Latest Videos

ನಟ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲು, ಕೊಲೆ ಬೆದರಿಕೆ ಕೇಸ್‌ಗೆ ಮರು ಜೀವ!

By Suvarna NewsFirst Published Jun 14, 2024, 3:41 PM IST
Highlights

ನಟ ದರ್ಶನ್ ವಿರುದ್ಧದ ಮತ್ತೊಂದು ಕೊಲೆ ಬೆದರಿಕೆ ಕೇಸ್‌ ಮರುಜೀವ ಪಡೆಯುವ ಸಾಧ್ಯತೆ ಇದೆ.  ಭರತ್ ಎಂಬುವವರಿಂದ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು (ಜೂ.14): ಬೆಂಗಳೂರಿನಲ್ಲಿ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ಮುಂದುವರೆದಂತೆ ದರ್ಶನ್ ಮತ್ತು ಗ್ಯಾಂಗ್ ನ ಕರಾಳ ಮುಖ ಒಂದೊಂದೇ  ಬಯಲಾಗುತ್ತಿದೆ.  ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಡೀಲ್ ಮಾಡಲಾಗಿದ್ದ 30 ಲಕ್ಷ ಹಣವನ್ನು ಸೀಜ್ ಮಾಡಲಾಗಿದೆ. ದರ್ಶನ್ ಆಪ್ತನೊಬ್ಬನ‌ ಮನೆಯಲ್ಲಿದ್ದ ಹಣವನ್ನು ಜಪ್ತಿ ಮಾಡಲಾಗಿದ್ದು, ಮೃತದೇಹ ಸಾಗಾಟ ಮಾಡಿ ಹಣ ಹಂಚಿಕೊಳ್ಳಲು ಪ್ಲಾನ್ ಮಾಡಲಾಗಿತ್ತು. ದರ್ಶನ್ ಕೊಟ್ಟಿದ್ದ ಮೂವತ್ತು ಲಕ್ಷ ಹಣವನ್ನ ಆಪ್ತನೊಬ್ಬನ ಮನೆಯಲ್ಲಿಡಲಾಗಿತ್ತು. ಆರೋಪಿಗಳು ಹಣದ ಬಗ್ಗೆ ಬಾಯ್ಬಿಟ್ಟಿದ್ದು, ಈಗ ಹಣ ಸೀಜ್ ಮಾಡಿ ತನಿಖೆ ನಡೆಸಲಾಗುತ್ತಿದೆ.

ನಟ ದರ್ಶನ್ ವಿರುದ್ಧದ ಮತ್ತೊಂದು ಕೊಲೆ ಬೆದರಿಕೆ ಕೇಸ್‌ ಮರುಜೀವ ಪಡೆಯುವ ಸಾಧ್ಯತೆ ಇದೆ.  ಭರತ್ ಎಂಬುವವರಿಂದ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಭೂಮಿ ಮೇಲೆ ಇಲ್ಲದ ರೀತಿಯೇ ಮಾಡ್ತಿನಿ ಎಂದು ದರ್ಶನ್ ಬೆದರಿಕೆ ಹಾಕಿದ್ದ ಎಂದು ದೂರು ದಾಖಲಾಗಿದೆ.

ನಾನು ಲಿಂಗಾಯತ, ವೆಜಿಟೇರಿಯನ್‌... ಎಂದಿದ್ದ ರೇಣುಕಾಸ್ವಾಮಿ ಬಾಯಿಗೆ ಚಿಕನ್‌ ಪೀಸ್‌ ತುರುಕಿದ್ದ ದರ್ಶನ್‌!

ಶ್ರೀಕೃಷ್ಣ ಪರಮಾತ್ಮ ಎಂಬ ಸಿನಿಮಾ ನಿರ್ಮಾಣ ಮಾಡುತ್ತಿದ್ದ ಭರತ್ ವೇಳೆ ಶೂಟಿಂಗ್ ಸಂದರ್ಭದಲ್ಲಿ ಭೇಟಿ ಮಾಡಲು ಹೋದಾಗ  ನನ್ನನ್ನು ಗೊಡೌನ್ ಒಂದರಲ್ಲಿ ಕೂಡಿಹಾಕಲಾಗಿತ್ತು. ಆಗ ದರ್ಶನ್ ಮತ್ತು ಅವರ ಪಟಾಲಂ ನನಗೆ ಜೀವ ಬೆದರಿಕೆ ಹಾಕಿದ್ರು. ರೇಣುಕಾಸ್ವಾಮಿ ಗೆ ಆದ ರೀತಿ ನನಗೂ ಕೂಡಿ ಹಾಕಿ ಹೆದರಿಸುವ ಪ್ರಯತ್ನ ಆಗಿತ್ತು. ಅದೃಷ್ಟವಶಾತ್ ಅವತ್ತು ನನ್ನ ಮೇಲೆ ಹಲ್ಲೆ ಆಗದೆ ತಪ್ಪಿಸಿಕೊಂಡು ಬಂದಿದ್ದೆ.

ದರ್ಶನ್ ಮತ್ತು ಎರಡನೇ ಪತ್ನಿ ಪವಿತ್ರಾ ವಯಸ್ಸಿನ ಅಂತರ 14 ವರ್ಷ! ಮೊದಲ ಭೇಟಿ ಎಲ್ಲಿ?

2022 ರಲ್ಲಿ ದೂರು ಕೊಡಲಾಗಿತ್ತು, ಆಗ ದರ್ಶನ್ ವಿಚಾರಣೆ ಮಾಡಿರಲಿಲ್ಲ. ನನ್ನ ಹಳೆಯ ಆಡಿಯೋ ಒಂದು ಈಗ ಮತ್ತೆ ವೈರಲ್ ಆಗ್ತಿದೆ. ಈ ಕಾರಣಕ್ಕೆ ದರ್ಶನ್ ಫ್ಯಾನ್ಸ್ ಅಂತ ಹೇಳಿಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಹಳೆಯ ಕೇಸ್ ಮತ್ತೆ ತನಿಖೆ ಆಗಬೇಕು. ಜೊತೆಗೆ ತಮ್ಮ ಕುಟುಂಬಕ್ಕೆ ರಕ್ಷಣೆ ಬೇಕೆಂದು ಇಂದು ಮತ್ತೆ ದೂರು ನೀಡಿದ್ದಾರೆ.

click me!