ಬೆಂಗಳೂರಲ್ಲಿ ಹಾಡಹಗಲೇ ಡಬಲ್ ಮರ್ಡರ್; ಕಣ್ಣಮುಂದೆ ಮಗಳನ್ನು ಕೊಲೆಗೈದ ಪ್ರೇಮಿಯನ್ನು ಕಲ್ಲಿನಿಂದ ಚಚ್ಚಿ ಕೊಂದ ತಾಯಿ!

By Sathish Kumar KH  |  First Published Apr 18, 2024, 7:34 PM IST

ಬೆಂಗಳೂರಿನ ಜೆ.ಪಿ. ನಗರದ ಪಾರ್ಕ್‌ನಲ್ಲಿ ಹಾಡ ಹಗಲೇ ಜೋಡಿ ಕೊಲೆ ನಡೆದಿದೆ. ಇದೊಂದು ತನ್ನ ಮಗಳನ್ನು ಕೊಲೆ ಮಾಡಿದ ವ್ಯಕ್ತಿಯನ್ನು, ಮೃತ ಯುವತಿಯ ತಾಯಿ ಕೊಲೆ ಮಾಡಿದ ಘಟನೆ ನಡೆದಿದೆ.


ಬೆಂಗಳೂರು (ಏ.18): ರಾಜ್ಯ ರಾಜಧಾನಿ ಬೆಂಗಳೂರಿನ ಪಾರ್ಕ್‌ನಲ್ಲಿ ಹಾಡ ಹಗಲೇ ಜೋಡಿ ಕೊಲೆಯಾಗಿದೆ. ಸುಮಾರು 45 ವರ್ಷದ ವ್ಯಕ್ತಿಗೆ ಮಕ್ಕಳಿದ್ದರೂ ಕೆಲಸಕ್ಕೆ ಬಮದ ಹುಡುಗಿಯನ್ನು ಬುಟ್ಟಿಗೆ ಹಾಕಿಕೊಂಡು ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ. ನಾನು ಬೇರೆ ಮದುವೆಯಾಗಿ ಜೀವನ ಕಟ್ಟಿಕೊಳ್ತೇನೆ ನಿನ್ನ ಅನೈತಿಕ ಸಂಬಂಧ ಬೇಡವೆಂದು ಹೇಳಿದ ಪ್ರೇಯಸಿಗೆ ಅಂಕಲ್ ಚಾಕು ಚುಚ್ಚಿ ಕೊಲೆ ಮಾಡಿದ್ದಾನೆ. ಇದನ್ನು ನೋಡಿದ ಯುವತಿಯ ತಾಯಿ ಅಂಕಲ್ ತಲೆ ಮೇಲೆ ಸಿಮೆಂಟ್ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿದ್ದಾಳೆ.

ಬೆಂಗಳೂರಿನ ಜೆ.ಪಿ.ನಗರದ ಸಾರಕ್ಕಿ ಮಾರ್ಕೇಟ್ ಬಳಿಯ ಪಾರ್ಕ್ ನಲ್ಲಿ ಹಾಡ ಹಗಲೇ ಜೋಡಿ ಕೊಲೆ ನಡೆದಿದೆ. ಕೊಲೆಯಾದವರನ್ನು ಸುರೇಶ್ (46) ಹಾಗೂ ಅನುಷಾ (25) ಎಂದು ಗುರುತಿಸಲಾಗಿದೆ. ಕೊಲೆಯಾದ ಸುರೇಶ್ ಗೋರಗುಂಟೆಪಾಳ್ಯ ನಿವಾಸಿ ಆಗಿದ್ದಾನೆ. ಇನ್ನು ಅನುಷಾ ಜೆ.ಪಿ.ನಗರ ಬಳಿಯ ಶಾಂಕಾಬಾರಿ ನಗರ ನಿವಾಸಿ ಆಗಿದ್ದಾಳೆ. ಇದು ಅನೈತಿಕ ಸಂಬಂಧದ ವಿಚಾರವಾಗಿ ನಡೆದ ಕೊಲೆ ಘಟನೆಯಾಗಿದೆ. ಸದ್ಯಕ್ಕೆ ಕೊಲೆ ಮಾಡಿದ ಹಂತಕಿಯನ್ನು ಪೊಲೀಸರು ಬಂಧಿಸಿ, ಘಟನೆ ಬಗ್ಗೆ ವಿಚಾರವನ್ನು ಬಾಯಿ ಬಿಡಿಸಿದ್ದಾರೆ.

