ಖಿಚಡಿಗೆ ಉಪ್ಪು ಹೆಚ್ಚು ಹಾಕಿದ್ದಕ್ಕೆ ಕತ್ತು ಹಿಸುಕಿ ಪತ್ನಿಯ ಕೊಲೆ

By Anusha Kb  |  First Published Apr 16, 2022, 9:28 PM IST
  • ಇದೆಂಥಾ ಕ್ರೌರ್ಯ, ಖಿಚಡಿಗೆ ಉಪ್ಪು ಹೆಚ್ಚಾಗಿದ್ದಕ್ಕೆ ಕೊಲೆ
  • ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಘಟನೆ
  • ಕತ್ತು ಹಿಸುಕಿ ಪತ್ನಿಯ ಕೊಲೆ ಮಾಡಿದ ಪತಿ

ಥಾಣೆ: ಬೆಳಗ್ಗಿನ ಉಪಾಹಾರಕ್ಕೆ ತಯಾರಿಸಿದ ಖಿಚಡಿಗೆ ಉಪ್ಪು ಹೆಚ್ಚು ಹಾಕಿದಳು ಎಂದು ಸಿಟ್ಟುಗೊಂಡ ಪತಿಯೋರ್ವ ಪತ್ನಿಯನ್ನೇ ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ (Maharashtra) ಥಾಣೆ (Thane)ಜಿಲ್ಲೆಯಲ್ಲಿ ನಡೆದಿದೆ. 46 ವರ್ಷದ ನಿಲೇಶ್ ಘಾಗ್  ತನ್ನ 40 ವರ್ಷದ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ. ಭಾಯಂದರ್ ಪೂರ್ವದ (Bhayandar East)  ಫಟಕ್ ರಸ್ತೆ (Phatak Road) ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಳಗ್ಗೆ 9.30 ರ ಸುಮಾರಿಗೆ ಉಪಹಾರ ಸೇವಿಸಿದ ಪತಿ ನಿಲೇಶ್ ಘಾಗ್ (Nilesh Ghagh) ನಂತರ ತನ್ನ ಪತ್ನಿ ನಿರ್ಮಲಾಳನ್ನು (Nirmala)ಕತ್ತು ಹಿಸುಕಿ ಕೊಂದಿದ್ದಾನೆ. ಆಕೆ ತಯಾರಿಸಿದ  'ಖಿಚಡಿ'ಯಲ್ಲಿ ಉಪ್ಪು ಹೆಚ್ಚಾಗಿದ್ದರಿಂದ ಕೋಪಗೊಂಡ ಆತ ಈ ಕೃತ್ಯವೆಸಗಿದ್ದಾನೆ. ಎಂದು ಮೀರಾ ಭಯಂದರ್-ವಸಾಯಿ ವಿರಾರ್ ಪೊಲೀಸ್ ಕಮಿಷನರೇಟ್‌ನ (Mira Bhayandar-Vasai Virar police commissionerate) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tap to resize

Latest Videos

Illicit Relationship : ಕುಡಿದ ಮತ್ತಿನಲ್ಲಿ  ಪತ್ನಿಯ  ಕುತ್ತಿಗೆಗೆ ಸೀರೆ ಸುತ್ತಿ ಕೊಲೆ! ಪಾಪಿ ಗಂಡ

ಉದ್ದನೆಯ ಬಟ್ಟೆಯಿಂದ ಪತ್ನಿಯ ಕತ್ತು ಹಿಸುಕಿ ನಿಲೇಶ್ ಘಾಗ್ ಕೊಲೆ ಮಾಡಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ದುರಂತಕ್ಕೆ ಕೇವಲ ಈ ಕಾರಣವಲ್ಲದೇ ಬೇರೇನಾದರು ಕಾರಣವಿದೆಯೇ ಎಂಬುದನ್ನು ಪೊಲೀಸರ ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ.  ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಭಾಯಂದರ್‌ನ ನವಘರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mysuru: ಮಗು ಹುಟ್ಟುವ ವೇಳೆ ಅಡ್ಡ ಬಂದ ಜಾತಿ...ಗರ್ಭಿಣಿ ಪತ್ನಿ ಕೊಲೆ

ಮಹಾರಾಷ್ಟ್ರದ (Maharastra) ಥಾಣೆಯಲ್ಲಿ (Thane) ರಾಬೋಡಿಯಲ್ಲಿ (Rabodi) ಇದೇ ರೀತಿಯ ಮತ್ತೊಂದು ಘಟನೆ ಗುರುವಾರವಷ್ಟೇ ನಡೆದಿತ್ತು. ಉಪಹಾರದ ಜೊತೆ ಚಹಾ ನೀಡದ್ದಕ್ಕೆ ಸಿಟ್ಟುಗೊಂಡ ಸಂತ್ರಸ್ತೆಯ ಮಾವ (ಗಂಡನ ಅಪ್ಪ) ಆಕೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದ.  42 ವರ್ಷದ ಮಹಿಳೆಯ ಹೊಟ್ಟೆಗೆ ಗುಂಡು ತಗುಲಿದ ಪರಿಣಾಮ ಅವರು ತೀವ್ರ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೌಟುಂಬಿಕ ಕಲಹಗಳು (Domestic violence) ಇತ್ತೀಚೆಗೆ ವಿಕೋಪಕ್ಕೆ ತಿರುಗಿ ಕೊಲೆಗಳಾಗುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪತ್ನಿ ಮೇಲೆ ಅಕ್ರಮ (Illicit Relationship) ಸಂಬಂಧ ಇರುವ ಸಂಶಯ ಪಟ್ಟುಕೊಂಡ  ಗಂಡ ದಾರುಣ ರೀತಿಯಲ್ಲಿ ಪತ್ನಿಯನ್ನು ಹತ್ಯೆ  (Murder) ಮಾಡಿದ ಘಟನೆ ಕೆಲ ದಿನಗಳ ಹಿಂದಷ್ಟೇ ಬೆಳಗಾವಿ ಜಿಲ್ಲೆಯ ರಾಯಬಾಗ (Raibag)ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದಿತ್ತು. ಕುಡಿದ ಮತ್ತಿನಲ್ಲಿ ಪತಿ ಪ್ರತಾಪ್ ಅಲಿಯಾಸ್ ಪ್ರದೀಪ ಕಾಂಬಳೆ (40 ) (Pradeep Kamble) ಪತ್ನಿ ಆಶಾ ಪ್ರದೀಪ ಕಾಂಬಳೆಯನ್ನು (Asha pradeep Kamble) ಸೀರೆಯಿಂದ ಕುತ್ತಿಗೆಗೆ ಉರುಳು ಹಾಕಿ ಉಸಿರುಗಟ್ಟಿಸಿ ಕೊಲೆ (Murder) ಮಾಡಿದ್ದ ರಾಯಬಾಗ (Raibag)ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಕೊಲೆ ಆರೋಪಿ ಕಾಂಬಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ (Police station) ಪ್ರಕರಣ ದಾಖಲಾಗಿದೆ. 

click me!