‌ಐ ನಾರಾಯಣಸ್ವಾಮಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಅವರ ಪತ್ನಿ ಸುಗುಣ, ಸೊಸೆ ರೇಖಾಗೆ ಪಿಸ್ತೂಲ್‌, ಚಾಕು ತೋರಿಸಿ ಮನೆಯಲ್ಲಿ ವಿವಿಧಡೆ ಇರಿಸಲಾಗಿದ್ದ ಒಟ್ಟು 17 ಲಕ್ಷ ರು, ನಗದು ಹಾಗೂ ಲಕ್ಷಾಂತರ ರು, ಮೌಲ್ಯದ ಬರೋಬ್ಬರಿ 629 ಗ್ರಾಂ ಚಿನ್ನಾಭರಣ ದೋಚಿ ಕಳ್ಳರು ಪರಾರಿ ಆಗಿದ್ದರು. ಅಲ್ಲದೇ ಮನೆಯಿಂದ ಹೊರಡುವಾಗ ಅಡ್ಡ ಬಂದ ಎಎಸ್‌ಐ ನಾರಾಯಣಸ್ವಾಮಿ ಹಲ್ಲೆ ನಡೆಸಿದ್ದಲ್ಲದೇ ಅವರ ಪುತ್ರ ಶರತ್‌ ಮೇಲೆ ಪಿಸ್ತೂಲ್‌ನಿಂದ ಸೊಂಟಕ್ಕೆ ಗುಂಡು ಹಾರಿಸಿದ್ದರು.

ಬಳಿಗಾರ್‌, ಬೆಂಬಲಿಗರ ಆಗಮನದಿಂದ ಬಿಜೆಪಿಗೆ ಆನೆಬಲ: ಬಿ.ಎಸ್‌.ಯಡಿಯೂರಪ್ಪ

21.91 ಲಕ್ಷ ಮೌಲ್ಯದ ಕಳವು ಮಾಲು ವಶ: ಬಂಧಿತ ಆರೋಪಿಗಳಿಂದ ಪೊಲೀಸರ ತಂಡ ಬರೋಬ್ಬರಿ 21.91 ಲಕ್ಷ ರು, ಮೌಲ್ಯದ ಕಳವು ಮಾಲು ವಶಕ್ಕೆ ಪಡೆಯಲಾಗಿದೆ. ಆ ಪೈಕಿ 12.41 ಲಕ್ಷ ರು, ನಗದು, 3.5 ಲಕ್ಷ ರು ಮೌಲ್ಯದ 71.702 ಗ್ರಾಂ ಚಿನ್ನದ ಸರ, 1ಲಕ್ಷ ರು, ಬೆಲೆ ಬಾಳುವ 21 ಪೂಜಾ ಸಾಮಾನುಗಳು, 5 ಲಕ್ಷ ರು, ಮೌಲ್ಯದ ಕೃತ್ಯಕ್ಕೆ ಬಳಸಿದ ಕಾರು ಸೇರಿ 3 ನಾಡ ಪಿಸ್ತೂಲ್‌, 1 ಖಾಲಿ ಮ್ಯಾಗ್ವಿನ್‌ ಪಿಸ್ತೂಲ್‌, 46 ಜೀವಂತ ಬುಲೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆಯೆಂದು ಕೇಂದ್ರ ವಲಯದ ಪೊಲೀಸ್‌ ಮಹಾ ನಿರೀಕ್ಷಕ ಚಂದ್ರಶೇಖರ್‌ ವಿವರಿಸಿದರು.

click me!