
ಆಂಧ್ರಪ್ರದೇಶದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ಮರ್ಮಾಂಗವನ್ನೇ ಅಮಾನುಷವಾಗಿ ಕತ್ತರಿಸಿ ಸೇಡು ತೀರಿಸಿಕೊಂಡ ಆಘಾತಕಾರಿ ಘಟನೆ ನಡೆದಿದೆ. ಆಕೆಯ ಪತಿ ತನ್ನ ಮೊದಲ ಪತ್ನಿಯ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೋಡಿದ್ದೇ ಈ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ. ಮೊದಲ ಪತ್ನಿಯ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ವೀಕ್ಷಿಸುತ್ತಿದ್ದ ಗಂಡನ ಗುಪ್ತಾಂಗವನ್ನು ಮಹಿಳೆ ಬ್ಲೇಡ್‌ನಿಂದ ಕತ್ತರಿಸಿದ್ದಾಳೆ. ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ನಂದಿಗಮದ ಅಯ್ಯಪ್ಪ ನಗರದಲ್ಲಿ ಈ ಭಯಾನಕ ಘಟನೆ ನಡೆದಿರೋದು ವರದಿಯಾಗಿದೆ.
ಮೂಲಗಳ ಪ್ರಕಾರ, ಇಲ್ಲಿನ ಚಂದೇರ್ಲಪಾಡು ಮಂಡಲದ ಮುಪ್ಪಳ್ಳ ಗ್ರಾಮದ ಕೋಟ ಆನಂದ್ ಬಾಬು ಎಂಬ ವ್ಯಕ್ತಿ ತನ್ನ ಜಗಳವಾದ ನಂತರ ತನ್ನ ಮೊದಲ ಪತ್ನಿಯಿಂದ (First wife) ದೂರವಾಗಿದ್ದ. ಸುಮಾರು ಐದು ವರ್ಷಗಳ ಹಿಂದೆ ವರಮ್ಮ ಎಂಬುವರನ್ನು ಮದುವೆ (Marriage)ಯಾಗಿದ್ದ. ದಂಪತಿ ಕಳೆದ ಐದು ತಿಂಗಳಿಂದ ಮುಪ್ಪಳ್ಳದಲ್ಲಿ ವಾಸವಾಗಿದ್ದರು. ಕೆಲದಿನಗಳ ಹಿಂದೆ ವರಮ್ಮ ತನ್ನ ಗಂಡ, ಮೊದಲ ಹೆಂಡತಿಯ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ನೋಡುತ್ತಿರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ಬಾಬು ಅವರನ್ನು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಪಾಪಿಗೆ ತಕ್ಕ ಶಿಕ್ಷೆ! ಮನೆಗೆ ನುಗ್ಗಿ ರೇಪ್ ಮಾಡಿದವನ ಮರ್ಮಾಂಗವನ್ನೇ ಸೀಳಿದ ಸಂತ್ರಸ್ತೆ
ಕೋಪದ ಭರದಲ್ಲಿ, ಮಹಿಳೆ ಬ್ಲೇಡ್‌ನಿಂದ ಬಾಬುನ ಶಿಶ್ನವನ್ನು (Genital) ಕತ್ತರಿಸಿದ್ದಾಳೆ. ತೀವ್ರ ರಕ್ತಸ್ರಾವ ಮತ್ತು ಗಾಯಗಳಾಗಿವೆ. ಕೂಡಲೇ ಆತನನ್ನು ನಂದಿಗಾಮ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ (Treatment) ಕೊಡಿಸಲಾಯಿತು. ಆದರೆ, ಅವರ ಗಾಯಗಳ ತೀವ್ರತೆಯಿಂದಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ನಂತರ ವಿಜಯವಾಡದ ಆಸ್ಪತ್ರೆಗೆ (Hospital) ವರ್ಗಾಯಿಸಲಾಯಿತು. ಈ ಸಂಬಂಧ ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಕೊಳ್ಳಬೇಕಿದೆ.
