ಬಾಗಲಕೋಟೆ: ಹೆಣ್ಣು ಸಿಗುತ್ತಿಲ್ಲವೆಂದು ನದಿಗೆ ಹಾರಿದ್ದ ಯುವಕನ ಶವ ಪತ್ತೆ

By Kannadaprabha News  |  First Published Sep 19, 2021, 3:34 PM IST

*  ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಸೇತುವೆ ಬಳಿ ಮೃತದೇಹ ಪತ್ತೆ
*  ನನಗೆ ಇನ್ನೂ ಹೆಣ್ಣು ಸಿಗುತ್ತಿಲ್ಲ ಎಂದು ಮಾನಸಿಕವಾಗಿ ನೊಂದಿದ್ದ ಯುವಕ
*  ಈ ಕುರಿತು ಬೀಳಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು 
 


ಬಾಗಲಕೋಟೆ(ಸೆ.19): ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಸೇತುವೆ ಬಳಿ ಘಟಪ್ರಭಾ ನದಿಗೆ ಹಾರಿದ್ದ ಯುವಕನ ಶವ ಶನಿವಾರ ಮಧ್ಯಾಹ್ನ ಪತ್ತೆಯಾಗಿದೆ. ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಸಾಬಣ್ಣ ಹಣಮಂತ ಅನಗವಾಡಿ (24) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ.

ಈತನಿಗೆ ಮದುವೆ ಮಾಡುವ ಸಲುವಾಗಿ ತಂದೆ ಕನ್ಯೆಯನ್ನು ನೋಡುತ್ತಿದ್ದ. ಆದರೆ ಬೇಗ ಹೆಣ್ಣು ಸಿಗದೆ ಇದ್ದ ಕಾರಣ. ಗ್ರಾಮದಲ್ಲಿರುವ ತನ್ನದೇ ವಯಸ್ಸಿನವರು ಮದುವೆಯಾಗಿದ್ದಾರೆ. ಆದರೆ ನನಗೆ ಇನ್ನೂ ಹೆಣ್ಣು ಸಿಗುತ್ತಿಲ್ಲ ಎಂದು ಮಾನಸಿಕ ಮಾಡಿಕೊಂಡು ಕಳೆದ 2 ದಿನಗಳ ಹಿಂದೆ (ಸೆ.17ರಂದು) ಘಟಪ್ರಭಾ ನದಿಗೆ ಹಾರಿದ್ದಾನೆ ಎಂದು ತಿಳಿದು ಬಂದಿದೆ. 

Tap to resize

Latest Videos

undefined

ಸವದತ್ತಿ: ಪ್ರೀತಿಗಾಗಿ ಸಿಆರ್‌ಪಿಎಫ್‌ ಯೋಧ ಆತ್ಮಹತ್ಯೆ

ಯುವಕನನ್ನು ಪತ್ತೆ ಹಚ್ಚಲು ಬೀಳಗಿ ಅಗ್ನಿಶಾಮಕ ದಳ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಶನಿವಾರ ಮಧ್ಯಾಹ್ನ ಮೃತ ಯುವಕನ ಶವವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಬೀಳಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!