ಆನೇಕಲ್‌: ಡಬಲ್‌ ಮರ್ಡರ್‌ ಆರೋಪಿಯ ಕಾಲಿಗೆ ಗುಂಡು ಹಾಕಿದ ಕರ್ನಾಟಕ ಪೊಲೀಸ್‌!

Published : Nov 09, 2025, 11:54 AM IST
Anekal Double Murder Accused Shot On Legs

ಸಾರಾಂಶ

ಆನೇಕಲ್‌ನಲ್ಲಿ ಉದ್ಯಮಿ ಸೇರಿದಂತೆ ಇಬ್ಬರನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ ರವಿ ಪ್ರಸಾದ್ ರೆಡ್ಡಿ ಎಂಬಾತನೇ ಈ ಕೃತ್ಯ ಎಸಗಿದ್ದು, ಬಂಧನದ ವೇಳೆ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.

ಆನೇಕಲ್ (ನ.9): ಎರಡೇ ದಿನಗಳ ಒಳಗಾಗಿ ಎರಡು ಕೊಲೆ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸುವಲ್ಲಿ ಕರ್ನಾಟಕ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ತಿಂಗಳ 4 ರಂದು ಭೀಕರ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಅದಾದ ನಂತರ 6 ರಂದು ಉದ್ಯಮಿಯನ್ನು ಕಿಡ್ನಾಪ್‌ ಮಾಡಿ ಕೊಲೆ ಮಾಡಿದ್ದ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಉದ್ಯಮಿ ಬಾಲಪ್ಪ ಅಲಿಯಾಸ್‌ ಬಾಲಪ್ಪ ರೆಡ್ಡಿಯನ್ನು ಕಿಡ್ನಾಪ್‌ ಮಾಡಿ ಕೊಲೆ ಮಾಡಿದ್ದ.

ಈ ಕಿಡ್ನಾಪ್ ಅಂಡ್ ಮರ್ಡರ್ ಕೇಸ್ ಆರೋಪಿ ಮೇಲೆ ಹೆಬ್ಬಗೋಡಿ ಇನ್ಸ್ಪೆಕ್ಟರ್ ಸೋಮಶೇಖರ್ ಫೈರ್‌ ಮಾಡಿದ್ದಾರೆ. ಆರೋಪಿಯ ಎರಡು ಕಾಲಿಗೆ ನಿಖರವಾಗಿ ಗುಂಡು ಹೊಡೆದು ಬಂಧನ ಮಾಡಲಾಗಿದೆ. ಆಂದ್ರಪ್ರದೇಶ ಮೂಲದ ರವಿ ಪ್ರಸಾದ್ ರೆಡ್ಡಿ ಬಂಧನಕ್ಕೆ ಒಳಗಾಗಿರುವ ಆರೋಪಿ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಸ್ಮಶಾನದ ಬಳಿ ಶನಿವಾರ ರಾತ್ರಿ 10:30 ಸುಮಾರಿಗೆ ಘಟನೆ ನಡೆದಿದೆ.

ಜಿಗಣಿ ರಿಂಗ್‌ರೋಡ್‌ನಲ್ಲಿ ಕಿಡ್ನಾಪ್‌

ನ.6 ರಂದು ಹೆಬ್ಬಗೋಡಿ ಉದ್ಯಮಿ ಬಾಲಪ್ಪ ರೆಡ್ಡಿಯನ್ನು ರವಿಪ್ರಸಾದ್‌ ರೆಡ್ಡಿ ಜಿಗಣಿ ರಿಂಗ್‌ ರೋಡ್‌ನಲ್ಲಿ ಕಿಡ್ನ್ಯಾಪ್‌ ಮಾಡಿದ್ದ. ಆ ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ನೀಡದೇ ಇದ್ದಾಗ ಕಟಿಂಗ್‌ ಪ್ಲೇಯರ್‌ನಿಂದ ಕುತ್ತಿಗೆ ಸೀಳಿ ಆತನನ್ನು ಕೊಲೆ ಮಾಡಿದ್ದ ಬಳಿಕ ಶವವನ್ನು ತಮಿಳುನಾಡಿನ ಶಾಣಮಾವು ಕಾಡಿನಲ್ಲಿ ಎಸೆದಿದ್ದ,

ಅದಕ್ಕೂ ಮುನ್ನ ನ.4 ರಂದು ಕಿತ್ತಗಾನಹಳ್ಳಿಯ ಮಾದೇಶ ಎಂಬಾತನನ್ನು ಈತನೇ ಮನೆಯಲ್ಲಿ ಕೊಲೆ ಮಾಡಿದ್ದ. ಆ ವೇಳೆ ಚಾಕುವಿನಿಂದ ಆತನ ಕುತ್ತಿಗೆಯನ್ನು ಸೀಳಿದ್ದ.

