'ಜಿಪ್ ತೆಗೆದು ಸಲ್ವಾರ್ ಕಮೀಜ್ ಒಳಗೆ ಬಂದಿದ್ದ ಅನುರಾಗ್'

By Suvarna News  |  First Published Sep 21, 2020, 10:45 PM IST

ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ/  ಇನ್ನೂರು ಜನರೊಂದಿಗೆ ಮಲಗಿದ್ದೇನೆ/ ಸಿನಿಮಾ ಜಗತ್ತಿನಲ್ಲಿ ಇದೆಲ್ಲಾ ಬಲು ಕಾಮನ್/ ಒತ್ತಾಯ ಮಾಡಿ ಮೇಲೆ ಬಂದಿದ್ದ ನಿರ್ದೇಶಕ


ಮುಂಬೈ(ಸೆ. 21)  ಬಟ್ಟೆ ಬಿಚ್ಚಿ ಮಂಚ ಏರು ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಕರೆದಿದ್ದರು ಎಂದು ಆರೋಪ ಮಾಡಿದ್ದ ನಟಿ ಪಾಯಲ್ ಘೋಷ್ ಈಗ ಮತ್ತೊಂದಿಷ್ಟು ಶಾಕಿಂಗ್ ವಿಚಾರಗಳನ್ನು ತಿಳಿಸಿದ್ದಾರೆ.

ಮೊದಲನೆ  ಬಾರಿ ಮನೆಗೆ ಹೋದಾಗ ಅವರೇ ಅಡುಗೆ ಮಾಡಿ ನೀಡಿದ್ದರು. ನಾನು ತಿಂಡಿ ತಿಂದ ಪ್ಲೇಟ್ ಸಹ ತೆಗೆದುಕೊಂಡು ಹೋದರು. ಸಿನಿಮಾ ಜಗತ್ತಿನ ಅನೇಕ ವಿಚಾರಗಳನ್ನು ಮೊದಲೆ ಭೇಟಿಯಲ್ಲಿ  ಮಾತನಾಡಿದ್ದರು. 

Tap to resize

Latest Videos

undefined

ಬಟ್ಟೆ ಬಿಚ್ಚಿದ್ದ ನಿರ್ದೇಶಕ ಎಲ್ಲವನ್ನು ಮಾಡಲು ಬಂದಿದ್ದ

ಮಾಧ್ಯಮವೊಂದರ ಜತೆ ಮಾತನಾಡಿದ ನಟಿ, ಯಾಕೆ ನಾಚಿಕೆ ಮಾಡಿಕೊಳ್ಳುತ್ತೀಯಾ, ಎಲ್ಲರೂ ಹೀಗೆ ಮಾಡುತ್ತಾರೆ ಎಂದು ಕಶ್ಯಪ್ ಹೇಳಿದ್ದರು.  ಎರಡನೇ ಬಾರಿ ಅವರ ಮನೆಗೆ ಹೋದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಬಲವಂತ ಮಾಡಿದ್ದದ್ದರು.  ಹೆಣ್ಣು ಮಕ್ಕಳೊಂದಿಗೆ ಸುಖಕರ ಸಮಯ ಕಳೆದಿದ್ದೇನೆ ಎಂದು  ಹೇಳಿ ಮೈಮೇಲೆ ಬಂದಿದ್ದರು ಎಂದು ನಟಿ ಆರೋಪಿಸಿದ್ದಾರೆ.

ಎಲ್ಲ ವಿಚಾರಗಳನ್ನು ಮುಕ್ತವಾಗಿ ಹೇಳಿರುವ ನಟಿ, ಎರಡನೇ ಬಾರಿ ಭೇಟಿ ಮಾಡಲು ಹೋದಾಗ ನಡೆದ ಘಟನೆ ವಿವರಿಸಿದ್ದಾರೆ.  ತಮ್ಮ ಪ್ಯಾಂಟ್ ಜಿಪ್ ತೆಗೆದ ಕಶ್ಯಪ್ ಬಲವಂತ ಮಾಡಿ ನನ್ನ ಸಲ್ವಾರ್ ಕಮೀಜ್  ಒಳಗೆ ಬಂದಿದ್ದರು.  ಇದು ನಡೆಯುತ್ತದೆ,,, ನನ್ನ ಜತೆನ ಕೆಲಸ ಮಾಡಿದ ಎಲ್ಲ ನಟಿಯರೂ ಒಪ್ಪಿಕೊಂಡಿದ್ದಾರೆ.. ನಾನು ಒಂದು ಕರೆ ಮಾಡಿದರೆ ಅವರು ಬಂದು ಎಲ್ಲವನ್ನು ಮಾಡುತ್ತಾರೆ ಎಂದು  ಹೇಳಿದ್ದರು ಎಂದು ನಟಿ ವಿವರಣೆ ನೀಡಿದ್ದಾರೆ.

 

 

click me!