ಚಿಕ್ಕಮಗಳೂರು: ಸಿಬ್ಬಂದಿಯಿಂದಲೇ ಬ್ಯಾಂಕ್‌ಗೆ ದೋಖಾ, ಚಿನ್ನ, ಎಫ್‌ಡಿ ಇಟ್ಟ ಗ್ರಾಹಕರಿಗೆ ಶಾಕ್..!

By Girish Goudar  |  First Published Nov 30, 2023, 9:04 PM IST

ಚಿಕ್ಕಮಗಳೂರು ನಗರದ ಐ.ಜಿ.ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ 6 ಕೋಟಿಗೂ ಅಧಿಕ ಹಣದುರುಪಯೋಗದ ಆರೋಪ ಕೇಳಿ ಬಂದಿದೆ. ಬ್ಯಾಂಕ್ ಮ್ಯಾನೇಜರ್ ಸಂದೀಪ್ ಕೊಲ್ಲೂರಿ, ಪ್ರಶಾಂತ್, ನಾರಾಯಣಸ್ವಾಮಿ, ಲಾವಣ್ಯ, ಶ್ವೇತಾ ವಂಚನೆ ಎಸಗಿದ ಆರೋಪಿಗಳು. ಗ್ರಾಹಕರು ಬ್ಯಾಂಕ್‌ನಲ್ಲಿಟ್ಟದ ಚಿನ್ನ, ಎಫ್ಡಿ ಹಣವನ್ನು ಬ್ಯಾಂಕ್ ಸಿಬ್ಬಂದಿ ದುರುಪಯೋಗಪಡಿಸಿಕೊಂಡಿದ್ದಾರೆ.


ವರದಿ :ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.30):  ಬ್ಯಾಂಕ್ ಸಿಬ್ಬಂದಿಗಳೇ ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿರುವ ಘಟನೆ ಚಿಕ್ಕಮಗಳೂರು ನಗರದ ಐ.ಜಿ.ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಡೆದಿದೆ. ಇಲ್ಲಿನ ಬ್ಯಾಂಕ್  ಸಿಬ್ಬಂದಿಗಳೇ ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

Tap to resize

Latest Videos

undefined

ಚಿಕ್ಕಮಗಳೂರು ನಗರದ ಐ.ಜಿ.ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ 6 ಕೋಟಿಗೂ ಅಧಿಕ ಹಣದುರುಪಯೋಗದ ಆರೋಪ ಕೇಳಿ ಬಂದಿದೆ. ಬ್ಯಾಂಕ್ ಮ್ಯಾನೇಜರ್ ಸಂದೀಪ್ ಕೊಲ್ಲೂರಿ, ಪ್ರಶಾಂತ್, ನಾರಾಯಣಸ್ವಾಮಿ, ಲಾವಣ್ಯ, ಶ್ವೇತಾ ವಂಚನೆ ಎಸಗಿದ ಆರೋಪಿಗಳು. ಗ್ರಾಹಕರು ಬ್ಯಾಂಕ್‌ನಲ್ಲಿಟ್ಟದ ಚಿನ್ನ, ಎಫ್ಡಿ ಹಣವನ್ನು ಬ್ಯಾಂಕ್ ಸಿಬ್ಬಂದಿ ದುರುಪಯೋಗಪಡಿಸಿಕೊಂಡಿದ್ದಾರೆ.

ಹುಬ್ಬಳ್ಳಿ: ಸ್ವೈಪಿಂಗ್ ಮಷಿನ್ ಮೂಲಕ ಗೌಪ್ಯ ಮಾಹಿತಿ ಕದ್ದು ಹಣ ಲೂಟಿ‌ ಮಾಡ್ತಿದ್ದ‌ ಖರ್ತನಾಕ್ ಕಳ್ಳ ಅರೆಸ್ಟ್‌

ಗ್ರಾಹಕರ ಚಿನ್ನ, ಎಫ್.ಡಿ. ಹಣ ದುರುಪಯೋಗ

ಆರೋಪಿಗಳು ಗ್ರಾಹಕರ ಚಿನ್ನವನ್ನು ಮಾರಾಟ ಮಾಡಿ ನಕಲಿ‌ಚಿನ್ನವನ್ನು ಬ್ಯಾಂಕ್ ಲಾಕರ್ನಲ್ಲಿ ಇಟ್ಟಿದ್ದಾರೆ. ಬೆಂಗಳೂರು ಮುಖ್ಯ ಶಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. 141 ಚಿನ್ನದ ಪ್ಯಾಕೆಟ್ಗಳ ಪೈಕಿ 140 ಪ್ಯಾಕೆಟ್ಗಳಲ್ಲಿ ನಕಲಿ ಚಿನ್ನ ಪತ್ತೆಯಾಗಿವೆ. ಬ್ಯಾಂಕ್ ಆಡಿಟ್ನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿರುವುದು ಬಹಿರಂಗಗೊಂಡಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಬೆಂಗಳೂರು ಶಾಖೆಯ ಮ್ಯಾನೇಜರ್ ಆರೋಪಿಗಳ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..

