ಬೆಂಗಳೂರಿನಲ್ಲಿ ರೌಡಿಶೀಟರ್‌ಗಳು ಎಣ್ಣೆ ಪಾರ್ಟಿ ಮಾಡುವ ವೇಳೆ ಮಾತಿಗೆ ಮಾತು ಬೆಳೆದು ಒಬ್ಬನನ್ನು ಕೊಲೆ ಮಾಡಿರುವ ದುರ್ಘಟನೆ ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ.
ಬೆಂಗಳೂರು (ಮೇ 23): ನಿರ್ಜನ ಪ್ರದೇಶದಲ್ಲಿ ಕುಳಿತು ರಾತ್ರಿ ವೇಳೆ ಎಣ್ಣೆ ಪಾರ್ಟಿ ಮಾಡುತ್ತಿದ್ದ ರೌಡಿ ಶೀಟರ್‌ಗಳು ಮಾತಿಗೆ ಮಾತು ಬೆಳೆದು ಜಗಳ ಆರಂಭಿಸಿದ್ದು, ಈ ಗಲಾಟೆಯು ಒಬ್ಬ ರೌಡಿಶೀಟರ್‌ನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಪ್ರಾಣಕ್ಕೆ ಬೆಲೆಯೇ ಇಲ್ಲದಂತೆ ಆತ್ಮಹತ್ಯೆಗೆ ಶರಣಾಗುವ, ಕೊಲೆ ಮಾಡುವ ಹಾಗೂ ಹಲ್ಲೆ ಮಾಡುವ ಘಟನೆಗಳ ಬಗ್ಗೆ ನಾವು ಓದುತ್ತಲೇ ಇದ್ದೇವೆ. ಆದರೆ, ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿಯೂ ನಿನ್ನೆ ರಾತ್ರಿ ವೇಳೆ ಮೂವರು ರೌಡಿಶೀಟರ್‌ಗಳು ಸೇರಿ ಎಣ್ಣೆ ಪಾರ್ಟಿಯನ್ನು ಮಾಡಲು ಮುಂದಾಗಿದ್ದಾರೆ. ತಮಗೆ ಬೇಕಾದಷ್ಟು ಎಣ್ಣೆ ಹಾಗೂ ಇತರೆ ತಿಂಡಿಗಳನ್ನು ತೆಗೆದುಕೊಂಡು ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಎಣ್ಣೆ ಕುಡಿದು (ಮದ್ಯಪಾನ ಸೇವನೆ) ಕುಳಿತುಕೊಂಡಾಗ ಬಾಟಲಿಗಳು ಖಾಲಿಯಾಗಿವೆ. ಈ ವೇಳೆ ರೌಡಿಶೀಟರ್‌ಗಳು ನಮಗೆ ಇನ್ನೂ ಎಣ್ಣೆ ಬೇಕು ಎಂದು ಗಲಾಟೆ ಮಾಡಿಕೊಂಡಿದ್ದಾರೆ.
Bengaluru: ಡ್ರೈವರ್ ಮಾತನ್ನ ಉಡಾಫೆ ಮಾಡಿದ ಕುಟುಂಬ: ಮಗಳನ್ನು ನೀರಲ್ಲಿ ಮುಳುಗಿಸಿ ಕಣ್ಣೀರು
ಇನ್ನು ಮೂವರಲ್ಲಿ ಒಬ್ಬ ವ್ಯಕ್ತಿ ಎಣ್ಣೆಯನ್ನು ತರಲು ಬಾರ್‌ಗೆ ಹೋಗಿದ್ದಾನೆ. ಈ ವೇಳೆ ನಿರ್ಜನ ಪ್ರದೇಶದಲ್ಲಿ ಕುಳಿತುಕೊಂಡಿದ್ದ ರೌಡಿಶೀಟರ್‌ಗಳು ಪುನಃ ಗಲಾಟೆಯನ್ನು ಆರಂಭಿಸಿದ್ದಾರೆ. ಹೀಗೆ, ಮಾತಿಗೆ ಮಾತು ಬೆಳೆದು ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಹಲ್ಲೆ ಮಾಡುವಷ್ಟರ ಮಟ್ಟಿಗೆ ಬೆಳೆದಿದೆ. ನಂತರ, ವಿಜಯನಗರದ ರೌಡಿಶೀಟರ್ ನವೀನ್ ಎನ್ನುವವನು ತನ್ನ ಜೊತೆಗಿದ್ದ ಸಾಗರ್ ಅಲಿಯಾಸ್ ಚಿನ್ನು ಎನ್ನುವ ರೌಡಿಯನ್ನು ಬರ್ಬರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಈ ಘಟನೆ ಕೆ.ಪಿಉ. ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಕ್ಕದಲ್ಲೇ ಇದ್ದ ಲಾಂಗ್‌ನಿಂದ ಹಲ್ಲೆ: ಇನ್ನು ಸಾಗರ್‌ನನ್ನು ಕೊಲೆ ಮಾಡುವುದಕ್ಕೆ ಸ್ಕೆಚ್ ಹಾಕಿಕೊಂಡೇ ಎಣ್ಣೆ ಪಾರ್ಟಿಗೆ ಕರೆದೊಯ್ಯಲಾಗಿತ್ತೇ ಅಥವಾ ಎಣ್ಣೆ ಪಾರ್ಟಿ ವೇಳೆ ಉಂಟಾದ ಗಲಾಟೆಯ ಕಾರಣಕ್ಕೆ ಕೊಲೆ ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ, ಎಣ್ಣೆ ಪಾರ್ಟಿಗೆ ರೌಡಿಶೀಟರ್ ನವೀನ್ ಲಾಂಗ್ ತೆಗೆದುಕೊಂಡು ಹೋಗಿದ್ದು, ಕೊಲೆ ಮಾಡುವ ಉದ್ದೇಶದಿಂದಲೇ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ, ಕೊಲೆಯಾಗಿದ್ದ ರೌಡಿಶೀಟರ್ ಸಾಗರ್ ಅಲಿಯಾಸ್ ಚಿನ್ನು ದೇಹದಲ್ಲಿ ಮಾತ್ರ ಮಚ್ಚಿನಿಂದ ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿರುವುದು ಕಂಡುಬಂದಿದೆ.
Bengaluru- ರಾಜಕಾಲುವೆಯಲ್ಲಿ ಕೊಚ್ಚಿಹೋದ ಜಿ.ಟಿ. ಮಾಲ್ ಉದ್ಯೋಗಿ: ಸಾವಿಗೆ ಬಿಬಿಎಂಪಿಯೇ ಹೊಣೆ
ಕೊಲೆ ಮಾಡಿ ಎಸ್ಕೇಪ್ ಆದ ನವೀನ್: ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿದ ತಕ್ಷಣವೇ ರೌಡಿಶೀಟರ್ ನವೀನ್ ತಲೆಮರೆಸಿಕೊಂಡಿದ್ದಾನೆ. ಈ ದುರ್ಘಟನೆ ಬಗ್ಗೆ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಈಗ ಕೊಲೆ ಆರೋಪಿ ನವೀನ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆದರೆ, ಎಣ್ಣೆ ಪಾರ್ಟಿ ಮಾಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಹೋಗಿದ್ದ ರೌಡಿ ಸಾಗರ್ ಮಾತ್ರ ಅನಾಥ ಹೆಣವಾಗಿ ಬಿದ್ದಿದ್ದನು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.