Tap to resize

Latest Videos

ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಮಗಳು ಲವ್ ಜಿಹಾದ್‌ಗೆ ಬಲಿ? 9 ಬಾರಿ ಚಾಕು ಇರಿದ ಆರೋಪಿ ಫಯಾಜ್!

ಸುರೇಶ್ ಮತ್ತು ಅನುಷಾ ಇಬ್ಬರೂ ಹಲವಾರು ವರ್ಷಗಳಿಂದ ಪರಿಚಿತರಾಗಿದ್ದಾರೆ. ಸುರೇಶ್‌ಗೆ ಮದುವೆಯಾಗಿ ಮಕ್ಕಳೂ ಇದ್ದಾರೆ. ಆದರೆ, ಇವರಿಬ್ಬರೂ ಈ ಹಿಂದೆ ಒಂದು ಕಡೆ ಕೆಲಸ ಮಾಡುವಾಗ ಪರಿಚಯವಾಗಿತ್ತು. ನಂತರ ಪರಿಚಯ ಸ್ನೇಹವಾಗಿ ಜೊತೆಗೆ ಪ್ರೀತಿಯಾಗಿ ಮುಂದುವರೆದಿದೆ. ಅನುಷಾಳನ್ನು ಆಗಾಗ್ಗೆ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದ ಸುರೇಶ್ ಅಂಕಲ್ ಆಕೆಯನ್ನು ಬುಟ್ಟಿಗೆ ಬೀಳಿಸಿಕೊಂಡು ಅನೈತಿಕವಾಗಿ ಸಂಬಂಧವನ್ನೂ ಬೆಳೆಸಿಕೊಂಡಿದ್ದಾನೆ. ಮನೆಯಲ್ಲಿ ಮದುವೆ ಮಾಡಿಕೊಳ್ಳುವಂತೆ ಅನುಷಾಳ ತಾಯಿ ಹೇಳಿದಾಗ ಸುರೇಶನಿಗೆ ಕೇಳಿದ್ದಾಳೆ. ಆಗ ಸುರೇಶನ ಬಗ್ಗೆ ತಿಳಿದುಕೊಂಡಾಗ ಆತನಿಗೆ ಮದುವೆ ಆಗಿರುವ ವಿಚಾರ ತಿಳಿದಿದೆ. ಈ ವಿಚಾರವನ್ನು ಅನುಷಾ ಅವರ ತಾಯಿಗೆ ತಿಳಿಸಿದಾಗ ಅವರು ಮಗಳಿಗೆ ಬೈದು ಬುದ್ಧಿವಾದ ಹೇಳಿದ್ದಾರೆ. ಜೊತೆಗೆ, ನಿನಗೆ ಮದುವೆ ಮಾಡಿ ಕಳಿಸಿದರೆ ಸುಂದರ ಸಂಸಾರ ಮತ್ತು ಮಕ್ಕಳು ಎಲ್ಲವೂ ನಿನ್ನದಾಗುತ್ತದೆ. ನೀನು ಆತನ ಸಹವಾಸ ಬಿಟ್ಟುಬಿಡು ಎಂದು ತಾಯಿ ಹೇಳಿದ್ದಾಳೆ.

ಅನುಷಾ ಈ ವಿಚಾರವನ್ನು ಸುರೇಶನ ಬಳಿ ಹೇಳಿದ್ದಾಳೆ. ಇದರಿಂದ ತೀವ್ರ ಕೋಪಗೊಂಡ ಸುರೇಶ್ ನಾನು ನಿನಗೇನು ಕಡಿಮೆ ಮಾಡಿದ್ದೇನೆ. ನೀನು ನನಗೆ ಬೇಕು, ನನ್ನನ್ನು ಬಿಟ್ಟು ಹೋಗಬೇಡ ಎಂದು ಹೇಳಿದ್ದಾನೆ. ಆದರೂ ಮಾತು ಕೇಳದ ಅನುಷಾ ತಮ್ಮ ನಡುವಿದ್ದ ಅನೈತಿಕ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಾಳೆ. ನಿನಗೆ ಮದುವೆ ಆಗಿದ್ದು ಸಂಸಾರವೂ ಇದೆ. ಹೀಗಾಗಿ,  ನನ್ನೊಂದಿಗೆ ಇರುವುದು ಬೇಡವೆಂದಿದ್ದ ಅನುಷಾಳನ್ನು ಆತ ಬಿಡಲು ಒಪ್ಪದೇ ಪೀಡಿಸುತ್ತಿದ್ದನು.

