ಲಿಫ್ಟ್ ನಲ್ಲಿ ಅಪರಿಚಿತನಿಗೆ ಮುತ್ತಿಟ್ಟ ವಿವಾಹಿತ ಮಹಿಳೆ, ವೈರಲ್ ಆಗ್ತಿದ್ದಂತೆ ಠಾಣೆಗೆ ಓಡಿದ್ಲು

Published : Mar 14, 2026, 12:21 PM IST
Andheri Lift CCTV

ಸಾರಾಂಶ

Andheri Lift CCTV : ಲಿಫ್ಟ್ ನಲ್ಲಿನ ಖಾಸಗಿ ದೃಶ್ಯ ಸೊಸೈಟಿಯಲ್ಲಿ ವೈರಲ್ ಆಗಿದೆ. ಇದ್ರಿಂದ ನೋವುಂಡ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ನ್ಯಾಯಕ್ಕಾಗಿ ಪೊಲೀಸರಿಗೆ ಮನವಿ ಮಾಡಿದ್ದಾಳೆ. 

ಮುಂಬೈನ ಅಂಧೇರಿಯ ಅಪಾರ್ಟ್ ಮೆಂಟ್ ಲಿಫ್ಟ್ನಲ್ಲಿ ನಡೆದ ಖಾಸಗಿ ಘಟನೆಯೊಂದು ಪೊಲೀಸ್ ಪ್ರಕರಣವಾಗಿ ಬದಲಾಗಿದೆ. ಸುಮಾರು ಮೂರು ತಿಂಗಳ ನಂತ್ರ ಸಿಸಿಟಿವಿ ದೃಶ್ಯ ವೈರಲ್ ಆಗಿದೆ. ಇದನ್ನು ನೋಡಿದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಲಿಫ್ಟ್ (Lift) ನಲ್ಲಿ ನಡೆದಿದ್ದೇನು?

36 ವರ್ಷದ ಮಹಿಳೆ ಹೌಸಿಂಗ್ ಸೊಸೈಟಿಯಲ್ಲಿ ವಾಸವಾಗಿದ್ದಾಳೆ. ಇಬ್ಬರು ಮಕ್ಕಳು, ಪತಿ ಇರುವ ಮಹಿಳೆಗೆ ಸಿಸಿಟಿವಿ ದೃಶ್ಯ ಈಗ ಕಂಟಕವಾಗಿದೆ. ಮೂರು ತಿಂಗಳ ಹಿಂದೆ ನಡೆದ ಘಟನೆಯೊಂದು ಆಕೆಯನ್ನು ತಲೆ ತಗ್ಗಿಸುವಂತೆ ಮಾಡಿದೆ. ಸೊಸೈಟಿಯ ಎಲ್ಲರೂ ಆಕೆ ಬಗ್ಗೆ ಮಾತನಾಡ್ತಿದ್ದಾರೆ. ಆಕೆಯನ್ನು ಅಪಹಾಸ್ಯ ಮಾಡ್ತಿದ್ದಾರೆ. ವಿಡಿಯೋ ಕ್ಲಿಪ್ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದೆ. ಇದ್ರಿಂದ ಬೇಸರಗೊಂಡಿರುವ ಮಹಿಳೆ ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾಳೆ. ಸಿಸಿಟಿವಿ ದೃಶ್ಯಾವಳಿಯನ್ನು ವೈರಲ್ ಮಾಡಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ. ಸಕಿನಾಕಾ ಪೊಲೀಸ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

murder case : ಅತ್ತಿಗೆ ಮೈದುನನ ಪ್ರೇಮದಾಟ, ಅಡ್ಡಿಯಾದ ಅಮ್ಮ ಸೇರಿದ್ಲು ಯಮನ ಪಾದ

ಮೂರು ತಿಂಗಳ ಹಿಂದೆ ಮಹಿಳೆ ಮನೆಗೆ ವಾಪಸ್ ಆಗುವ ಸಮಯದಲ್ಲಿ ಲಿಫ್ಟ್ ಹತ್ತಿದ್ದಾಳೆ. ಈ ಟೈಂನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಲಿಫ್ಟ್ ಒಳಗೆ ಬಂದಿದ್ದಾನೆ. ಇಬ್ಬರು ಪರಸ್ಪರ ಆಕರ್ಷಿತರಾಗಿದ್ದು, ಇಬ್ಬರು ಲಿಫ್ಟ್ ನಲ್ಲಿ ಮೈಮರೆತಿದ್ದಾರೆ. ಇವರಿಬ್ಬರ ಕಿಸ್ಸಿಂಗ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆ ಲಿಫ್ಟ್ ನಲ್ಲಿ ಸಿಸಿಟಿವಿ ಇರೋದನ್ನು ಮರೆತಿದ್ದಳು.

