ಮೈಸೂರಲ್ಲಿ ಈಗಮತ್ತೊಂದು ಡ್ರಗ್ಸ್‌ ಫ್ಯಾಕ್ಟರಿ ಪತ್ತೆ- ಮನೆಯಲ್ಲೇ ಡ್ರಗ್ಸ್‌ ತಯಾರಿಸುತ್ತಿದ್ದ ಜಾಲ

Kannadaprabha News   | Kannada Prabha
Published : Feb 25, 2026, 05:16 AM IST
Drug Factory

ಸಾರಾಂಶ

ಮೈಸೂರಿನಲ್ಲಿ ಮಾದಕ ವಸ್ತು ಉತ್ಪಾದನೆ, ಮಾರಾಟ ದಂಧೆಗೆ ಬ್ರೇಕ್‌ ಹಾಕುವುದಾಗಿ ಭರವಸೆ ನಡುವೆ ಮತ್ತೊಂದು ಡ್ರಗ್ಸ್‌ ಫ್ಯಾಕ್ಟರಿ ಪತ್ತೆ. ನಗರ ಹೊರವಲಯದ ಮನೆಯೊಂದರಲ್ಲಿ ನಡೆಯುತ್ತಿದ್ದ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಮಾಡಿರುವ ಮೈಸೂರು ಜಿಲ್ಲಾ ಪೊಲೀಸರು, ಈ ಜಾಲದಲ್ಲಿದ್ದ ಐವರನ್ನು ಬಂಧಿಸಿದ್ದಾರೆ.

ಮೈಸೂರು : ಮೈಸೂರಿನಲ್ಲಿ ಮಾದಕ ವಸ್ತು ಉತ್ಪಾದನೆ, ಮಾರಾಟ ದಂಧೆಗೆ ಬ್ರೇಕ್‌ ಹಾಕುವುದಾಗಿ ಸರ್ಕಾರದ ಭರವಸೆಗಳ ನಡುವೆಯೇ, ನಗರದಲ್ಲಿ ಮತ್ತೊಂದು ಡ್ರಗ್ಸ್‌ ಫ್ಯಾಕ್ಟರಿ ಪತ್ತೆಯಾಗಿದೆ. ನಗರ ಹೊರವಲಯದ ಮನೆಯೊಂದರಲ್ಲಿ ನಡೆಯುತ್ತಿದ್ದ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಮಾಡಿರುವ ಮೈಸೂರು ಜಿಲ್ಲಾ ಪೊಲೀಸರು, ಈ ಜಾಲದಲ್ಲಿದ್ದ ಗುಜರಾತ್‌ ಮೂಲದ ಐವರನ್ನು ಬಂಧಿಸಿದ್ದಾರೆ.

ಈ ಜಾಲದಲ್ಲಿರುವ ಇನ್ನೂ ಹೆಚ್ಚಿನ ಮಂದಿಯ ಬಂಧನಕ್ಕೆ ಶೋಧ

ಈ ಜಾಲದಲ್ಲಿರುವ ಇನ್ನೂ ಹೆಚ್ಚಿನ ಮಂದಿಯ ಬಂಧನಕ್ಕೆ ಜಿಲ್ಲಾ ಪೊಲೀಸರು ಗುಜರಾತಿನಲ್ಲಿ ಶೋಧ ಮುಂದುವರಿಸಿದ್ದಾರೆ. ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿನ ಫ್ಯಾಕ್ಟರಿಯಲ್ಲಿ ಡ್ರಗ್ಸ್ ತಯಾರಿಕೆ ಪತ್ತೆಯಾಗುತ್ತಿದ್ದಂತೆ ಅಲರ್ಟ್ ಆಗಿದ್ದ ಜಿಲ್ಲಾ ಪೊಲೀಸರು, ಕಳೆದ ಜ.28 ರಂದು ಮೈಸೂರು ತಾಲೂಕು ಯಾಂದಳ್ಳಿಯಲ್ಲಿನ ಮನೆಯೊಂದರಲ್ಲಿ ಡ್ರಗ್ಸ್ ತಯಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದರು.

