ರಸ್ತೆ ದರೋಡೆ ಹಾಗೂ ಪುರಾತನ ದೇವಸ್ಥಾನಗಳನ್ನು ಪತ್ತೆಮಾಡಿ ನಿಧಿಗಾಗಿ ಶೋಧನಡೆಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಡಕಾಯಿತರ ತಂಡವನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಜು.23): ರಸ್ತೆ ದರೋಡೆ ಹಾಗೂ ಪುರಾತನ ದೇವಸ್ಥಾನಗಳನ್ನು ಪತ್ತೆಮಾಡಿ ನಿಧಿಗಾಗಿ ಶೋಧನಡೆಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಡಕಾಯಿತರ ತಂಡವನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ. ಲಿಂಗಣ್ಣಹಳ್ಳಿ ರಸ್ತೆಯಲ್ಲಿ ಮಧ್ಯರಾತ್ರಿ ಜುಲೈ 22 ಬೆಳಗಿನಜಾವ 3.30 ಗಂಟೆ ಸಮಯದಲ್ಲಿ ರಸೆಯ ಬದಿಯಲ್ಲಿ ಜನವಸತಿ ಇಲ್ಲದ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಒಂದುಕಾರು ನಿಂತಿದ್ದು ಅನುಮಾನಗೊಂಡು ಆ ಕಾರಿನ ಬಳಿಗೆ ಹೋಗಿ ವಿಚಾರಿಸಿದಾಗ ಓಡಿಹೋಗಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಲ್ಲೇಶಿ.ಪಿ- ಜಗಳೂರುಟೌನ್. ದಿವಾನ್‌ಸಾಬ್‌ಜಾವೀದ್ - ಅಜಾದ್‌ನಗರ ಮಲ್ಲಿಕಾರ್ಜುನ - ಹುಬ್ಬಳ್ಳಿ, ಹನುಮಂತ - ಹುಬ್ಬಳ್ಳಿ, ಅಮೀರ್‌ಖಾನ್‌ಪಠಾಣ್ - ಹುಬ್ಬಳ್ಳಿ. ಮುರ್ತಾಜಾಸಾಬ್@ಗೋಲಂದಾಜ್- ಇಳಕಲ್ ಈ ವ್ಯಕ್ತಿಗಳು ಅನುಮಾನಸ್ಪದವಾಗಿ ಕಂಡುಬಂದಿದ್ದು ಜಗಳೂರು ಸ್ಥಳೀಯ ಒಬ್ಬನಿದ್ದು ಉಳಿದ 5 ಜನರು ಪರಸ್ಥಳೀಯರಿದ್ದು ಇವರ ಮೇಲೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸಿದಾಗ ಮತ್ತಷ್ಟು ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ. ಆರೋಪಿಗಳು ರಸ್ತೆ ದರೋಡೆ ಹಾಗೂ ಪುರಾತನ ದೇವಸ್ಥಾನಗಳನ್ನು ಪತ್ತೆಮಾಡಿ ನಿಧಿಗಾಗಿ ಶೋಧ ನಡೆಸಿ ದರೋಡೆ ಮಾಡುತ್ತಿದ್ದರು.
undefined
ಮೋದಿ ರಾಜ್ಯಕ್ಕೆ ಬಂದ್ರೆ ನಮ್ಮ ಅಭ್ಯರ್ಥಿಗಳು 3-4 ಲಕ್ಷ ಅಂತರದಿಂದ ಗೆಲ್ಲುತ್ತಾರೆ: ಶಾಸಕ ಹಿಟ್ನಾಳ್ ವ್ಯಂಗ್ಯ
ಜುಲೈ 22 ರಂದು 12 ಗಂಟೆ ಅವಧಿಯಲ್ಲಿ ಬಿದರಕೆರೆ-ಸಂತೆ ಮುದ್ದಾಪುರ ಗ್ರಾಮಗಳ ಮದ್ಯದಲ್ಲಿ ಬರುವ ಬೇಡಿ ಆಂಜನೇಯಸ್ವಾಮಿ ಗುಡಿಯ ಮುಂಭಾಗದಲ್ಲಿರುವ ಬಸವಣ್ಣ ದೇವಸ್ಥಾನದಲ್ಲಿ ಬಸವಣ್ಣನಮೂರ್ತಿಯನ್ನು ಕಿತ್ತು ಪಕ್ಕದಲ್ಲಿಟ್ಟು ನಿಧಿಗಾಗಿ ಶೋಧನೆ ಮಾಡಿರುವುದು ತಿಳಿದು ಬಂದಿದೆ. ಆರೋಪಿತರಿಂದ ಬಿಳಿ ಬಣ್ಣದ ಸ್ವಿಪ್ಟ್ ಡಿಸೈರ್‌ಕಾರ್, ಕಟ್ಟಿಗೆ ಹಿಡಿಕೆ ಇರುವ ಒಂದು ಕಬ್ಬಿಣದ ಸುತ್ತಿಗೆ, ಒಂದುಜೊತೆ ಹ್ಯಾಂಡ್‌ಗ್ಲೌಸ್, 1 ಕಟ್ಟಿಂಗ್ ಪ್ಲೇಯರ್, 2 ಕಬ್ಬಿಣದ ಪ್ಲಾಟ್ ಚಿಸೆಲ್‌ಗಳು, ಒಂದು ಸುರ್‌ಸುರ್‌ಬತ್ತಿ, ಮಾಸಲು ಬಣ್ಣದ ಪ್ಲಾಸ್ಟಿಕ್ ಹಗ್ಗ, ಒಂದು ಗುಟಕಾ ಕಂಪನಿಯ ಖಾಲಿಬ್ಯಾಗ್, 2 ಪಾಕೇಟ್ ಕಾರದ ಪುಡಿ, 3 ಮೊಬೈಲ್‌ಗಳು, 2000/- ರೂ ನಗದು ಹಣ, ಟಾರ್ಚ್, ರೇಡಿಯಂ ಕಟ್ಟರ್ ಚಾಕು ಇವುಗಳನ್ನು ಜಪ್ತುಪಡಿಸಿಕೊಂಡಿರುತ್ತಾರೆ.
ಸುತ್ತೂರು, ಚುಂಚನಗಿರಿ ಎರಡು ಕಣ್ಣುಗಳಿದ್ದಂತೆ: ಸಚಿವ ಚಲುವರಾಯಸ್ವಾಮಿ
ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿತ ಭರತೇಶ್ ನಾಪತ್ತೆಯಾಗಿದ್ದು ಆರೋಪಿ ಸೆರೆಗೆ ಜಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಜಗಳೂರು ಪೊಲೀಸ್ ಠಾಣೆ ಪಿಐ ಶ್ರೀ ನಿವಾಸರಾವ್ ಎಂ, ಶ್ರೀ ಸಾಗರ್. ಎಸ್.ಡಿ, ಪಿಎಸ್‌ಐ. ಸಿಬ್ಬಂದಿ ವರ್ಗದವರಾದ ನಾಗಭೂಷಣ.ಆರ್, ಪಂಪಾನಾಯ್ಕ, ಬಸವಂತಪ್ಪ, ಮಾರೆಪ್ಪ, ಬಸವರಾಜ, ಜೀಪ್ ಚಾಲಕರಾದ ದಿನೇಶ್, ಚಂದ್ರಶೇಖರ್, ರಾಜಪ್ಪ, ನಾಗರಾಜ, ಗಿರೀಶ ರವರುಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರವರಾದ ಡಾ. ಅರುಣ್ ಕೆ. ಐಪಿಎಸ್ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.