ಐಡಿ ಕಾರ್ಡ್ ಕೇಳಿದ ಭದ್ರತಾ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ವ್ಯಕ್ತಿ

By Anusha KbFirst Published Oct 16, 2022, 11:18 AM IST
Highlights

ಕೆಲ ದಿನಗಳ ಹಿಂದಷ್ಟೇ ಉತ್ತರಪ್ರದೇಶದ ನೋಯ್ಡಾದಲ್ಲಿ ಕುಡಿದು ಬಂದ ಮಹಿಳೆಯೊಬ್ಬಳು ಸೆಕ್ಯೂರಿಟಿ ಗಾರ್ಡ್ ಜೊತೆ ಅಸಭ್ಯವಾಗಿ ವರ್ತಿಸಿ ಹಲ್ಲೆಗೆ ಮುಂದಾಗಿದ್ದಳು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿ ಸಾಕಷ್ಟು ಅಕ್ರೋಶಕ್ಕೆ ಗುರಿ ಆಗಿತ್ತು. ಈ ಘಟನೆ ಮಾಸುವ ಮುನ್ನವೇ ಈಗ ಅಂತಹದ್ದೇ ಮತ್ತೊಂದು ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ.

ಉತ್ತರಪ್ರದೇಶ: ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳು ಸೆಕ್ಯೂರಿಟಿ ಗಾರ್ಡ್‌ಗಳ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಉತ್ತರಪ್ರದೇಶದ ನೋಯ್ಡಾದಲ್ಲಿ ಕುಡಿದು ಬಂದ ಮಹಿಳೆಯೊಬ್ಬಳು ಸೆಕ್ಯೂರಿಟಿ ಗಾರ್ಡ್ ಜೊತೆ ಅಸಭ್ಯವಾಗಿ ವರ್ತಿಸಿ ಹಲ್ಲೆಗೆ ಮುಂದಾಗಿದ್ದಳು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿ ಸಾಕಷ್ಟು ಅಕ್ರೋಶಕ್ಕೆ ಗುರಿ ಆಗಿತ್ತು. ಈ ಘಟನೆ ಮಾಸುವ ಮುನ್ನವೇ ಈಗ ಅಂತಹದ್ದೇ ಮತ್ತೊಂದು ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ.

ಗಾಜಿಯಾಬಾದ್‌ನ (Ghaziabad) ಅಪಾರ್ಟ್‌ಮೆಂಟ್ ನಿವಾಸಿಯೊಬ್ಬ ಐಡಿ ಕಾರ್ಡ್‌ ಕೇಳಿದ ಕಾರಣಕ್ಕೆ ಸೆಕ್ಯೂರಿಟಿ ಗಾರ್ಡ್‌ಗೆ (Security Guard) ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು ಜನ ಈ ವ್ಯಕ್ತಿಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೆಕ್ಯೂರಿಟಿ ಗಾರ್ಡ್ ಪೊಲೀಸರಿಗೂ ದೂರು ನೀಡಿದ್ದು, ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಬಾಗಿಲು ತಳ್ಳಿ ಒಳಗೆ ಬಂದ ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ನಂತರ ಸೆಕ್ಯೂರಿಟಿ ಗಾರ್ಡ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈತನ ಜೊತೆ ಈತನ ಪತ್ನಿಯೂ ಇದ್ದು, ಆಕೆ ಹಲ್ಲೆ ತಡೆಯುವ ಯತ್ನ ಮಾಡುತ್ತಾಳೆ. ಆದರೂ ಸುಮ್ಮನಿರದ ಈತ ಸೆಕ್ಯೂರಿಟಿ ಗಾರ್ಡ್ ಮುಖ ಮೂತಿ ನೋಡದೇ ಗುದ್ದಿದ್ದಾನೆ. 

Young man thrashed security guard at the gate of Windsor Paradise Society of Raj Nagar Extension in . Incident is of October 10 and Police registered a case against the person on the complaint of the security guard. pic.twitter.com/v5hMOWDHBA

— Nikhil Choudhary (@NikhilCh_)

ಗುರುತಿನ ಚೀಟಿ ಕೇಳಿದ್ದಕ್ಕೆ ಆತ ಈ ಕೃತ್ಯವೆಸಗಿದ್ದಾನೆ ಎಂದು ಕೆಲ ವರದಿಗಳು ಹೇಳಿವೆ. ಈ ಬಗ್ಗೆ ಗಾಜಿಯಾಬಾದ್ ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ, ಹಲ್ಲೆ ಮಾಡಿದಾತನ ಕುಟುಂಬ ಇತ್ತೀಚೆಗಷ್ಟೇ ರಾಜ್ನಾನಗರದಲ್ಲಿರುವ (Rajnagar) ವಿಂಡ್ಸರ್ ಪ್ಯಾರಾಡೈಸ್ ಸೊಸೈಟಿಯಿಂದ (Windsor Paradise Society) ನಿರ್ಮಾಣವಾದ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಹೊರಗಡೆ ಹೋಗಿದ್ದ ಈ ದಂಪತಿ ವಾಪಸ್ ಅಪಾರ್ಟ್‌ಮೆಂಟ್‌ಗೆ ಬರುತ್ತಿರಬೇಕಾದರೆ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ಗೆ ಇವರ ಗುರುತು ತಿಳಿಯದಾಗಿದ್ದು, ಆತ ಎಲ್ಲಿಂದ ಬಂದಿರುವುದು ತಾವು, ಐಡಿ ಕಾರ್ಡ್‌ (identification proof) ತೋರಿಸಿ ಎಂದು ಕೇಳಿದ್ದಾನೆ.

 ನಾಯಿಯನ್ನು ಓಡಿಸಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್ ಮೇಲೆ ಮಹಿಳೆಯ ಹಲ್ಲೆ: ವಿಡಿಯೋ ವೈರಲ್

ಇದು ಆ ವ್ಯಕ್ತಿಯ ಪಿತ್ತ ನೆತ್ತಿಗೇರುವಂತೆ ಮಾಡಿದ್ದು, ಸೆಕ್ಯೂರಿಟಿ ಗಾರ್ಡ್‌ ಮೇಲೆ ತನ್ನೆಲ್ಲಾ ಪ್ರತಾಪವನ್ನು ತೋರಿಸಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಕೂಡ ತನ್ನ ಪ್ರಾಣ ರಕ್ಷಣೆಗಾಗಿ ತಿರುಗಿಸಿ ಹೊಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ ಇಡೀ ದೃಶ್ಯ ಅಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಸೆಕ್ಯೂರಿಟಿ ಗಾರ್ಡ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಸಿಸಿ ಟಿವಿ (CCTV) ದೃಶ್ಯಾವಳಿ ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇವರು ಮನುಷ್ಯರಲ್ಲ ರಾಕ್ಷಸರು: ಗರ್ಭಿಣಿ ಮಹಿಳೆಗೆ ಒದ್ದ ಪಾಕಿಸ್ತಾನಿ ಸೆಕ್ಯೂರಿಟಿ ಗಾರ್ಡ್‌

ಟ್ವಿಟ್ಟರ್‌ನಲ್ಲಿ ನಿಖಿಲ್ ಚೌಧರಿ ಎಂಬುವರು 35 ಸೆಕೆಂಡ್‌ಗಳ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆಕ್ಟೋಬರ್ 10 ರಂದು ಈ ಘಟನೆ ನಡೆದಿದ್ದು, ಈಗ ಕೇಸು ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

click me!