ಟೆಕ್ನಿಕಲ್ ಎವಿಡೆನ್ಸ್ ಆಧರಿಸಿ ಆರೋಪಿ ರವಿ ಬಂಧನ ಮಾಡಲಾಗಿತ್ತು. ಬಂಧನದ ಬಳಿಕ ಸ್ಥಳ ಮಹಜರ್ ವೇಳೆ ಹೆಡ್ ಕಾನ್ಸ್‌ಟೇಬಲ್ ಆಶೋಕ್ ಮೇಲೆ ದಾಳಿ ಮಾಡಿದ್ದಾನೆ. ಈ ವೇಳೆ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಆತನಿಗೆ ಎಚ್ಚರಿಕೆ ನೀಡಲಾಗಿತ್ತು. ದಾಳಿ ನಿಲ್ಲಿಸದೇ ಇದ್ದಾಗ ಕಾಲಿಗೆ ಎರಡು ಸುತ್ತು ಗುಂಡು ಹೊಡೆದು ಬಂಧನ ಮಾಡಲಾಗಿದೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾರೀತ ರವಿಪ್ರಸಾದ್ ರೆಡ್ಡಿ

ಆರೋಪಿ ರವಿಪ್ರಸಾದ್ ರೆಡ್ಡಿ ಮೂಲತಃ ಆಂಧ್ರ ಪ್ರದೇಶದ ಗೊರಂಟ್ಲಾ ಹಳ್ಳಯವನು. ಕಾಂಪೋಸ್ಟ್ ನಲ್ಲಿ ಕಾರ್ಖಾನೆಯಲ್ಲಿ ಏಳು ಕೋಟಿ ಹಣ ಸಂಪಾದನೆ ಮಾಡಿದ್ದ. ಮಾದೇಶ ಚೀಟಿ ಕಸ್ಟಮರ್ ಅದರೊಂದಿಗೆ ಮೀಟರ್ ಬಡ್ಡಿ ಮಾಡುತ್ತಿದ್ದ. ಬಾಲಪ್ಪ ಕೂಡ ಚೀಟಿ ಹಾಕಿದ್ದ. ಕೊರೊನಾ ಸಂದರ್ಭದಲ್ಲಿ ಚೀಟಿ ಗ್ರಾಹಕರು ಸಾವು ಕಂಡಿದ್ದರು. ಐದು ಕೋಟಿ ಹಣ ಇದ್ದಂತಹವನು ದಿನಸಿಕೊಳ್ಳೊವಷ್ಟು ಹಣ ಇಲ್ಲದೆ ಬರ್ಬಾದ್‌ ಆಗಿದ್ದ. ಹಣ ಕೇಳಿದರೆ ಬೆದರಿಕೆ ಹಾಕುತ್ತಿದ್ದ. ಎರಡು ಕೋಟಿ ಹಣ ಕೈಯಲ್ಲಿ ಇದ್ದಾಗ ಬಾಲಪ್ಪನ ಮನೆಗೆ ಬಾಡಿಗೆಗೆ ಬಂದಿದ್ದ. ಕೊನೆಗೆ ಬಾಲಪ್ಪನ ಬಳಿ ಎರಡು ಅಂಗಡಿ ಬಾಡಿಗೆಗೆ ಪಡೆದುಕೊಂಡಿದ್ದ. ಇತ್ತ ಬಾಡಿಗೆ ಕೊಡಲು ಸಾಧ್ಯವಾಗದೆ ಅಂಗಡಿ ಖಾಲಿ ಮಾಡಿ ಆರೋಪಿ ಬೀದಿ ಪಾಲಾಗಿದ್ದ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