ಮೂರು ತಿಂಗಳ ನಂತ್ರ ಮಾರ್ಕೆಟ್ ಗೆ ಹೋದಾಗ ಮೂವರು ಮಹಿಳೆಯರು ಮಾತನಾಡ್ತಿರುವ ವಿಷ್ಯ ಕಿವಿಗೆ ಬಿದ್ದಿದೆ. ಲಿಫ್ಟ್ ನಲ್ಲಿದ್ದ ಮಹಿಳೆ ಇವಳೇ ಅಲ್ವಾ ಅಂತ ಮಾತನಾಡಿಕೊಂಡಿದ್ದಾರೆ. ಯುವತಿಯೊಬ್ಬಳು, ಮಹಿಳೆಗೆ ಸಿಸಿಟಿವಿ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದ್ರಿಂದ ಮಹಿಳೆಗೆ ಅವಮಾನವಾಗಿದೆ. ಪ್ರತಿಯೊಬ್ಬರೂ ಮಹಿಳೆ ಬಗ್ಗೆ ಮಾತನಾಡ್ತಿದ್ದು, ಸೊಸೈಟಿಯಲ್ಲಿ ತಲೆ ಎತ್ತಿ ನಡೆಯೋದು ಕಷ್ಟವಾಗಿದೆ. ಸಿಸಿಟಿವಿ ದೃಶ್ಯವನ್ನು ವೈರಲ್ ಮಾಡಿದವರು ಯಾರು ಎನ್ನುವ ಪ್ರಶ್ನೆ ಈಗ ಶುರುವಾಗಿದೆ.

ತನಿಖೆಯಲ್ಲಿ, ಸಿಸಿಟಿವಿ ದೃಶ್ಯಾವಳಿಗಳನ್ನು ಬ್ಯಾಕಪ್ ಸರ್ವರ್ನಿಂದ ಹೊರತೆಗೆಯಲಾಗಿದೆ ಎಂಬುದು ಗೊತ್ತಾಗಿದೆ. ಹೌಸಿಂಗ್ ಸೊಸೈಟಿಯೊಳಗಿನ ಅನುಮಾನಾಸ್ಪದ ಘಟನೆ ನಡೆದಿದ್ದು, ಸೊಸೈಟಿ ಹೊರಗೆ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಸಿಸಿಟಿವಿ ರೆಕಾರ್ಡಿಂಗ್ ಗಳನ್ನು ಹೀಗೆ ತೆಗೆಯುವಂತಿಲ್ಲ. ಇದು ಗೌಪ್ಯತೆಯ ಗಂಭೀರ ಉಲ್ಲಂಘನೆಯಾಗುತ್ತದೆ. ಇದು ಕ್ರಿಮಿನಲ್ ಅಪರಾಧವಾಗಬಹುದು. ಹಾಗಾಗಿ ಪೊಲೀಸರು ಈಗ ದೃಶ್ಯಾವಳಿಗಳನ್ನು ಹೇಗೆ ಪಡೆಯಲಾಗಿದೆ, ಹೇಗೆ ನಕಲು ಮಾಡಲಾಗಿದೆ ಮತ್ತು ಎಲ್ಲೆಲ್ಲ ಪ್ರಸಾರ ಮಾಡಲಾಗಿದೆ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದ್ರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡ್ತಿದ್ದಾರೆ.

Bengaluru: ಮದ್ವೆಯಾಗಿರೋ ವಿಷ್ಯ ಗೊತ್ತಿದ್ರೂ ಮನೆ ಬಿಟ್ಟು ಬಂದಿದ್ದ ಪ್ರೇಯಸಿ ಉಸಿರು ನಿಲ್ಲಿಸಿದ ಅಯ್ಯಪ್ಪ

ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗ್ತಿದ್ದಂತೆ ಜನರು ಕಮೆಂಟ್ ಶುರು ಮಾಡಿದ್ದಾರೆ. ಲಿಫ್ಟ್ ಖಾಸಗಿ ಸ್ಥಳವಲ್ಲ, ಅಲ್ಲಿ ವಿವಾಹಿತ ಮಹಿಳೆ ಇಂಥ ಕೆಲ್ಸ ಮಾಡೋದು ಎಷ್ಟು ಸರಿ ಎನ್ನುವ ಪ್ರಶ್ನೆಗಳು ಎದ್ದಿವೆ. ಮತ್ತೆ ಕೆಲವರು ಸಿಸಿಟಿವಿ ದೃಶ್ಯಗಳನ್ನು ಹೀಗೆ ವೈರಲ್ ಮಾಡೋದು ಸೂಕ್ತವಲ್ಲ, ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ ಅಂತ ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

murder case : ಅತ್ತಿಗೆ ಮೈದುನನ ಪ್ರೇಮದಾಟ, ಅಡ್ಡಿಯಾದ ಅಮ್ಮ ಸೇರಿದ್ಲು ಯಮನ ಪಾದ
Bengaluru: ಮದ್ವೆಯಾಗಿರೋ ವಿಷ್ಯ ಗೊತ್ತಿದ್ರೂ ಮನೆ ಬಿಟ್ಟು ಬಂದಿದ್ದ ಪ್ರೇಯಸಿ ಉಸಿರು ನಿಲ್ಲಿಸಿದ ಅಯ್ಯಪ್ಪ