ಅಂಕಿತಾ ಭಂಡಾರಿ ವಾಟ್ಸಾಪ್ ಚಾಟ್‌ಗಳನ್ನು ತನಿಖೆ ಮಾಡುತ್ತದೆ ಎಂದು ಎಸ್‌ಐಟಿ ಇನ್‌ಚಾರ್ಜ್ ಮಾಹಿತಿ ನೀಡಿದೆ. ಇನ್ನು, ಅಂತಿಮ ಮರಣೋತ್ತರ ಪರೀಕ್ಷೆ ವರದಿ ಬರುವವರೆಗೆ ಅಂತ್ಯ ಸಂಸ್ಕಾರ ಮಾಡಲು ಯುವತಿಯ ಕುಟುಂಬ ನಿರಾಕರಿಸಿದೆ.
ಉತ್ತರಾಖಂಡದಲ್ಲಿ ಹತ್ಯೆಗೀಡಾದ 19 ವರ್ಷದ ಅಂಕಿತಾ ಭಂಡಾರಿಯ ಕುಟುಂಬವು ಮರಣೋತ್ತರ ಪರೀಕ್ಷೆಯ (Post Mortem Report) ವರದಿಯನ್ನು ನೀಡಲು ಒತ್ತಾಯಿಸಿದ್ದು, ಅಲ್ಲಿಯವರೆಗೆ ಯುವತಿಯ ಅಂತ್ಯಕ್ರಿಯೆ ಮಾಡಲು ನಿರಾಕರಿಸಿದೆ ಎಂದು ತಿಳಿದುಬಂದಿದೆ. ಇನ್ನು, ರೆಸಾರ್ಟ್ (Resort) ಧ್ವಂಸ ಕುರಿತು ಉತ್ತರಾಖಂಡ ಸರ್ಕಾರವನ್ನು ಪ್ರಶ್ನಿಸಿರುವ ಯುವತಿಯ ತಂದೆ, ‘ರೆಸಾರ್ಟ್‌ನಲ್ಲಿ ಸಾಕ್ಷ್ಯಾಧಾರಗಳಿದ್ದಾಗ ಏಕೆ ನೆಲಸಮ ಮಾಡಲಾಗಿದೆ’ ಎಂದು ಅವರು ಪ್ರಶ್ನಿಸಿದ್ದಾರೆ. ಯುವತಿಯ ಕೊಲೆಯ ಆರೋಪಿಗಳಾದ ಬಿಜೆಪಿ ಮುಖಂಡ ವಿನೋದ್ ಆರ್ಯ ಅವರ ಪುತ್ರನೂ ಆಗಿರುವ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ಅದರ ಮ್ಯಾನೇಜರ್ ಮತ್ತು ಸಹಾಯಕ ವ್ಯವಸ್ಥಾಪಕರನ್ನು ಶುಕ್ರವಾರ ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅಂಕಿತಾ ಅವರ ಮರಣೋತ್ತರ ಪರೀಕ್ಷೆಯ ವರದಿಯು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ ಎಂದು ಬಹಿರಂಗಪಡಿಸಿದೆ ಮತ್ತು ಸಾವಿನ ಮೊದಲು ದೇಹದ ಮೇಲೆ ಗಾಯಗಳು ಕಂಡುಬಂದಿವೆ ಎಂದು ವರದಿ ಹೇಳುತ್ತದೆ.
ಈ ಮಧ್ಯೆ, ಅಂಕಿತಾ ಭಂಡಾರಿ ಹತ್ಯೆ ಉತ್ತರಾಖಂಡದಲ್ಲಿ ಪ್ರತಿಭಟನೆಗೆ ಕಾರಣವಾಗುತ್ತಿದ್ದಂತೆ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆಗೆ (SIT Case) ಆದೇಶಿಸಿದ್ದಾರೆ ಮತ್ತು ಆರೋಪಿಗಳಿಗೆ 'ಕಠಿಣ ಶಿಕ್ಷೆ' ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಎಸ್‌ಐಟಿ ಅಂಕಿತಾ ಅವರ ವಾಟ್ಸಾಪ್ ಚಾಟ್‌ಗಳನ್ನು (WhatsApp Chats) ಸಹ ತನಿಖೆ ಮಾಡುತ್ತದೆ ಎಂದೂ ತಿಳಿದುಬಂದಿದೆ. ಪುಲ್ಕಿತ್ ಆರ್ಯ ಮತ್ತು ತಾನು ಕೆಲಸ ಮಾಡುತ್ತಿದ್ದ ಮ್ಯಾನೇಜರ್‌ಗಳು ಗ್ರಾಹಕರಿಗೆ 'ವಿಶೇಷ ಸೇವೆಗಳನ್ನು' ಒದಗಿಸುವಂತೆ ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಕೊಲೆಯಾದ ಯುವತಿ ಅಂಕಿತಾ ಭಂಡಾರಿ ಆಕೆಯ ಆಪ್ತ ಸ್ನೇಹಿತೆಯೊಬ್ಬರಿಗೆ ಹೇಳಿದ್ದಳು ಎಂದು ಹೇಳಲಾಗಿದೆ.
