ಉತ್ತರ ಪ್ರದೇಶದ ಔರೈಯಾ ಮೂಲದ ನಿಶಾ ಯಾದವ್ ಕಳೆದ 6 ತಿಂಗಳಿನಿಂದ ಕೋಟಾದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು ಮತ್ತು ಮಹಾವೀರ್ ನಗರ ಪ್ರದೇಶದ ಖಾಸಗಿ ಹಾಸ್ಟೆಲ್‌ನಲ್ಲಿ ತಂಗಿದ್ದಳು. ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜೈಪುರ (ಡಿಸೆಂಬರ್ 1, 2023): ನೀಟ್ ಆಕಾಂಕ್ಷಿಗಳ ಆತ್ಮಹತ್ಯೆ ಸರಣಿ ಮುಂದುವರಿದಿದೆ. ಅದ್ರಲ್ಲೂ, ರಾಜಸ್ಥಾನದ ಕೋಟಾ ಸೂಸೈಡ್ ಹಾಟ್‌ಸ್ಪಾಟ್ ಎನಿಸಿಕೊಂಡಿದೆ. ಬುಧವಾರ ರಾತ್ರಿ ಮತ್ತೊಬ್ಬರು ನೀಟ್ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಹಾಸ್ಟೆಲ್ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಪ್ರಾಣ ಬಿಟ್ಟಿದ್ದಾರೆ.
ಇನ್ನು, ಈ ವಾರ ರಾಜಸ್ಥಾನದ ಕೋಚಿಂಗ್ ಹಬ್‌ನಲ್ಲಿ ಎರಡನೇ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು ಮತ್ತು ಈ ವರ್ಷದ 26ನೇ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣವಾಗಿದೆ ಎಂಬುದು ಆತಂಕಕಾರಿ ವಿಷಯವಾಗಿದೆ. ಉತ್ತರ ಪ್ರದೇಶದ ಔರೈಯಾ ಮೂಲದ ನಿಶಾ ಯಾದವ್ (22) ಕಳೆದ 6 ತಿಂಗಳಿನಿಂದ ಕೋಟಾದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು ಮತ್ತು ಮಹಾವೀರ್ ನಗರ ಪ್ರದೇಶದ ಖಾಸಗಿ ಹಾಸ್ಟೆಲ್‌ನಲ್ಲಿ ತಂಗಿದ್ದರು. ಇವರು ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ: ಕೋಟಾದಲ್ಲಿ ಹೆಚ್ಚು ವಿದ್ಯಾರ್ಥಿಗಳ ಸೂಸೈಡ್: ಹಾಸ್ಟೆಲ್, ಪಿಜಿಗೆ ಆತ್ಮಹತ್ಯೆ ತಡೆಗಟ್ಟುವ ಫ್ಯಾನ್ ಅಳವಡಿಕೆ
ಗುರುವಾರ ಆಗಮಿಸಿದ ಆಕೆಯ ತಂದೆ ಅವಶಾನ್ ಸಿಂಗ್ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ತನ್ನ ಮಗಳು ಯಾವುದೇ ಒತ್ತಡಕ್ಕೆ ಒಳಗಾಗಿರಲಿಲ್ಲ ಅಥವಾ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುವ ಒತ್ತಡ ಅನುಭವಿಸುತ್ತಿರಲಿಲ್ಲ ಎಂದೂ ಹೇಳಿದ್ದಾರೆ. ಅವಳು ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಳು. ಆಕೆ ಬುದ್ಧಿವಂತಳಾಗಿದ್ದಳು ಮತ್ತು ಮೇ ತಿಂಗಳಲ್ಲಿ ಕೋಟಾಗೆ ಕೋಚಿಂಗ್‌ಗೆ ಬಂದಿದ್ದಳು. 4 - 5 ಬಾರಿ ಮನೆಗೆ ಸಹ ಭೇಟಿ ನೀಡಿದ್ದಳು. ನವೆಂಬರ್ 18 ರಂದು ದೀಪಾವಳಿ ವಿರಾಮದ ನಂತರ ಅವಳು ಮತ್ತೆ ಕೋಟಾಗೆ ಬಂದಿದ್ದಳು ಎಂದೂ ತಿಳಿದುಬಂದಿದೆ.
ಅಲ್ಲದೆ, ಯಾವುದೇ ಸ್ಪಷ್ಟವಾದ ಒತ್ತಡ ಇರಲಿಲ್ಲ, ಆದರೆ ಅವಳು ಕೆಲವು ರೀತಿಯ ತಲೆನೋವು ಅನುಭವಿಸುತ್ತಿದ್ದಳು ಎಂದೂ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ನಿಶಾ ಯಾದವ್ ತಂದೆ ಹೇಳಿದ್ದಾರೆ. ಬುಧವಾರ ರಾತ್ರಿ ನಿಶಾ ತನ್ನ ಕುಟುಂಬ ಸದಸ್ಯರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಳು. ಬಳಿಕ, ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಆಕೆಯ ತಾಯಿ ಮತ್ತೆ ಕರೆ ಮಾಡಿದರೂ ನಿಶಾ ಉತ್ತರಿಸಲಿಲ್ಲ. ಪದೇ ಪದೇ ಕರೆ ಮಾಡಿದರೂ ಉತ್ತರಿಸದೇ ಹೋದಾಗ, ನಿಶಾಳ ತಾಯಿ ಹಾಸ್ಟೆಲ್ ವಾರ್ಡನ್ ಅನ್ನು ಸಂಪರ್ಕಿಸಿ ತನ್ನ ಮಗಳನ್ನು ಪರೀಕ್ಷಿಸುವಂತೆ ವಿನಂತಿಸಿದರು ಎಂದೂ ತಂದೆ ಹೇಳಿಕೊಂಡಿದ್ದಾರೆ.
ಆತ್ಮಹತ್ಯೆ ತಡೆಗೆ ಕೋಟಾ ಹಾಸ್ಟೆಲ್‌ಗಳ ಬಾಲ್ಕನಿ, ಲಾಬಿಗೆ ನೆಟ್ ಅಳವಡಿಕೆ
ವಾರ್ಡನ್ ಒಳಗಿನಿಂದ ಬೀಗ ಹಾಕಿದ್ದ ನಿಶಾಳ ಕೋಣೆಗೆ ಹೋದಳು. ತಟ್ಟಿದರೂ ನಿಶಾ ಸ್ಪಂದಿಸದಿದ್ದಾಗ ವಾರ್ಡನ್ ಹಾಸ್ಟೆಲ್ ಮಾಲೀಕರನ್ನು ಸಂಪರ್ಕಿಸಿದ್ದು, ಅವರು ಸ್ಥಳಕ್ಕಾಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕೋಟಾದಲ್ಲಿ ಮತ್ತಿಬ್ಬರು ನೀಟ್ ವಿದ್ಯಾರ್ಥಿಗಳು ಸಾವಿಗೆ ಶರಣು: ಒಂದೇ ವರ್ಷದಲ್ಲಿ 24 ವಿದ್ಯಾರ್ಥಿಗಳು ಬಲಿ