'ಆದಿತ್ಯ ಆಳ್ವಾ ಎಲ್ಲಿದ್ದರೂ ಸಿಸಿಬಿ ಬಲೆಗೆ ಬೀಳಲೇಬೇಕು' ಎಂಥಾ ಪ್ಲಾನ್!

By Suvarna News  |  First Published Sep 21, 2020, 10:06 PM IST

ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಮಹತ್ವದ ತಿರುವು/ ಆದಿತ್ಯ ಆಳ್ವಾ ಹುಡುಕಾಟಕ್ಕೆ ಸಿಸಿಬಿ ಖೆಡ್ಡಾ/ ಲುಕ್ ಔಟ್ ನೋಟಿಸ್ ಜಾರಿ ಮಾಡಿದ ಸಿಸಿಬಿ/  ವಿದೇಶಕ್ಕೆ ಪರಾರಿಯಾಗಿರುವ ಶಂಕೆ


ಬೆಂಗಳೂರು(ಸೆ. 21) ಸ್ಯಾಂಡಲ್‌ವುಡ್ ಡ್ರಗ್ಸ್  ಘಾಟು ಪ್ರಕರಣದಲ್ಲಿ  ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.  ಪರಾರಿಯಾಗಿರುವ ಆರೋಪಿ ಆದಿತ್ಯ ಆಳ್ವಾ ಹುಡುಕಾಟವನ್ನು ಸಿಸಿಬಿ ಪೊಲೀಸರು ಚುರುಕು ಮಾಡಿದ್ದಾರೆ.

ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾ  ವಿದೇಶಕ್ಕೆ ಪರಾರಿಯಾಗಿರುವ ಅನುಮಾನ ಇದ್ದು ಲುಕ್ ಔಟ್ ನೋಟಿಸ್ ಜಾರಿ  ಮಾಡಲಾಗಿದೆ. ಲುಕ್ ಔಟ್ ನೋಟಿಸ್ ಜಾರಿ ಬಗ್ಗೆ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tap to resize

Latest Videos

'ಇಬ್ಬರು ದೊಡ್ಡ ನಟರಿದ್ದಾರೆ, ಅಕುಲ್ , ಸಂತೋಷ್ ಅಲ್ಲ'

ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು ಪ್ರಕರಣದಲ್ಲಿ ನಟಿ ರಾಗಿಣಿ , ಸಂಜನಾ, ವೀರೇನ್ ಖನ್ನಾ ಸೇರಿದಂತೆ ಉಳಿದವವರನ್ನು ಬಂಧನ ಮಾಡಲಾಗಿತ್ತು. ಆದರೆ ಆಳ್ವಾ ಸಿಕ್ಕಿಲ್ಲ.

ಒಂದಾದ ಮೇಲೆ ಒಂದು ಅಂಶಗಳು ಈ ಪ್ರಕರಣದಲ್ಲಿ ಬೆಳಕಿಗೆ ಬರುತ್ತಿದ್ದು ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್ ಅವರನ್ನು ವಿಚಾರಣೆ ಮಾಡಲಾಗಿದೆ. 

"

click me!