ಕುಡಿದ ಮತ್ತಿನಲ್ಲಿ ಯುವಕರ ಪುಂಡಾಟ; ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿಗಳ ಮೆಲೆ ಹಲ್ಲೆ!

By Ravi Janekal  |  First Published Jul 6, 2023, 3:00 PM IST

ಕುಡಿದ ಮತ್ತಿನಲ್ಲಿ ಯುವಕರ ಗುಂಪೊಂದು ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ  ಮಾಡಿದ ಘಟನೆ ಹಾಸನ ಜಿಲ್ಲೆ ಆಲೂರಿನ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ‌ ನಿಲಯದಲ್ಲಿ ನಡೆದಿದೆ.


ಹಾಸನ (ಜು.6) : ಯುವಕರ ಗುಂಪೊಂದು ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ  ಮಾಡಿದ ಘಟನೆ ಹಾಸನ ಜಿಲ್ಲೆ ಆಲೂರಿನ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ‌ ನಿಲಯದಲ್ಲಿ ನಡೆದಿದೆ.

ಕೈಯಲ್ಲಿ ಕ್ರಿಕೆಟ್ ಬ್ಯಾಟ್, ವಿಕೆಟ್ ಹಾಗೂ ಪೀಠೋಪಕರಣಗಳಿಂದ ಥೇಟ್ ರೌಡಿಗಳು ವರ್ತಿಸುವಂತತೆ ವರ್ತಿಸಿದ್ದಾರೆ. ವಸತಿ ನಿಲಯದ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿರೋ ಗುಂಪು. ವಿದ್ಯಾರ್ಥಿಗಳು ಕೆಳಕ್ಕೆ ಬಿದ್ದರೂ ಕ್ರೂರವಾಗಿ ಹಲ್ಲೆ ಮಾಡಿರೋ ಪುಂಡರ ಗ್ಯಾಂಗ್.  

Latest Videos

undefined

ಈ ಘಟನೆಗೆ ಮೊದಲು ಕಾಲೇಜು ವಿದ್ಯಾರ್ಥಿಗಳೊಂದಿಗೆ ಗಲಾಟೆ ಮಾಡಿಕೊಮಡಿದ್ದಾರೆ.  ಆಲೂರಿನ ಬಸ್ ನಿಲ್ದಾಣದ ಬಳಿ ಗಲಾಟೆ ಮಾಡಿಕೊಂಡಿರೋ ಗುಂಪು ಅಲ್ಲಿಯೂ ಹೊಡೆದಾಡಿಕೊಂಡಿದ್ದಾರೆ. ಬಳಿಕ ವಸತಿ ನಿಲಯದ ಹಾಸ್ಟೆಲ್ ನುಗ್ಗಿ ವಿದ್ಯಾರ್ಥಿಗಳಿಗೆ ಬ್ಯಾಟ್, ವಿಕೆಟ್‌ಗಳಿಂದ ಮನಬಂದಂಥೆ ಥಳಿಸಿದ್ದಾರೆ. ಅಷ್ಟಕ್ಕೂ ಆಲದೆ ವಿದ್ಯಾರ್ಥಿ ನಿಲಯದ ಪೀಠೋಪಕರಣಗಳನ್ನ ಒಡೆದುಹಾಕಿರುವ ಪುಂಡರು. ಸದ್ಯ ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ವಿದ್ಯಾರ್ಥಿಳನ್ನು ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 

ಮೇಲ್ಜಾತಿಯವರಿಗೆ ಬುದ್ಧಿ ಹೇಳಿದ ದಲಿತ ಯುವಕ, ಮರುದಿನವೇ ಶವವಾಗಿ ಪತ್ತೆ

ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ 

ತ್ಯಾಜ್ಯ ವಿಲೇವಾರಿ ವಾಹನ ಚಾಲಕನ ಮೇಲೆ ಹಲ್ಲೆ

ಬೆಂಗಳೂರು:  ಮೂರು ದಿನಗಳ ಹಿಂದೆ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ವಾಹನದ ಚಾಲಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಮಮೂರ್ತಿ, ರಿತಿಕ್‌, ಮೋಹನ್‌ ಹಾಗೂ ಅಪ್ತಾಪ್ತ ಬಾಲಕ ಬಂಧಿತರಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಜು.2 ರಂದು ಬಿಬಿಎಂಪಿ ಕಸದ ವಾಹನ ಚಾಲಕ ಕಸ್ತೂರಿ ಬಾ ನಗರದ ಸುರೇಶ್‌ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

 

ಹುಡುಗರೇ ಗೆಳತಿ ಭೇಟಿಗೆ ತೆರಳುವ ಮುನ್ನ ಸಾವಿರ ಬಾರಿ ಯೋಚಿಸಿ: ಇಲ್ಲೇನಾಯ್ತು ನೋಡಿ

ಹಲವು ವರ್ಷಗಳಿಂದ ಕಸ್ತೂರಿ ನಗರದ ಸುರೇಶ್‌ ಹಾಗೂ ರಾಮಮೂರ್ತಿ ಸ್ನೇಹಿತರಾಗಿದ್ದು, ಇತ್ತೀಚಿಗೆ ಕ್ಷುಲ್ಲಕ ಕಾರಣಕ್ಕೆ ಈ ಗೆಳೆಯರ ಮಧ್ಯೆ ಮನಸ್ತಾಪವಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ಸಹಚರರ ಜತೆ ಸೇರಿ ಸುರೇಶ್‌ ಮೇಲೆ ಆತ ಹಲ್ಲೆ ನಡೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

click me!