
ಆನಂದ್ ಎಂ. ಸೌದಿ
ಯಾದಗಿರಿ(ಏ.17): 545 ಪಿಎಸೈ ನೇಮಕ ಪರೀಕ್ಷೆಯಲ್ಲಿ ಅಕ್ರಮ(PSI Scam) ಆರೋಪಗಳ ಕುರಿತ ಸಿಐಡಿ(CID) ತನಿಖೆ ಚುರುಕುಗೊಂಡಿದೆ. ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ ಮೂವರು ಅಭ್ಯರ್ಥಿಗಳು ಹಾಗೂ ಪರೀಕ್ಷಾ ಕೇಂದ್ರದ ಮೂವರು ಮೇಲ್ವಿಚಾರಕರು ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಿ, ಶನಿವಾರ ಕಲಬುರಗಿಯ(Kalaburagi) ಜೆಎಂಎಫ್‌ಸಿ ಕೋರ್ಟಿಗೆ ಹಾಜರುಪಡಿಸಿದ್ದಾರೆ.
ರಾಯಚೂರು ಮೂಲದ ಕೆ.ಪ್ರವೀಣ ಕುಮಾರ್, ಕಲಬುರಗಿ ಜಿಲ್ಲೆ ಆಳಂದ ನಿವಾಸಿ ಎನ್.ಚೇತನ್ ಹಾಗೂ ಕಲಬುರಗಿ ನಗರದ ಹಾಲ್ ಸುಲ್ತಾನಪುರ ಪ್ರದೇಶದ ಅರುಣ ಪಾಟೀಲ್ ಅಭ್ಯರ್ಥಿಗಳಾದರೆ, ಜ್ಞಾನಜ್ಯೋತಿ ಇಂಗ್ಲೀಷ್ ಮೀಡಿಯಂ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ್ದ ಸುಮಾ, ಸಿದ್ಧಮ್ಮ ಹಾಗೂ ಸಾವಿತ್ರಿ ಎನ್ನುವವರನ್ನು ಪೊಲೀಸರು(Police) ಬಂಧಿಸಿ(Arrest), ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. ಬಂಧಿತ ಮೂವರು ಅಭ್ಯರ್ಥಿಗಳಲ್ಲೊಬ್ಬ ಕಲ್ಯಾಣ ಕರ್ನಾಟಕ ಜಿಲ್ಲೆಯೊಂದರ ಕಾರಾಗೃಹದ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.
PSI Recruitment Scam: ನೊಂದ ಅಭ್ಯರ್ಥಿಗಳಿಂದ ಕಾನೂನು ಸಮರಕ್ಕೆ ಸಿದ್ಧತೆ
ಈ ಪ್ರಕರಣದಲ್ಲಿ, ಮೊದಲು ಬಂಧಿಸಲಾಗಿದ್ದ ವೀರೇಶ್ ಸೇರಿದಂತೆ ಈವರೆಗೆ 7 ಜನರನ್ನು ಸಿಐಡಿ ಪೊಲೀಸರು(CID Police) ಬಂಧಿಸಿದಂತಾಗಿದೆ. ಸಿಐಡಿ ತನಿಖೆ(Investigation) ವಿಸ್ತಾರಗೊಳ್ಳುತ್ತಿದ್ದಂತೆ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಕೆಲವರು ನಾಪತ್ತೆಯಾಗಿದ್ದಾರೆ. ಆರ್ಟಿಐ ಕಾರ್ಯಕರ್ತನೊಬ್ಬನ ಚಲನವಲನಗಳ ಮೇಲೂ ಪೊಲೀಸರು ನಿಗಾ ಇಟ್ಟಿದ್ದಾರೆ.
ಇನ್ನು ಯಾದಗಿರಿಯ(Yadgir) ವ್ಯಕ್ತಿಯೊಬ್ಬನ ವಿಚಾರಣೆಗೆಂದು ಆತನ ಗ್ರಾಮಕ್ಕೆ ತೆರಳಿದ್ದ ತನಿಖಾ ತಂಡ ಮಾಹಿತಿಗಳ ಜಾಲಾಡಿ ಬಂದಿದೆ. ಕೊನೆಗೆ, ಫೋನ್ ಮೂಲಕ ಸಂಪರ್ಕಕ್ಕೆ ಬಂದಿದ್ದ ಆತ, ಮರುದಿನವೇ ಎಲ್ಲ ದಾಖಲೆಗಳನ್ನು ನೀಡುವುದಾಗಿ ಹೇಳಿದ್ದನಾದರೂ, ಇದೀಗ ಸಂಪರ್ಕಕ್ಕೆ ಸಿಗದಿರುವುದು ಮತ್ತಷ್ಟೂ ಅನುಮಾನಗಳಿಗೆ ಕಾರಣವಾಗಿದೆ. ಅನುಮಾನಾಸ್ಪದ ನಡವಳಿಕೆಗಳಿಂದಾಗಿ ಆತನೂ ಅಕ್ರಮದಲ್ಲಿ ಶಾಮೀಲಾಗಿರಬಹುದು ಎಂಬ ಶಂಕೆಯಿದೆ ಎಂದು ‘ಕನ್ನಡಪ್ರಭ’ಕ್ಕೆ ಖಾಕಿಪಡೆಯ ನಂಬಲರ್ಹ ಮೂಲಗಳು ತಿಳಿಸಿವೆ.
