
ಹೆಚ್‌ಡಿ ಕೋಟೆ (ಮೇ.23) ಹೆಚ್‌ಡಿ ಕೋಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 25 ಕೋಟಿ ರೂ. ಬೆಲೆಬಾಳುವ ತಿಮಿಂಗಿಲದ ಅಪರೂಪದ ಅಂಬರ್ ಗ್ರೀಸ್ ವಶಕ್ಕೆ ಪಡೆದಿದ್ದಾರೆ. ಕೇರಳ ಮೂಲದ ಮೂವರು ಆರೋಪಿಗಳು ಕೋಟ್ಯಂತರ ರೂ. ಮೌಲ್ಯದ ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಹೆಚ್‌ಡಿ ಕೋಟೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿಗಳ ಸಮೇತ ಕಾರಿನಲ್ಲಿ ಮಾರಾಟಕ್ಕಿಟ್ಟಿದ್ದ ಒಂಭತ್ತುವರೆ ಕೆಜಿ ಅಪರೂಪದ ಅಂಬರ್ ಗ್ರೀಸ್ ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್, ಅಡಿಷಿನಲ್ ಎಸ್ಪಿ ನಂದಿನಿ ಡಿವೈಎಸ್ ಪಿ ಮಹೇಶ್ ಮಾರ್ಗದರ್ಶನದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿದೆ.
₹ 10 ಕೋಟಿ ಮೌಲ್ಯದ ತಿಮಿಂಗಲ ವಾಂತಿ ವಶಕ್ಕೆ: ವಾಂತಿಗೇಕಿಷ್ಟು ಬೆಲೆ ನೋಡಿ..!
ಹೆಚ್.ಡಿ.ಕೋಟೆ ಇನ್ಸ್ ಪಕ್ಟರ್ ಶಭ್ಬೀರ್ ಹುಸೇನ್ ಮೈಸೂರು ಕ್ರೈಂಬ್ರಾಚ್ ಇನ್ಸ್ ಪೆಕ್ಟರ್ ಪುರುಷೋತ್ತಮ ತಂಡದಿಂದ ಕಾರ್ಯಾಚರಣೆ.ಹೆಚ್‌ಡಿ ಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿ ಸಮವಸ್ತ್ರ ಧರಿಸದೆ ಸಾಧಾರಣ ವ್ಯಕ್ತಿಗಳಂತೆ ಹೋಗಿ ಆರೋಪಿಗಳ ಬಂಧಿಸಲಾಗಿದೆ.
ಆರೋಪಿಗಳು ಕೇರಳದ ಕೊಚ್ಚಿನ್ ಸಮುದ್ರದಿಂದ ತಿಮಿಂಗಿಲದ ಅಂಬರ್ ಗ್ರೀಸ್ ತಂದಿರುವ ಮಾಹಿತಿ ಲಭ್ಯವಾಗಿದ್ದು, ಬಂಧಿತರಾದ ಒಟ್ಟು ಮೂವರು ಪೈಕಿ ಒಬ್ಬ ಹಡಗು ನಡೆಸುವ ನಾವಿಕನೂ ಸೇರಿದ್ದಾನೆ.
ಮಾರಾಟ ಮಾಡಲು ಯತ್ನಿಸಿದ್ದ ಅಂಬರ್ ಗ್ರೀಸ್ ಎಂದು ಖಚಿತಪಡಿಸಿರುವ ಆರಣ್ಯ ಇಲಾಖೆ. ಅಂಬರ್ ಗ್ರೀಸ್ ಎಂದು ಕರೆಯುವ ತಿಮಿಂಗಿಲ ವಾಂತಿಗೆ ವಿದೇಶದಲ್ಲಿ ಅಪಾರ ಪ್ರಮಾಣದಲ್ಲಿ ಬೇಡಿಕೆ ಮತ್ತು ಅಧಿಕ ಕೋಟ್ಯಂತರ ರೂ ಬೆಲೆ ಇದೆ.
ಆರೋಪಿಗಳ ವಿರುದ್ದ ಪ್ರಕರಣ ದಾಖಲು ಮಾಡಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್.ಡಿ.ಕೋಟೆ ಪೋಲೀಸರ ಮಿಂಚಿನ ಕಾರ್ಯಾಚರಣೆಗೆ ಕಾರ್ಯಾಚರಣೆಗೆ ಚಾಕಚಕ್ಯತೆ ಕಂಡು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Ambergris Floating Gold: ತಿಮಿಂಗಲದ ವಾಂತಿ ಚಿನ್ನಕ್ಕಿಂತ ದುಪ್ಪಟ್ಟು ದುಬಾರಿ, ಏನಿದೆ ಇದರಲ್ಲಿ!?
ಗಸ್ತಿನಲ್ಲಿದ್ದ ಪೇದೆಗಳ ಮೇಲೆ ಹಲ್ಲೆ, ಓರ್ವನ ಬಂಧನ
ಗಂಗಾವತಿ : ರಾತ್ರಿ ವೇಳೆ ಗಸ್ತಿನಲ್ಲಿದ್ದ ಇಬ್ಬರು ಪೇದೆಗಳ ಮೇಲೆ ಯುವಕರು ಮಾರಾಣಾಂತಿಕ ಹಲ್ಲೆ ಮಾಡಿದ ಘಟನೆ ಇಲ್ಲಿಯ ಕಿಲ್ಲಾ ಏರಿಯಾ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಗಸ್ತಿನಲ್ಲಿದ್ದ ಶರಣಪ್ಪಗೌಡ ಮತ್ತು ಶಿವಕುಮಾರ ಹರಿಜನ ಎನ್ನುವ ಪೇದೆಗಳ ಮೇಲೆ ಹಲ್ಲೆ ನಡೆದಿದ್ದು, ಶರಣಪ್ಪಗೌಡ ಎನ್ನುವರು ತೀವ್ರ ಗಾಯಗೊಂಡಿದ್ದಾರೆ. ಪೇದೆಗಳು ಕಿಲ್ಲಾ ಏರಿಯಾ ಪ್ರದೇಶದಲ್ಲಿ ಗಸ್ತು ಹೋಗಿದ್ದ ಸಂದರ್ಭದಲ್ಲಿ ರಸ್ತೆ ಮೇಲೆ ಬೈಕ್ ಹತ್ತಿಕೊಂಡು ನಿಂತಿದ್ದ ಅರಬಜಿಖಾನ್ ಮತ್ತು ಸಮೀರ್ ಖಾನ್ ಎನ್ನುವರನ್ನು ರಾತ್ರಿ ಸಮಯದಲ್ಲಿ ಏಕೆ ನಿಂತಿದ್ದೀರಿ ಎಂದು ವಿಚಾರಿಸುತ್ತಿದ್ದಂತೆ ಪೇದೆಗಳ ಮೇಲೆ ಹರಿಹಾಯ್ದಿದ್ದಾರೆ. ಮಾತಿಗೆ ಮಾತು ಬೆಳೆದು ಶರಣಪ್ಪ ಗೌಡ ಎನ್ನುವರ ತಲೆಗೆ ಕಬ್ಬಿಣದ ಸಲಾಖೆಯಿಂದ ತಲೆಗೆ ಹೊಡೆದಿದ್ದರಿಂದ ತೀವ್ರ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇನ್ನೋರ್ವ ಪೇದೆ ಶಿವಕುಮಾರ ಹರಿಜನಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಅರಬಜಖಾನ್ ಎನ್ನುವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಠಾಣೆಯ ಪಿಐ ಅಡೆವಪ್ಪ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