ನಟಿಯರಿಗೆ ಮುಗಿಯದ ಜೈಲುವಾಸ;  ಗುರುವಾರದ ಕತೆ ಏನು?

By Suvarna News  |  First Published Sep 21, 2020, 5:16 PM IST

ನಟಿಯರಿಗೆ ಜಾಮೀನು ಇಲ್ಲ/ ಗುರುವಾರ ಸೆ. 24ಕ್ಕೆ ವಿಚಾರಣೆ ಮುಂದೂಡಿಕೆ/  ಇನ್ನು ಮೂರು ದಿನ ಜೈಲೆ ಗತಿ/ ರಾಗಿಣಿ ಮತ್ತು ಸಂಜನಾಗೆ ಜೈಲು ವಾಸ ಮುಂದೂಡಿಕೆ


ಬೆಂಗಳೂರು(ಸೆ. 21) ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಳೀಸರ ವಿಚಾರಣೆ ನಂತರ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ಮತ್ತು ಸಂಜನಾಗೆ ಇನ್ನು ಮೂರು ದಿನ ಜೈಲೇ ಗತಿ.  ಗುರುವಾರ  ಅಂದರೆ ಸೆ. 24 ಕ್ಕೆ ನಟಿಯರ ಜಾಮೀನು ಅರ್ಜಿಯನ್ನು ಮುಂದೂಡಲಾಗಿದೆ.

"

Tap to resize

Latest Videos

ಸಿಸಿಬಿ ಪರ ವಕೀಲರು ವಾದ ಮಂಡನೆ ಮಾಡಬೇಕಿದ್ದು ಕಾಲಾವಕಾಶ ಕೋರಿದರೆ ನಟಿಯರು ಮತ್ತಷ್ಟು ದಿನ ಜೈಲು ವಾಸ ಅನುಭವಿಸಬೇಕಾಗುತ್ತದೆ. ಅನಿಕಾ ಡಿ. ಎಂಬಾಕೆಯ ಬಂಧನದ ನಂತರ ಹುಟ್ಟಿಕೊಂಡ ಡ್ರಗ್ಸ್ ಘಾಟು ಸೆಲೆಬ್ರಿಟಿಗಳನ್ನು ಸುತ್ತಿಕೊಂಡಿದೆ.

ಇದು ದೊಡ್ಡವರ ಮಕ್ಕಳ ಡರ್ಟಿ ಪಿಕ್ಚರ್!

ನಿರ್ದೇಶಕ ಇಂದ್ರಜಿತ್ ಲಂಕೇಶ್, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆರೋಪ ಮಾಡಿದ ನಂತರ ಕಿಡಿ ಹೊತ್ತಿಕೊಂಡಿತ್ತು.  ಮೊದಲು ನಟಿ ರಾಗಿಣಿ ಮನೆ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸಲಾಯಿತು. ಇದಾಗಿ ಕೆಲ ದಿನಗಳ ನಂತರ ಸಂಜನಾ ಅವರ ಬಂಧನವಾಯಿತು.

"

ಇನ್ನೊಂದು ಕಡೆ ಸಿಸಿಬಿ ತನಿಖೆಯನ್ನುಮುಂದುವರಿಸಿದ್ದು ಐಂದ್ರಿತಾ-ದಿಗಂತ್ ದಂಪತಿ, ನಿರೂಪಕ ಅಕುಲ್ ಬಾಲಾಜಿ,. ನಟ ಸಂತೋಷ್ ಅವರಿಂದಲೂ ಹೇಳಿಕೆ ಪಡೆದುಕೊಂಡಿದೆ. ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು ಒಂದೊಂದೆ ಅಂಶಗಳು ಹೊರಬೀಳುತ್ತಿವೆ. 

click me!