ಕೋಪದ ಭರದಲ್ಲಿ ವರಮ್ಮ ಆನಂದ್ ಬಾಬು ಅವರ ಖಾಸಗಿ ಭಾಗಗಳಿಗೆ ಬ್ಲೇಡ್ ಬಳಸಿ ಹಲ್ಲೆ ಮಾಡಿದ್ದು, ತೀವ್ರ ರಕ್ತಸ್ರಾವ ಮತ್ತು ಗಾಯಗಳಾಗಿವೆ. ಕೂಡಲೇ ಆತನನ್ನು ನಂದಿಗಾಮ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಅವರ ಗಾಯಗಳ ತೀವ್ರತೆಯಿಂದಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ನಂತರ ವಿಜಯವಾಡದ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಅತ್ಯಾಚಾರವೆಸಗಲು ಬಂದ ಧರ್ಮಗುರು: ಮರ್ಮಾಂಗ ಕತ್ತರಿಸಿದ ಮಹಿಳೆ
ಮಾಧ್ಯಮದವರು ಸಂಪರ್ಕಿಸಿದಾಗ, ತನ್ನ ಪತಿ ತನ್ನ ಮೊದಲ ಹೆಂಡತಿಯ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೋಡುತ್ತಿರುವುದನ್ನು ಕಂಡು ವಾಗ್ವಾದ ಸಂಭವಿಸಿದೆ ಎಂದು ವರಮ್ಮ ವಿವರಿಸಿದರು. ಆದರೆ, ಆತನ ಖಾಸಗಿ ಅಂಗಗಳ ಮೇಲಿನ ದಾಳಿ ಉದ್ದೇಶಪೂರ್ವಕವಾಗಿಲ್ಲ ಎಂದು ಆಕೆ ಹೇಳಿದ್ದಾಳೆ. ತನಿಖೆ ಮುಂದುವರಿದಂತೆ, ಈ ಕೃತ್ಯದ ಹಿಂದಿನ ಕಾರಣಗಳು ತಿಳಿದುಬರಲಿದೆ.
ಮಹಿಳೆಯೊಬ್ಬರು ಪತಿಯ ಗುಪ್ತಾಂಗವನ್ನು ಕತ್ತರಿಸಿರುವುದು ಇದೇ ಮೊದಲಲ್ಲ. ಇತ್ತೀಚಿಗೆ ಒಡಿಶಾ ಮತ್ತು ರಾಜಸ್ಥಾನದಲ್ಲೂ ಇಂಥಹದ್ದೇ ಎರಡು ರೀತಿಯ ಪ್ರಕರಣಗಳು ವರದಿಯಾಗಿತ್ತು. ನವೆಂಬರ್ 2022 ರಲ್ಲಿ, ರಾಜಸ್ಥಾನದ ಬಾರ್ಮರ್‌ನಲ್ಲಿ ಕ್ಷುಲ್ಲಕ ಜಗಳದ ನಂತರ ಮಹಿಳೆಯೊಬ್ಬಳು ತನ್ನ ಗಂಡನ ಜನನಾಂಗವನ್ನು ಕತ್ತರಿಸಿದಳು. ರಾತ್ರಿ ವೇಳೆ ಮಹಿಳೆ ಫೋನ್ ನಲ್ಲಿ ಮಾತನಾಡುತ್ತಿದ್ದಕ್ಕೆ, ದಂಪತಿ ನಡುವೆ ಜಗಳ ನಡೆದಿತ್ತು. ಅಕ್ಟೋಬರ್ 2022 ರಲ್ಲಿ, ಒಡಿಶಾದ ಜಾಜ್‌ಪುರ್ ಜಿಲ್ಲೆಯಲ್ಲಿ 33 ವರ್ಷದ ಮಹಿಳೆಯೊಬ್ಬಳು ತನ್ನ ಗಂಡನ ಮರ್ಮಾಂಗವನ್ನು ಕತ್ತರಿಸಿ ಸಾಯಿಸಿದ್ದಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