ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೈತಿಕ ಪೊಲೀಸ್‌ಗಿರಿ ನಿರ್ನಾಮ ಮಾಡುತ್ತೇವೆ ಎಂದು ವಿಧಾನಸಭಾ ಚುನಾವಣೆ ವೇಳೆ ಅಬ್ಬರಿಸಿದ್ದ ಸಿಎಂ ಸಿದ್ದರಾಮಯ್ಯರ. ಆದರೆ ಅಧಿಕಾರಕ್ಕೆ ಬಂದು ವರ್ಷವಾದರೂ ನೈತಿಕ ಪೊಲೀಸ್‌ಗಿರಿ ತಡೆಯುವಲ್ಲಿ ವಿಫಲವಾಯ್ತಾ ಸರ್ಕಾರ? ಚಿತ್ರದುರ್ಗದಲ್ಲಿ ಹೆಚ್ಚುತ್ತಿವೆ ನೈತಿಕ ಪೊಲೀಸ್‌ಗಿರಿ ಪ್ರಕರಣ.
ಚಿತ್ರದುರ್ಗ (ಏ.18): ಮೊದಲೆಲ್ಲ ನೈತಿಕ ಪೊಲೀಸ್‌ಗಿರಿಯಂತಹ ಪ್ರಕರಣಗಳು ಹೆಚ್ಚಾಗಿ ಕರಾವಳಿ ಭಾಗದಲ್ಲಿ ಅದರಲ್ಲೂ ಮಂಗಳೂರಲ್ಲಿ ಮಾಮೂಲಿ ಎಂಬ ಮಾತಿತ್ತು. ಆದರೆ ಇತ್ತೀಚೆಗೆ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕರ್ನಾಟಕದಲ್ಲೂ ಪ್ರಕರಣಗಳು ಕೇಳಿಬಂದವು. ಇದೀಗ ಕೋಟೆನಾಡು ಚಿತ್ರದುರ್ಗದಲ್ಲೂ ನೈತಿಕ ಪೊಲೀಸ್‌ಗಿರಿ ಪ್ರಕರಣಗಳು ಹೆಚ್ಚುತ್ತಿವೆಯಾ ಎಂಬ ಅನುಮಾನ ಮೂಡಿಸುವಂತೆ ಪದೇಪದೆ ಹಿಂದೂ ಮುಸ್ಲಿಂ ನಡುವೆ ಹಲ್ಲೆ ಗಲಾಟೆಗಳು ನಡೆಯುತ್ತಿವೆ.
ಇದೇ ತಿಂಗಳ ಮೊದಲ ವಾರದಲ್ಲಿ ಮುಸ್ಲಿಂ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ವ್ಯಕ್ತಿಯೊಬ್ಬನಿಗೆ ಅನ್ಯಕೋಮಿನವರು ಮರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ರಸ್ತೆಯಲ್ಲಿ ನಡೆದಿತ್ತು. ಪ್ರಕರಣ ಮಾಸುವ ಮುನ್ನವೇ ಇದೀಗ ಚಿತ್ರದುರ್ಗದಲ್ಲಿ ಮತ್ತೊಂದು ಘಟನೆ ನಡೆದಿದೆ.
undefined
ನೈತಿಕ ಪೊಲೀಸ್‌ಗಿರಿ ಆರೆಸ್ಸೆಸ್, ಬಜರಂಗದಳ ಕುತಂತ್ರ: ಸಚಿವ ಗುಂಡೂರಾವ್
ಮುಸ್ಲಿಂ ಯುವತಿಗೆ ಡ್ರಾಪ್ ನೀಡಿದ ಯುವಕನಿಗೆ ಕಿಡಿಗೇಡಿಗಳು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಚಿತ್ರದುರ್ಗ ನಗರದ ಚೇಳಗುಡ್ಡ ಬಡಾವಣೆಯಲ್ಲಿ ನಡೆದಿದೆ.
ಈರಜ್ಜನಹಟ್ಟಿಯ ಉಮೇಶ್ ಎಂಬಾತನ ಮೇಲೆ ಹಲ್ಲೆ ನಡೆಸಿರುವ ಕಿಡಿಗೇಡಿಗಳು. ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಉಮೇಶ್ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಹಿನೂರ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಉಮೇಶ್. ಅದೇ ಅಂಗಡಿಯಲ್ಲಿ ಜೊತೆಗೆ ಕೆಲಸ ಮಾಡುವ ಯುವತಿಗೆ ಮನೆ ಬಳಿ ಡ್ರಾಪ್ ನೀಡಿದ್ದ. ಮುಸ್ಲಿಂ ಯುವತಿಗೆ ಡ್ರಾಪ್ ನೀಡಿದ್ದಾನೆಂದು ಯುವಕನಿಗೆ ಥಳಿಸಿರುವ ಕಿಡಿಗೇಡಿಗಳು. ಚಿತ್ರದುರ್ಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ.
ಮಂಗಳೂರಿನ ಕದ್ರಿ ಪಾರ್ಕ್ ನೈತಿಕ ಪೊಲೀಸ್ ಗಿರಿ ಕೇಸ್‌ಗೆ ಸಿಕ್ತು ಭರ್ಜರಿ ಟ್ವಿಸ್ಟ್!
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೈತಿಕ ಪೊಲೀಸ್‌ಗಿರಿ ನಿರ್ನಾಮ ಮಾಡುತ್ತೇವೆ ಎಂದು ವಿಧಾನಸಭಾ ಚುನಾವಣೆ ವೇಳೆ ಅಬ್ಬರಿಸಿದ್ದ ಸಿಎಂ ಸಿದ್ದರಾಮಯ್ಯರ. ಆದರೆ ಅಧಿಕಾರಕ್ಕೆ ಬಂದು ವರ್ಷವಾದರೂ ನೈತಿಕ ಪೊಲೀಸ್‌ಗಿರಿ ತಡೆಯುವಲ್ಲಿ ವಿಫಲವಾಯ್ತಾ ಸರ್ಕಾರ? ಏಕೆಂದರೆ ಈವರೆಗೆ ಕರಾವಳಿ ಮಲೆನಾಡಲ್ಲಿ ನಡೆಯುತ್ತಿದ್ದ ನೈತಿಕ ಪೊಲೀಸ್‌ಗಿರಿ ಪ್ರಕರಣಗಳು ಚಿತ್ರದುರ್ಗ ಉತ್ತರ ಕರ್ನಾಟಕ ಭಾಗದಲ್ಲೂ ಇತ್ತೀಚೆಗೆ ಹೆಚ್ಚುತ್ತಿರುವುದು ಹಿಂಗೊಂದು ಅನುಮಾನ ಮೂಡಿರುವುದು ಸುಳ್ಳಲ್ಲ.