ಅನುಷಾ ಪೊಲೀಸ್ ಠಾಣೆಗೂ ದೂರು ನೀಡಿದ್ದಳು:
ಸುರೇಶನ ಕಾಟಕಾಟ ಹೆಚ್ಚಾದಾಗ ಗುರುವಾರ ಬೆಳಗ್ಗೆ ಅನುಷಾ ಜೆಪಿ ನಗರ ಪೊಲೀಸ್ ಠಾಣೆ ಗೆ ಮಾಹಿತಿ ನೀಡಿದ್ದಳು. ಸುರೇಶ್ ಎಂಬಾತ ತನಗೆ ಪರಿಚಯ ಇದ್ದು, ತನ್ನನ್ನು ಪೀಡಿಸುತಿದ್ದಾನೆ. ಈತನಿಗೆ ವಾರ್ನ್ ಮಾಡಿ ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಳು. ಹೀಗಾಗಿ ಇಬ್ಬರನ್ನು ಕರೆದು ಸುರೇಶನಿಗೆ ಎಚ್ಚರಿಕೆಯನ್ನು ನೀಡಿದ್ದರು. ಜೊತೆಗೆ, ಇನ್ನುಮುಂದೆ ಯುವತಿಯ ತಂಟೆಗೆ ಬಾರದಂತೆ ಪೊಲೀಸರು ಎಚ್ಚರಿಕೆ ನೀಡಿ, ಆತನಿಂದ ಮುಚ್ಚಳಿಕೆ ಪತ್ರವನ್ನೂ ಬರೆಸಿಕೊಂಡಿದ್ದರು.

ಬೆಂಗಳೂರು: ಜೈ ಶ್ರೀರಾಮ ಘೋಷಣೆ ಕೂಗಿದ ಹಿಂದೂ ಯುವಕರ ಮೇಲೆ ಮುಸ್ಲಿಮರಿಂದ ಹಲ್ಲೆ!

ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯ ನಂತರ ಸುರೇಶ್, ನಾವು ಕೊನೆಯದಾಗಿ ಭೇಟಿ ಮಾಡಿ ಮಾತಾಡುವ ಎಂದು ಪಕ್ಕದಲ್ಲಿಯೇ ಇದ್ದ ಸಾರಕ್ಕಿ ಬಳಿಯ ಪಾರ್ಕ್‌ ಒಂದಕ್ಕೆ ಬರಲು ಹೇಳಿದ್ದಾನೆ. ಆಗ ಅನುಷಾ ತನ್ನ ತಾಯಿ ಗೀತಾಳಿಗೆ ನೀನು ಕೂಡ ಬಾ ಫೋನ್ ಮಾಡಿ ಕರೆದಿದ್ದಾಳೆ. ತಾಯಿ ಬರುವ ಮುಂಚೆ ಉದ್ಯಾನದೊಳಗೆ ಹೋಗಿ ಸುರೇಶನೊಂದಿಗೆ ಮಾತನಾಡುವಾಗ ಆತ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ.

ಸುರೇಶ್ ಇರಿಯುತ್ತಿರುವಾಗ ಪಾರ್ಕ್ ಗೆ ಎಂಟ್ರಿ ಕೊಟ್ಟಿದ್ದ ಅನುಷಾ ತಾಯಿ ಗೀತಾ, ನನ್ನ ಮಗಳಿಗೆ ಚಾಕು ಚುಚ್ಚಬೇಡ ಬಿಡು ಬಿಡು ಎಂದು ಕೇಳಿಕೊಂಡಿದ್ದಾರೆ. ಯಾವಾಗ ಎರಡು- ಮೂರು ಬಾರಿ ಸುರೇಶ್ ಅನುಷಾಳಿಗೆ ಇರಿದಿದ್ದನೋ ಆಗ ಗೀತಾ ಕೂಡ ಪಕ್ಕದಲ್ಲಿದ್ದ ಸಿಮೆಂಟ್ ಇಟ್ಟಿಗೆಯನ್ನು ತೆಗೆದುಕೊಂಡು ಸುರೇಶ್ ತಲೆ ಮೇಲೆ ಹಾಕಿದ್ದಾರೆ. ನಂತರ ಸುರೇಶ್ ಮತ್ತು ಅನುಷಾ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ನಂತರ ಅಲ್ಲಿಯೇ ಇದ್ದ ಮೃತ ಯುವತಿ ಅನುಷಾಳ ತಾಯಿಯನ್ನು ವಶಕ್ಕೆ ಪಡೆದಿದ್ದಾರೆ.

click me!