PSI ನೇಮಕಾತಿ ಅಕ್ರಮ: ತನಿಖೆಗೆ ಮುನ್ನವೇ ಎಳ್ಳು ನೀರು ಬಿಟ್ರಾ ಗೃಹ ಸಚಿವ ಜ್ಞಾನೇಂದ್ರ?
545 ಪಿಎಸೈ ನೇಮಕಾತಿ(PSI Recruitment) ಪರೀಕ್ಷೆಯಲ್ಲಿನ ಅಕ್ರಮ ಆರೋಪಗಳಿಗೆ ಸಂಬಂಧಿಸಿದಂತೆ, ನೊಂದ ಅಭ್ಯರ್ಥಿಗಳು(Candidates) ನೀಡಿದ ದಾಖಲೆಗಳ ದೂರಿನ ಆಧಾರದ ಮೇಲೆ ಸಮಿತಿ ರಚಿಸಿ ತನಿಖೆ ನಡೆಸಲು ಹಿಂದೇಟು ಹಾಕುತ್ತಿರುವಂತಿರುವ ಗೃಹ ಇಲಾಖೆ, ಅದ್ಯಾವುದೋ ಒತ್ತಡಕ್ಕೆ ಮಣಿದಂತಿದ್ದು ನೂರಾರು ಕೋಟ್ಯಂತರ ರುಪಾಯಿಗಳ ಹಗರಣಕ್ಕೆ ತೇಪೆ ಸಾರಿಸಿ, ಎಳ್ಳು ನೀರು ಬಿಡುವ ತಯ್ಯಾರಿಯಲ್ಲಿದ್ದಂತಿದೆ.
ಜ.19ರಂದು ಬಿಡುಗಡೆಯಾದ, 545 ಪಿಎಸೈ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿ ವಿಚಾರಕ್ಕೆ ಸಂಬಂಧಿಸಿದಂತೆ, ಮೂಡಿಬಂದ ಅನೇಕ ಆರೋಪಗಳಿಗೆ ಉತ್ತರಿಸಬೇಕಾದ ಗೃಹ ಸಚಿವ ಅರಗ ಜ್ಞಾನೇಂದ್ರ(Araga Jnanendra), ಈ ಕುರಿತು ಕೇಳಿಬರುತ್ತಿರುವ ಆರೋಪಗಳೆಲ್ಲವೂ ಸುಳ್ಳು ಎಂದು ತನಿಖೆ(Investigation) ನಡೆಸದೇ ತೇಪೆ ಸಾರಿಸುತ್ತಿರುವುದು ಸಾಕಷ್ಟು ಅನುಮಾನಗಳ ಮೂಡಿಸಿದೆ.
PSI ನೇಮಕಾತಿ ಆದೇಶಕ್ಕೆ ತಾತ್ಕಾಲಿಕ ತಡೆ
ಈ ಹಿಂದೆ, ಪರಿಷತ್ತಿನಲ್ಲಿ ಈ ಬಗ್ಗೆ ಸದಸ್ಯರುಗಳಿಗೆ ಭಿನ್ನ ಉತ್ತರಗಳ ನೀಡಿ, ಪ್ರಕರಣವನ್ನು ಮರೆಮಾಚುವ ಯತ್ನ ನಡೆಸಿದಂತಿದ್ದ ಗೃಹ ಸಚಿವರು, ನೊಂದ ಅಭ್ಯರ್ಥಿಗಳ ದೂರುಗಳ ಪ್ರಾಮಾಣಿಕವಾಗಿ ಆಲಿಸುವ ಬದಲು, ಆಯ್ಕೆಯಾಗದ ಅಭ್ಯರ್ಥಿಗಳು ‘ಅಸಹನೆಯಿಂದ’ ಹೀಗೆ ಆರೋಪಿಸುತ್ತಾರೆ ಎಂದು ಷರಾ ಬರೆದಿಟ್ಟು, ಹತ್ತು ಹಲವಾರು ಅನುಮಾನಗಳು ಹಾಗೂ ಆರೋಪಗಳಿಗೆ ಗುರಿಯಾಗಿದ್ದ ನೇಮಕಾತಿ ಪಟ್ಟಿಯನ್ನು ಸಮರ್ಥಿಸಿಕೊಂಡು, ಕಲ್ಯಾಣ ಕರ್ನಾಟಕ ಮೀಸಲಾತಿ (ಕಲಂ 371 ಜೆ) ಅನ್ವಯ ಪಟ್ಟಿಯನ್ನು ತಡೆಹಿಡಿಯಲಾಗಿದ್ದು, ಸಮಿತಿ ರಚಿಸಲಾಗಿದೆ ಎಂದು ತಿಳಿಸಿದ್ದರು.
ಪರಿಷತ್ ಸದಸ್ಯರುಗಳಾದ ಅರವಿಂದ ಅರಳಿ, ಶಶಿಲ್ ನಮೋಶಿ, ಮರಿ ತಿಬ್ಬೇಗೌಡರು ಸೇರಿದಂತೆ ಅನೇಕರು ಈ ಬಗ್ಗೆ ಪ್ರಶ್ನಿಸಿದ್ದರು. ಈಗ ಪರಿಷತ್ ಸದಸ್ಯ ಯು. ಬಿ. ವೆಂಕಟೇಶ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆ (ಸಂಖ್ಯೆ 2543)ಗೆ ಗೃಹ ಸಚಿವರು, ದೂರುಗಳು ಬಂದಿದ್ದವಾದರೂ, ಯಾವುದೇ ಅಕ್ರಮ ನಡೆದಿಲ್ಲ ಎಂದು ಉತ್ತರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