ಗ್ರಾಹಕರ ದಿನನಿತ್ಯದ ವ್ಯವಹಾರದ ಮೇಲೆ ಗಂಭೀರ ಪರಿಣಾಮ : 

ಬೆಂಗಳೂರಿನ ಹಿರಿಯ ಅಧಿಕಾರಿಗಳು ಶಾಖೆಗೆ ಭೇಟಿ ನೀಡಿದ ವೇಳೆಯಲ್ಲಿ ಶಾಕ್ ಗೆ ಒಳಾಗಿದ್ದಾರೆ. ಗ್ರಾಹಕರು ಇಟ್ಟಿರೋ ಚಿನ್ನವೇ ಇಲ್ಲಿ ನಕಲಿ ಎನ್ನುವುದು ತನಿಖೆಯಿಂದ ಹೊರಬಂದಿದೆ. ಲಾಕರ್ ನಲ್ಲಿರೋದು ನಕಲಿ ಚಿನ್ನ ಹಾಗಾದ್ರೇ ಅಸಲಿ ಚಿನ್ನವನ್ನ ಬೇರೆಡೆ ಅಡ ಇಟ್ಟು ಐವರು ಬ್ಯಾಂಕಿನ ಸಿಬ್ಬಂದಿಗಳು ಸಾಲ ಪಡೆದಿದ್ದಾರೆ.ಇನ್ನೂ ಮಲ್ಲಿಕಾರ್ಜುನ ಎಂಬುವವರು 2017 ರಲ್ಲಿ ಚಿನ್ನ ಅಡವಿಟ್ಟಿದ್ರಂತೆ ಅಂದು 13 ಲಕ್ಷ ಬೆಳೆಬಾಳೋ ಚಿನ್ನವನ್ನ ಕೇವಲ 2 ಲಕ್ಷಕ್ಕೂ ಅಧಿಕ ಹಣಕ್ಕೆ ಇಟ್ಟಿದ್ರಂತೆ. ಅಂದಿನಿಂದ ಪ್ರತಿವರ್ಷ ಬ್ಯಾಂಕ್ ಗೆ ಬರೋದು ವರ್ಷಕ್ಕೊಮ್ಮೆ ಬಡ್ಡಿ ಕಟ್ತಿದ್ರು. ಮುಂಬೈ ಕೇಂದ್ರ ಕಚೇರಿಯಿಂದ ಫೋನ್ ಬರ್ತಿತ್ತಂತೆ. ಆದ್ರೆ ಇತ್ತೀಚಿಗೆ ಪೋನ್ ಬರೋದು ನಿಂತಿತ್ತು..ಈಗ ಬಿಡಿಸಿಕೊಳ್ಳೋಕೆ ಹೋದ್ರೆ ನಿಮ್ಮ ಸಾಲವೇ ಕ್ಲೋಸ್ ಅಗಿದೆ ಅಂದಿದ್ದು ಪುಲ್ ಶಾಕ್ ಅಗಿದೆ. ಏನಾಯ್ತು ಅಂತಾ ನೋಡೋಕೆ ಹೋದ್ರೆ ನಾವಿಟ್ಟ ಚಿನ್ನಕ್ಕೂ ಇಲ್ಲಿರೋದಕ್ಕೂ ಸಂಬಂಧವೇ ಇಲ್ಲ ಅನ್ನೋ ಅನುಮಾನ ವ್ಯಕ್ತಪಡಿಸ್ತಾ ಇದ್ದಾರೆ. ಈಗಾಗಲೇ ಹಲವು ಪ್ರಕರಣಗಳು ಇಲ್ಲಿ ಬೆಳಕಿಗೆ ಬರ್ತಿದ್ದಂತೆ ಬೆಂಗಳೂರಿನ ಹಿರಿಯ ಅಧಿಕಾರಿಗಳು ಬಂದು ನಗರ ಠಾಣೆಗೆ ದೂರು ಕೊಟ್ಟಿದ್ದಾರೆ. 

ಏನಿದು ಕೆವೈಸಿ ವಂಚನೆ? ಇದರಿಂದ ಬಚಾವಾಗಲು ಏನ್ ಮಾಡ್ಬೇಕು? ಇಲ್ಲಿದೆ ಮಾಹಿತಿ

ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸಲಾಗ್ತಿದೆ.ಒಟ್ಟಾರೆ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ 5 ಜನರ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಸಿಬ್ಬಂದಿಗಳು ತಲೆಮರೆಸಿಕೊಂಡಿದ್ದಾರೆ. ಬ್ಯಾಂಕಿನಲ್ಲಿ ಗ್ರಾಹಕರ ದಿನನಿತ್ಯದ ವ್ಯವಹಾರದ ಮೇಲೆ ಗಂಭೀರ ಪರಿಣಾಮ ಉಂಟಾಗಿದ್ದು ಸಕಾಲದಲ್ಲಿ ಸೇವೆಗಳು ಲಭ್ಯವಾಗುತ್ತಿಲ್ಲ ಎನ್ನುವ ದೂರು ಕೇಳಿಬಂದಿದೆ. 

ಮೂವರು ಸಿಬ್ಬಂದಿಯನ್ನು ನಿಯೋಜಿಸಿದ್ದು ಗ್ರಾಹಕರನ್ನು ಸಂಭಾಳಿಸುವುದೇ ಅವರಿಗೆ ದೊಡ್ಡ ತಲೆಬಿಸಿಯಾಗಿದೆ. ಪ್ರಕರಣದ ಜಾಡು ಹಿಡಿದಿರುವ ಪೊಲೀಸ್ರ ತನಿಖೆಯಲ್ಲಿ ಚುರಕುಗೊಳಿಸಿದ್ದು ಆರೋಪಿಗಳಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

click me!