ಪ್ರೀತಿ ನಿರಾಕರಿಸಿದಳೆಂದು ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಯ ಕುತ್ತಿಗೆ ಮನಬಂದಂತೆ ಚಾಕು ಇರಿದು ಹತ್ಯೆ ಮಾಡಿದ ದುರ್ಘಟನೆಕ ಹುಬ್ಬಳ್ಳಿ ಬಿವಿಬಿ ಕ್ಯಾಂಪಸ್‌ನಲ್ಲಿ ನಡೆದಿದೆ.
ಹುಬ್ಬಳ್ಳಿ (ಏ.18): ಪ್ರೀತಿ ನಿರಾಕರಿಸಿದಳೆಂದು ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಯ ಕುತ್ತಿಗೆ ಮನಬಂದಂತೆ ಚಾಕು ಇರಿದು ಹತ್ಯೆ ಮಾಡಿದ ದುರ್ಘಟನೆಕ ಹುಬ್ಬಳ್ಳಿ ಬಿವಿಬಿ ಕ್ಯಾಂಪಸ್‌ನಲ್ಲಿ ನಡೆದಿದೆ.ನೇಹಾ ಹಿರೇಮಠ, ಹತ್ಯೆಯಾದ ಯುವತಿ. ಫಯಾಜ್ ಹತ್ಯೆ ಮಾಡಿದ ಆರೋಪಿ. ಫಯಾಜ್ ಮೂಲತಃ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿ. ತಂದೆ ಬಾಬಾ ಸಾಹೇಬ್, ತಾಯಿ ಮುಮತಾಜ್ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ.
ಕಳೆದ ಆರು ತಿಂಗಳಿಂದ ಫೇಲ್ ಆಗಿ ಕಾಲೇಜ್ ಬಿಟ್ಟಿದ್ದ ಫಯಾಜ್. ಆದರೆ BCA ಕಲಿಯುವಾಗ ನೇಹಾಳ ಸಹಪಾಠಿಯಾಗಿದ್ದ. ಇಂದು ನೇಹಾ ಹಿರೇಮಠ ಕೊಲೆ ಮಾಡಲೆಂದೇ ಕಾಲೇಜ್ ಗೆ ಚಾಕು ಸಮೇತ ಬಂದಿದ್ದ ಫಯಾಜ್.ನೇಹಾ ಕುತ್ತಿಗೆಗೆ ಒಂಭತ್ತು ಬಾರಿ ಚಾಕುವಿನಿಂದ ಇರಿದಿರುವ ಪಾಪಿ. ರಕ್ತದ ಮಡುವಿನಲ್ಲಿ ಬಿದ್ದ ಯುವತಿಯನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು. ಆದರೆ ಚಿಕಿತ್ಸೆ ಪಲಿಸದೇ ಯುವತಿ ಮೃತಪಟ್ಟಿದ್ದಾಳೆ.
ಲವ್ ಜಿಹಾದ್ ಆರೋಪ
ನಗರದ ಕಾರ್ಪೊರೇಟರೊಬ್ಬರ ಮಗಳು ಎನ್ನಲಾದ ಮೃತ ಯುವತಿ ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ MCA ಓದುತ್ತಿದ್ದಳು. ಅದೇ ಕಾಲೇಜಿನಲ್ಲಿ BCA ಓದುತ್ತಿರುವ ಫಯಾಜ್. ಕಳೆದ ಕೆಲವು ದಿನಗಳಿಂದ ಪ್ರೀತಿಸುವಂತೆ ಯುವತಿಯ ಹಿಂದೆ ಬಿದ್ದಿದ್ದ ಆರೋಪಿ. ದಿನೇದಿನೆ ಪ್ರೀತಿ ವಿಚಾರಕ್ಕೆ ಹಿಂಬಾಲಿಸಿ ಕಾಡುತ್ತಿದ್ದ ಫಯಾಜ್. ಇಂದು ಕೂಡ ಫಾಲೋ ಮಾಡಿದ್ದ ಆರೋಪಿ. ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಕೇರಳ ಚರ್ಚ್‌ಗಳಲ್ಲಿ 'ದಿ ಕೇರಳ ಸ್ಟೋರಿ' ಚಿತ್ರ ಪ್ರದರ್ಶನ; ಕಾಂಗ್ರೆಸ್ ಸಿಪಿಎಂ ಕಿಡಿ
ಕಾಲೇಜ್ ಕ್ಯಾಂಪಸ್‌ನಲ್ಲಿಯೇ ಯುವತಿಯ ಕುತ್ತಿಗೆಗೆ ಒಂಭತ್ತು ಬಾರಿ ಮನಬಂದಂತೆ ಇರಿದಿರುವ ಪಾತಕಿ. ನೋಡನೋಡುತ್ತಿದ್ದಂತೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿರುವ ಯುವತಿ. ಕೊಲೆ ಮಾಡಿ ಪರಾರಿಯಾಗುತ್ತಿದ್ದ ವೇಳೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿ ಫಯಾಜ್‌ನ ವಿಚಾರಣೆ ನಡೆಸಿದ್ದಾರೆ. ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆಯಾಯ್ತೇ? ಹತ್ಯೆಗೆ ಲವ್ ಜಿಹಾದ್ ಕಾರಣವೇ? ತನಿಖೆಯ ಬಳಿಕ ಸ್ಪಷ್ಟವಾಗಿ ತಿಳಿಯಲಿದೆ.