ಇದನ್ನು ಓದಿ: Ankita Bhandari Murder: ಉತ್ತರಾಖಂಡ ಸಿಎಂ ಆದೇಶದ ಮೇರೆಗೆ ಆರೋಪಿ ಬಿಜೆಪಿ ಮುಖಂಡ ಪುತ್ರನ ರೆಸಾರ್ಟ್ ಧ್ವಂಸ
We have called every employee in the resort to the police station; will take everyone's statements. We're running a full background analysis on the resort: DIG PR Devi, SIT In-charge of murder case
Ankita's WhatsApp chats that have surfaced are also being probed. pic.twitter.com/bCs2p2x598
"ರೆಸಾರ್ಟ್‌ನಲ್ಲಿರುವ ಪ್ರತಿಯೊಬ್ಬ ಉದ್ಯೋಗಿಯನ್ನು (Employee) ನಾವು ಪೊಲೀಸ್ ಠಾಣೆಗೆ ಕರೆದಿದ್ದೇವೆ; ಪ್ರತಿಯೊಬ್ಬರ ಹೇಳಿಕೆಗಳನ್ನು ತೆಗೆದುಕೊಳ್ಳುತ್ತೇವೆ. ನಾವು ರೆಸಾರ್ಟ್‌ನಲ್ಲಿ ಸಂಪೂರ್ಣ ಬ್ಯಾಕ್‌ಗ್ರೌಂಡ್ ವಿಶ್ಲೇಷಣೆ (Background Analysis) ನಡೆಸುತ್ತಿದ್ದೇವೆ. ಅಂಕಿತಾ ಭಂಡಾರಿ ವಾಟ್ಸಾಪ್ ಚಾಟ್‌ಗಳು ಹೊರಬಿದ್ದಿರುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ," ಎಂದು ಎಸ್‌ಐಟಿ ಇನ್‌ಚಾರ್ಜ್ ಆಗಿರುವ ಡಿಐಜಿ (DIG) ಪಿಆರ್ ದೇವಿ ಮಾಹಿತಿ ನೀಡಿದ್ದಾರೆ. ಅಲ್ಲದೆ, "ನಾವು ಇನ್ನೂ ಸರಿಯಾದ ಮರಣೋತ್ತರ ಪರೀಕ್ಷೆಯ ವರದಿಯನ್ನು ಸ್ವೀಕರಿಸಿಲ್ಲ. ಆದರೆ ಇಂದು ಅದನ್ನು ಪಡೆಯುತ್ತೇವೆ" ಎಂದು ಡಿಐಜಿ ಹೇಳಿದರು.
ಅಂತಿಮ ಮರಣೋತ್ತರ ಪರೀಕ್ಷೆಯ ವರದಿಯು ಸಾರ್ವಜನಿಕವಾಗಿ ಲಭ್ಯವಾಗುವವರೆಗೆ ನಾವು ಅಂತಿಮ ಸಂಸ್ಕಾರ ಮಾಡುವುದಿಲ್ಲ ಎಂದು ಮೃತ ಯುವತಿ ಅಂಕಿತಾ ಭಂಡಾರಿ ಕುಟುಂಬದವರು ಹೇಳಿದ್ದಾರೆ. ಹಾಗೂ, ತ್ವರಿತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. ಶನಿವಾರ ಬೆಳಗ್ಗೆ ರಿಷಿಕೇಶದ ಚಿಲ್ಲಾ ಕಾಲುವೆಯಿಂದ ಅಂಕಿತಾ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ಸೆಕ್ಸ್ ನಿರಾಕರಿಸಿದ ರೆಸೆಪ್ಶನಿಸ್ಟ್ ಹತ್ಯೆ, ಪುತ್ರನ ಕರ್ಮಕಾಂಡಕ್ಕೆ ಬಿಜೆಪಿ ನಾಯಕನ ತಲೆದಂಡ!
ಇನ್ನು, ಅವಳ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡುವವರೆಗೆ ನಾವು ಅವಳ ಅಂತಿಮ ವಿಧಿಗಳನ್ನು ನಡೆಸುವುದಿಲ್ಲ. ನಾವು ಆಕೆಯ ತಾತ್ಕಾಲಿಕ ವರದಿಯಲ್ಲಿ ಅವಳನ್ನು ಹೊಡೆದು ನದಿಗೆ ಎಸೆಯಲಾಗಿದೆ ಎಂದು ನೋಡಿದ್ದೇವೆ. ಆದರೆ ನಾವು ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ" ಎಂದು ಅಂಕಿತಾ ಭಂಡಾರಿಯವರ ಸಹೋದರ.ಅಜಯ್ ಸಿಂಗ್ ಭಂಡಾರಿ ಹೇಳಿದ್ದಾರೆ.
murder case | We won't conduct her last rites until her post-mortem report is given. We saw in her provisional report that she was beaten up & was thrown in a river. But we're awaiting the final report: Ajay Singh Bhandari, brother of Ankita Bhandari pic.twitter.com/PfFi0FuQs9
— ANI UP/Uttarakhand (@ANINewsUP)