ಹಲವು ರಾಸಾಯನಿಕ ವಸ್ತುಗಳು ಪತ್ತೆ

ದಾಳಿ ವೇಳೆ ಆ ಮನೆಯಲ್ಲಿ ಹಲವು ರಾಸಾಯನಿಕ ವಸ್ತುಗಳು ಹಾಗೂ 10 ಬ್ಯಾರಲ್ ರಾಸಾಯನಿಕ ದ್ರವ್ಯ ಪತ್ತೆಯಾಗಿತ್ತು. ಇದು ಡ್ರಗ್ಸ್ ಎಂಬ ಅಂತಿಮ ತೀರ್ಮಾನ ಕೈಗೊಳ್ಳದ ಪೊಲೀಸರು, ಅಲ್ಲಿ ದೊರೆತ ರಾಸಾಯನಿಕ ವಸ್ತುಗಳು ಮತ್ತು ದ್ರವ್ಯಗಳ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಎಫ್ಎಸ್‌ಎಲ್ ವರದಿ ಈಗ ಪೊಲೀಸರ ಕೈ ಸೇರಿದ್ದು, ಮನೆಯಲ್ಲಿ ದೊರೆತ ರಾಸಾಯನಿಕ ವಸ್ತುಗಳು ಡ್ರಗ್ಸ್ ಎಂದು ಪ್ರಯೋಗಾಲಯದ ವರದಿ ಖಚಿತಪಡಿಸಿದೆ. ಆ ಮನೆಯಲ್ಲಿ ದೊರೆತ 1 ಕೇಜಿ ತೂಕದ ಮಾದಕ ವಸ್ತು ಹಾಗೂ ಡ್ರಗ್ಸ್ ತಯಾರಿಕೆಗೆ ಅವಶ್ಯವಿರುವ ಕಚ್ಚಾ ರಾಸಾಯನಿಕ ಡ್ರಗ್ಸ್ ತಯಾರಿಗೆ ಬಳಸುವ ವಸ್ತುಗಳು ಎಂಬುದು ಧೃಡಪಟ್ಟಿದೆ.

ಕಳೆದ ಜ.28ರಂದು ಮೈಸೂರಿನ ಕೈಗಾರಿಕಾ ಪ್ರದೇಶದ ಮನೆ ಮೇಲೆ ಪೊಲೀಸರ ದಾಳಿ

ಮನೆಯಲ್ಲಿ ಭಾರೀ ಪ್ರಮಾಣದ ರಾಸಾಯನಿಕ ಪತ್ತೆ. ಇದನ್ನು ತಪಾಸಣೆಗೆ ಕಳಿಸಿದ್ದ ಪೊಲೀಸರು

ಈಗ ಎಫ್‌ಎಸ್‌ಎಲ್‌ ವರದಿ ಆಗಮನ. ಅದರಲ್ಲಿ ಮನೆಯಲ್ಲಿ ಪತ್ತೆಯಾಗಿದ್ದು ಡ್ರಗ್ಸ್‌ ಎಂದು ಸಾಬೀತು

ಈ ಹಿನ್ನೆಲೆಯಲ್ಲಿ ದಂಧೆ ನಡೆಸುತ್ತಿದ್ದ ಗುಜರಾತ್‌ ಮೂಲದ ಐವರ ಬಂಧಿಸಿದ ಮೈಸೂರು ಪೊಲೀಸರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru Crime: ಕೈಮುಗಿದ್ರೂ ಬಿಡಲಿಲ್ಲ.. ತಲೆಗೆ ಹೊಡೆದು ಮದ್ಯ ಸುರಿದು ವಿಕೃತಿ! ಏನಾಗ್ತಿದೆ ರಾಜ್ಯದಲ್ಲಿ?
Bangalore: ಆನೇಕಲ್‌ನಲ್ಲಿ ಹದಗೆಟ್ಟ ರಸ್ತೆ, ಸ್ಕೂಟರ್ ಪಲ್ಟಿ, ಜಸ್ಟ್ ಮಿಸ್ ಆದ ಶಾಲಾ ಮಕ್ಕಳು! ಇದೇನಾ ಬ್ರಾಂಡ್ ಬೆಂಗಳೂರು?